ಮಾಲಿನ್ಯ ಮಂಡಳಿ ನೇಮಕಾತಿ : 26 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ
ನವದೆಹಲಿ, ಏಪ್ರಿಲ್ 25: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತನ್ನ 2019ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆ ಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಅರ್ಹ, ಆಸಕ್ತರು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಸಂಸ್ಥೆ ಹೆಸರು: Central Pollution Control Board
ಹುದ್ದೆ ಹೆಸರು : ಜ್ಯೂನಿಯರ್ ರಿಸರ್ಚ್ ಫೆಲೋ
ಒಟ್ಟು ಹುದ್ದೆ: 26
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಾಕ್ ಇನ್ ಸಂದರ್ಶನ : 03.05.2019

ವಿದ್ಯಾರ್ಹತೆ : ರಸಾಯನಶಾಸ್ತ್ರ, ಜೀವವಿಜ್ಞಾನ, ಪರಿಸರ ವಿಜ್ಞಾನ ಇನ್ನಿತರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ. ಸಿವಿಎಲ್, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ನಲ್ಲಿ ಇಂಜಿನಿಯರಿಂಗ್, ಗೇಟ್ ಪರೀಕ್ಷೆ ಅರ್ಹತೆ.
ವಯೋಮಿತಿ : ಗರಿಷ್ಠ 28 ವರ್ಷ, ಎಸ್ ಸಿ/ ಎಸ್ಟಿ/ ಒಬಿಸಿ/ ಮಹಿಳೆ/ ದಿವ್ಯಾಂಗ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ನೇಮಕಾತಿ ಪ್ರಕ್ರಿಯೆ: ವಾಕ್ ಇನ್ ಸಂದರ್ಶನ ಮೂಲಕ ನೇಮಕ.
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.
ವಾಕ್ ಇನ್ ಸಂದರ್ಶನ ಹಾಗೂ ದಿನಾಂಕ : 3 ಮೇ 2019, 9.30 AM
ವಾಕ್ ಇನ್ ಸಂದರ್ಶನ ಸ್ಥಳ : ಸಿಪಿಸಿಬಿ ಕೇಂದ್ರ ಕಚೇರಿ, ದೆಹಲಿ.
ವಾಕ್ ಇನ್ ಸಂದರ್ಶನಕ್ಕೆ ಬೇಕಾದ ದಾಖಲೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications