Anganawadi Recruitment: ಈ ಜಿಲ್ಲೆಯ 313 ಹುದ್ದೆಗಳಿಗೆ ಅರ್ಹರು ಅರ್ಜಿ ಸಲ್ಲಿಸಿ, ವಿವರ
ಬೆಳಗಾವಿ, ಜುಲೈ 22: ಬೆಳಗಾವಿಯ ಜಿಲ್ಲಾ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೂರಾರು ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿವೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತನ್ನಲ್ಲಿ ಖಾಲಿ ಇರುವ ಒಟ್ಟು 313 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಕಳುಹಿಸಬೇಕು. ಅರ್ಜಿ ಸಲ್ಲಿಕೆ ಮೊದಲು ಒಮ್ಮೆ ಅಧಿಸೂಚನೆ ಓದಿಕೊಳ್ಳಿ. ಇಲ್ಲವಾದರೆ ಈ ಕೆಳಗೆ ನೀಡಲಾಗಿರುವ ಹುದ್ದೆಗೆ ಸಂಬಂಧಿಸಿದ ವೇತನ ವಿವರ, ಅರ್ಜಿ ಸಲ್ಲಿಕೆ ವಿಧಾನ, ಅಭ್ಯರ್ಥಿಗಳ ವಿದ್ಯಾರ್ಹತೆ, ಅರ್ಜಿ ಶುಲ್ಕ ಸೇರಿದಂತೆ ನೇಮಕಾತಿಯ ಪೂರ್ತಿ ಮಾಹಿತಿ ಇಲ್ಲಿ ನೋಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಪೂರ್ಣ ಮಾಹಿತಿ ಹೀಗಿದೆ
ಸಂಸ್ಥೆ ಹೆಸರು: ಜಿಲ್ಲಾ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ
ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು
ಖಾಲಿ ಹುದ್ದೆಗಳು: ಒಟ್ಟು 313
ಅಂಗನವಾಡಿ ಕಾರ್ಯಕರ್ತೆ ಹುದ್ದೆ- 61
ಅಂಗನವಾಡಿ ಸಹಾಯಕಿ ಹುದ್ದೆ - 252
ಗರಿಷ್ಠ ವಯಸ್ಸು: 35
ಪೋಸ್ಟಿಂಗ್: ಬೆಳಗಾವಿ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಆಗಸ್ಟ್ 04
ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC, 12ನೇ ತರಗತಿ, ಡಿಪ್ಲೊಮಾ ಉತ್ತೀರ್ಣವಾಗಿರಬೇಕು. ಇನ್ನೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸಾಗಿರಬೇಕು ಎಂದು ಇಲಾಖೆ ತಿಳಿಸಿದೆ.

ವಯಸ್ಸಿನ ಮಿತಿ ಮಾಹಿತಿ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಅರ್ಜಿ ಶುಲ್ಕ, ವೇತನ ವಿವರ
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ, ಬದಲಾಗಿ ನಿಯಮಾನುಸಾರ ಮಾಸಿಕ ವೇತನ ನೀಡಲಾಗುವುದು ಎಂದು ಇಲಾಖೆ ಹೇಳಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳ ಆಯ್ಕೆಯನ್ನು ಇಲಾಖೆಯ ಅಧಿಕಾರಿಗಳು ಮೆರಿಟ್ ಲಿಸ್ಟ್ ಆಧಾರದಲ್ಲಿ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಅಭ್ಯರ್ಥಿಗಳಿಗೆ ಈ ಕ್ಷೇತ್ರದಲ್ಲಿ ಇರುವ ಅನುಭವ ಮತ್ತು ಕಾರ್ಯಕ್ಷಮತೆಯಯನ್ನು ಪರಿಗಣಿಸಿಮಾಸಿಕ ವೇತನ ನೀಡಲಾಗುವುದು. ಆಯ್ಕೆ ಆಗುವವರಿಗೆ ಬೆಳಗಾವಿ ಜಿಲ್ಲೆಯಲ್ಲಿಯೇ ಪೋಸ್ಟಿಂಗ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಸೂಕ್ತ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ (https://karnemakaone.kar.nic.in/abcd/home.aspx) ಮೇಲೆ ಕ್ಲಿಕ್ ಮಾಡಬೇಕು ಎಂದು ಇಲಾಖೆ ತಿಳಿಸಿದೆ.












Click it and Unblock the Notifications