Bank Recruitment 2024: ಸೆಂಟ್ರಲ್ ಬ್ಯಾಂಕನಲ್ಲಿವೆ 13 ಖಾಲಿ ಉದ್ಯೋಗ, ಲಿಖಿತ ಪರೀಕ್ಷೆ ಇಲ್ಲದೇ ನೇಮಕ
ಬೆಂಗಳೂರು, ಸೆಪ್ಟಂಬರ್ 07: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೀವು ಈ ಬ್ಯಾಂಕಿನಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಳ್ಳಬಹುದಾಗಿದೆ.
ಬ್ಯಾಂಕ್ ಉದ್ಯೋಗಗಳು ಪಡೆಯುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ದಲ್ಲಿ ಖಾಲಿ ಇರುವ 13 ವಿವಿಧ ಹುದ್ದೆಗಳಿಗೆ ಅರ್ಜಿಗಳಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ರಂದು ಕೊನೆಯ ದಿನವಾಗಿದೆ. ಅಲ್ಲಿಯವರೆಗೂ ಕಾಯದೇ ತಕ್ಷಣವೇ ಅರ್ಜಿ ಸಲ್ಲಿಸಬೇಕು.

ಪ್ರಸಕ್ತ ಸಾಲಿನಲ್ಲಿ ಸೆಂಟ್ರಲ್ ಬ್ಯಾಂಕ್ ನಲ್ಲಿ ಬ್ಯಾಂಕ್ ಫ್ಯಾಕಲ್ಟಿ, ಆಫೀಸ್ ಅಸಿಸ್ಟೆಂಟ್, ಅಟೆಂಡರ್ ಮತ್ತು ವಾಚ್‌ಮ್ಯಾನ್/ಗಾರ್ಡನರ್ ಹುದ್ದೆಗಳಿಗೆ ಖಾಲಿ ಇವೆ. ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಲಿಂಕ್ centralbankofindia.co.in ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.
ಸೆಂಟ್ರಲ್ ಬ್ಯಾಂಕ್‌ನ ನೇಮಕಾತಿ ಹೇಗಿರುತ್ತದೆ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ, ಮುಖ್ಯವಾಗಿ ಮಾಸಿಕ ವೇತನ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದಿದೆ.

ಬ್ಯಾಂಕ್ ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ ಹೆಸರು: ಸೆಂಟ್ರಲ್ ಬ್ಯಾಂಕ್
ಒಟ್ಟು ಹುದ್ದೆಗಳು: 13
ಗರಿಷ್ಠ ಮಾಸಿಕ ವೇತನ: 30000
ಗರಿಷ್ಠ ವಯಸ್ಸಿನ ಮಿತಿ: 40
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 15
ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಈ ಬ್ಯಾಂಕ್‌ನಲ್ಲಿ ಅಧ್ಯಾಪಕರು 3 ಹುದ್ದೆ, ಕಚೇರಿ ಸಹಾಯಕ 5 ಹುದ್ದೆ, ಅಟೆಂಡೆಂಟ್ 3 ಹುದ್ದೆ, ಚೌಕಿದಾರ್ 2 ಹುದ್ದೆಗಳು ಸೇರಿ ಒಟ್ಟು 13 ಹುದ್ದೆಗಳು ಈ ಬ್ಯಾಂಕ್‌ನಲ್ಲಿ ಖಾಲಿ ಇವೆ ಎಂದು ಬ್ಯಾಂಕ್ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಿದ್ಯಾರ್ಹತೆ ಏನಿರಬೇಕು?
ಈ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಮ್ಮ ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಯಾವುದೇ ವಿಷಯದಲ್ಲಾದರೂ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಕಂಪ್ಯೂಟರ್ ನಲ್ಲಿ ಉತ್ತಮ ಜ್ಞಾನವನ್ನು ಹೊಂದಿರಬೇಕು. ಅಭ್ಯರ್ಥಿಗೆ ಸ್ಥಳೀಯ ಭಾಷೆ ಸುಲಲಿತವಾಗಿ ಮಾತನಾಡಲು ಬರುತ್ತಿರಬೇಕು. ಉತ್ತಮ ಸಂವಹನ ಮಾಡುವ ಕೌಶಲ್ಯದ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಗೊತ್ತಿರಬೇಕು ಎಂದು ತಿಳಿಸಲಾಗಿದೆ.
ಅದೇ ರೀತಿ ಕಂಪ್ಯೂಟರ್ ಸೈನ್ಸ್ ಪದವಿ, ಅಕೌಂಟೆಂಟ್ ಜ್ಞಾನ, ಟ್ಯಾಲಿ ಗೊತ್ತಿರಬೇಕು.ಇಲ್ಲಿ ಏಳನೇ ತರಗತಿ ಉತ್ತೀಣದಿಂದ ಹಿಡಿದು ಪದವಿವರೆಗಿನವರಿಗೆ ಆಹಾಯ ಅರ್ಹತೆಗೆ ತಕ್ಕ ಕೆಲಸ ಇದೆ. ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ
ಸೆಂಟ್ರಲ್ ಬ್ಯಾಂಕ್‌ನ ನೇಮಕಾತಿ ಪ್ರಕಾರ, ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಹಾಗೂ ಗರಿಷ್ಠ ವಯಸ್ಸಿನ ಮಿತಿ 40 ವರ್ಷ ಇರಬೇಕು. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಮಾಸಿಕ ವೇತನ ವಿವರ
ಈ ಸೆಂಟ್ರಲ್ ಬ್ಯಾಂಕ್ ಉದ್ಯೋಗ ಆಯ್ಕೆ ಆದವರಿಗೆ ಅಧ್ಯಾಪಕರ ಹುದ್ದೆಗೆ ಮಾಸಿಕ 30000 ರೂ, ಕಚೇರಿ ಸಹಾಯಕ ಹುದ್ದೆಗೆ 20000 ರೂ. ಅಟೆಂಡೆಂಟ್ ಹುದ್ದೆಗೆ 14000 ರೂ. ಮತ್ತು ಚೌಕಿದಾರ್/ತೋಟಗಾರ ಹುದ್ದೆಗೆ 12000 ಮಾಸಿಕ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು ವೆಬ್‌ಸೈಟ್ ಗೆ ಭೇಟಿ ಕೊಡಿ.












Click it and Unblock the Notifications