ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಖಾಲಿ ಇದೆ

ಹೊಸಪೇಟೆ, ಡಿಸೆಂಬರ್ 14; ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿಯಿರುವ ಗ್ರಾಮ ಪಂಚಾಯಿತಿವಾರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಒಟ್ಟು 17 ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇವೆ. ಆಯಾ ತಾಲ್ಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಮಾಡಲಾಗುತ್ತದೆ.

Apply For Village Rehabilitation Workers Post At Vijayanagara

ಈ ಹುದ್ದೆಗಳು ಗೌರವಧನ ಆಧಾರಿತ ತಾತ್ಕಾಲಿಕ ಹುದ್ದೆಯಾಗಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 9 ಸಾವಿರ ರೂ. ನಿಗದಿ ಮಾಡಲಾಗಿದೆ. ವಯೋಮಿತಿ 18 ರಿಂದ 45 ವರ್ಷಗಳು.

ಅರ್ಜಿ ಸಲ್ಲಿಸುವವರು ಆಯಾ ಗ್ರಾಮ ಪಂಚಾಯಿತಿಯ ಸ್ಥಳೀಯ ವ್ಯಾಪ್ತಿಯಲ್ಲಿ ಇರಬೇಕು. ಎಸ್. ಎಸ್. ಎಲ್. ಸಿ. ಉತ್ತೀರ್ಣರಾಗಿರಬೇಕು. ವಿಕಲಚೇತನರು ಅರ್ಹರಿರುತ್ತಾರೆ. (ಕರ್ತವ್ಯ ನಿರ್ವಹಿಸಲು ಸಮರ್ಥರಿರುವ ವಿಕಲಚೇತನರು) ಒಂದು ವೇಳೆ ಎಸ್. ಎಸ್. ಎಲ್. ಸಿ. ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಅನುತ್ತೀರ್ಣರಾದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ಅಂಗವಿಕಲರಾಗಿರಬೇಕು, ಭಾಗಶ: ಅಂಧರು, ಭಾಗಶ: ಶ್ರವಣ ದೋಷವುಳ್ಳವರು, (ಮೈಲ್ಡ್ ಮತ್ತು ಮಾಡರೇಟ್) ಹಾಗೂ ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಬೇಕು. ಮೂರು ರೀತಿಯ ಅಂಗವಿಕಲರಿಗೆ ಸಮಾನವಾಗಿ ಆಯ್ಕೆ ಮಾಡಬೇಕು ಒಂದು ವರ್ಗದ ಅಂಗ ವಿಕಲರಿಗೆ ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು.

ಅಂಗವಿಕಲರ ಬಗ್ಗೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ, ಗುರುತಿನ ಚೀಟಿ ಹೊಂದಿರಬೇಕು. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಗೌರವಧನ ಅವಧಿ ಮುಂದುವರಿಸುವ ಬಗ್ಗೆ ಒಂದು ವರ್ಷದ ನಂತರ ಅವರ ಕಾರ್ಯ ವೈಖರಿ ನೋಡಿ ತೀರ್ಮಾನ ಕೈಗೊಳ್ಳಲಾಗುವುದು.

ಆಯ್ಕೆ ಮಾಡುವಾಗ ಸರ್ಕಾರ ನಿಗದಿ ಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು 'ಸಮರ್ಥಕ' ಎಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡುವುದು. ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರು ಕೆಲಸದಿಂದ ತೆಗೆದು ಹಾಕಬಹುದಾಗಿ, ಬಿಡುಗಡೆ ಮಾಡಬಹುದಾಗಿದೆ. ಖಾಯಂಗೊಳಿಸುವಂತೆ ಕೋರಲು ಅವಕಾಶವಿಲ್ಲ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9945252991, 9900890403, 9741185924, 9901182525, 8217626361 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಯಾವ-ಯಾವ ಗ್ರಾಮ ಪಂಚಾಯಿತಿ?; ಹೊಸಪೇಟೆ ತಾಲೂಕಿನ ನಾಗೇನಹಳ್ಳಿ, ಕಲ್ಲಳ್ಳಿ. ಹೂವಿನಹಡಗಲಿ ತಾಲೂಕಿನ ಬೀರಬ್ಬಿ, ಕೆ. ಅಯ್ಯನಹಳ್ಳಿ, ಕುರುವತ್ತಿ. ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲಕುದರೆ, ಗದಿಕೆರೆ, ವಲ್ಲಭಪುರ, ಮಾದೂರು.

ಕೂಡ್ಲಿಗಿ ತಾಲೂಕಿನ ಬಣವಿಕಲ್ಲು, ಹುರುಳಿಹಾಳ್, ಕಕ್ಕುಪ್ಪಿ. ಕೊಟ್ಟೂರು ತಾಲೂಕಿನ ನಿಂಬಳಗೆರೆ, ನಾಗರಕಟ್ಟೆ, ಚಿರಬಿ. ಹರಪನಹಳ್ಳಿ ತಾಲ್ಲೂಕಿನ ಕಡತಿ, ಲಕ್ಷ್ಮೀಪುರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+