ಕೆನರಾಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಹಾಕಿ
ಕೆನರಾ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕೋರಿ ಪ್ರಕಟಣೆ ಹೊರಡಿಸಲಾಗಿದೆ. ರಿಸ್ಕ್ ಆಫೀಸರ್, ಟೆಕ್ನಾಲಜಿ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 10, 2017 ಕೊನೆ ದಿನಾಂಕವಾಗಿದೆ.
ಬೆಂಗಳೂರು, ಫೆಬ್ರವರಿ 26: ಕೆನರಾ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕೋರಿ ಪ್ರಕಟಣೆ ಹೊರಡಿಸಲಾಗಿದೆ. ರಿಸ್ಕ್ ಆಫೀಸರ್, ಟೆಕ್ನಾಲಜಿ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 10, 2017 ಕೊನೆ ದಿನಾಂಕವಾಗಿದೆ.
ಹುದ್ದೆಗಳು : 4
1. ಎಕಾನಮಿಸ್ಟ್ : 01
2. ಹಿರಿಯ ರಿಸ್ಕ್ ಆಫೀಸರ್ : 01
3. ಮುಖ್ಯ ಇನ್ವೆಸ್ಟ್ ಮೆಂಟ್ ಆಫೀಸರ್: 01
4. ಮುಖ್ಯ ಟೆಕ್ನಾಲಜಿ ಆಫೀಸರ್ (ಸಿಟಿಒ) : 01
ವಯೋಮಿತಿ: 01/10/2016ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗೆ 40 ವರ್ಷ ಮೀರಿರಬಾರದು. ಎಸ್ ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ. [ಕೆನರಾಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ]

ವಿದ್ಯಾರ್ಹತೆ: ಕ್ರಮ ಸಂಖ್ಯೆ 1 ಹಾಗೂ 2 ಹುದ್ದೆಗೆ ಎಂಬಿಎ ಪಿಜಿ ಡಿಬಿಎ.. ಇತ್ಯಾದಿ, ಕ್ರಮ ಸಂಖ್ಯೆ 3 ಸ್ನಾತಕೋತ್ತರ ಪದವಿ, ಸಿಎ, ಸಿಎಫ್ಎ, ಸಿಎಸ್,ಬಿಇ, ಎಂಬಿಎ, ಕ್ರಮಸಂಖ್ಯೆ 4: ಕಂಪ್ಯೂಟರ್ಸ್ ನಲ್ಲಿ ಪದವಿ
ಶುಲ್ಕ: ಹುದ್ದೆ 1ಕ್ಕೆ 600 ರು,ಎಸ್ಸಿೆ ಎಸ್ಟಿಗಳಿಗೆ 100 ರು, ಹುದ್ದೆ 2ಕ್ಕೆ 1000 ರು : ಡಿಮ್ಯಾಂಡ್ ಡ್ರಾಫ್ಟ್ ಗಳನ್ನು "Canbank Venture Capital Fund Ltd" ಹೆಸರಿನಲ್ಲಿ ತೆಗೆಸಿಕೊಂಡು ಪಾವತಿಸಬಹುದು.
ಅರ್ಜಿ ಸಲ್ಲಿಸುವ ಬಗೆ: ತುಂಬಿದ ಅರ್ಜಿ ಹಾಗೂ ಶುಲ್ಕದ ಡಿಡಿ ಜೊತೆಗೆ Canara Bank, Recruitment Cell, Human Resources Wing, Head Office, 113/1, Jeevan Prakash Building, J C Road, Bangalore-560002, Karnataka ವಿಳಾಸಕ್ಕೆ ಕಳಿಸಬೇಕು.
ಹೆಚ್ಚಿನ ವಿವರಗಳು ಜಾಹೀರಾತು ಡೌನ್ ಲೋಡ್ ಮಾಡಿಕೊಳ್ಳಿ ಹುದ್ದೆ -1
ಹೆಚ್ಚಿನ ವಿವರಗಳು ಜಾಹೀರಾತು ಡೌನ್ ಲೋಡ್ ಮಾಡಿಕೊಳ್ಳಿ ಹುದ್ದೆ -2 ರಿಂದ 4
ಅರ್ಜಿ ಕಳಿಸಲು ಕೊನೆ ದಿನಾಂಕ : 10/03/205, ಸಂಜೆ 5 ಗಂಟೆ
(ಒನ್ಇಂಡಿಯಾ ಸುದ್ದಿ)
Download











Click it and Unblock the Notifications