ಕೊಪ್ಪಳ; ಡಿಸೆಂಬರ್ 10ರಂದು ಕ್ಯಾಂಪಸ್ ಸಂದರ್ಶನ

ಕೊಪ್ಪಳ, ಡಿಸೆಂಬರ್ 08: ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಸೆಂಬರ್ 10ರಂದು ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿನ Autoliv India Pvt. Ltd ಅವರು ಅಂತರಾಷ್ಟ್ರೀಯ ಕಂಪನಿಗಾಗಿ Reach Management Solutions, Bengaluru ಅವರ ವತಿಯಿಂದ ಕ್ಯಾಂಪಸ್ ಸಂದರ್ಶನನ್ನು ಆಯೋಜನೆ ಮಾಡಿದ್ದಾರೆ.

ಡಿಸೆಂಬರ್ 10ರಂದು ಬೆಳಗ್ಗೆ 10 ಗಂಟೆಗೆ ಕ್ಯಾಂಪಸ್ ಸಂದರ್ಶನ ಆರಂಭವಾಗಲಿದೆ. ಸಂದರ್ಶನದಲ್ಲಿ ಐಟಿಐ ಪಾಸ್, ಐಟಿಐ 2ನೇ ವರ್ಷದ ಪರೀಕ್ಷೆ ತೆಗೆದುಕೊಳ್ಳುತ್ತಿರುವವರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

Campus Interview In Koppal On December 10

ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿ ವತಿಯಿಂದ ಯಾವುದೇ ಟ್ರೇಡ್‌ನ ಐಟಿಐ (ಫ್ರೆಶರ್) ಅಭ್ಯರ್ಥಿಗಳಿಗೆ ಮಾಸಿಕ ವೇತನ 13 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಪಿಎಫ್, ಇಎಸ್‌ಐ, ಬೋನಸ್, ಇನ್ಸೆಂಟಿವ್, ಓಟಿ, ಕ್ಯಾಂಟೀನ್, ಸಮವಸ್ತ್ರ, ಸಾರಿಗೆ, ವೈದ್ಯಕೀಯ ಸೌಲಭ್ಯ, ವಿಮಾ ಸೌಲಭ್ಯಗಳಿವೆ.

ಆಸಕ್ತ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದ ಸದುಪಯೋಗ ಪಡೆದುಕೊಳ್ಳಬೇಕು. ಹಾಜರಾಗುವಾಗ ಅಗತ್ಯ ದಾಖಲೆಗಳನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+