ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ; ವಿವಿಧ ಹುದ್ದೆಗಳಿಗೆ ಜ.21ರ ತನಕ ಅರ್ಜಿ ಹಾಕಿ

|
Google Oneindia Kannada News

ಹೊಸಪೇಟೆ, ಜನವರಿ 15; ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸಂಘ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜನವರಿ 21ರ ತನಕ ಅರ್ಜಿ ಸಲ್ಲಿಸಬಹುದು.

ಎಸ್‍ಎನ್‍ಸಿಯು ವೈದ್ಯಾಧಿಕಾರಿ (2) ಹುದ್ದೆಗೆ ಎಂಬಿಬಿಎಸ್ ಆಗಿರುವವರು ಅರ್ಜಿ ಸಲ್ಲಿಸಬೇಕು. ಯುಪಿಹೆಚ್‍ಸಿ ವೈದ್ಯಾಧಿಕಾರಿಗಳ ಹುದ್ದೆ (3) ಎಂಬಿಬಿಎಸ್ ಪದವಿ ಹೊಂದಿರವವರು ಅರ್ಜಿ ಸಲ್ಲಿಸಬೇಕು.

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ, ಬೆಂಗಳೂರಿನಲ್ಲಿ ಕೆಲಸ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ, ಬೆಂಗಳೂರಿನಲ್ಲಿ ಕೆಲಸ

ಆರ್. ಬಿ. ಎಸ್.ಕೆ ವೈದ್ಯಾಧಿಕಾರಿಗಳು (3) ಹುದ್ದೆಗೆ ಎಂಬಿಬಿಎಸ್ ಅಥವಾ ಬಿಎಎಂಎಸ್ ಪದವಿ ಹೊಂದಿರುವವರು ಅರ್ಜಿ ಹಾಕಬಹುದು. ಆಯುಷ್ ವೈದ್ಯಾಧಿಕಾರಿ (2) ಹುದ್ದೆಗೆ ಬಿಎಎಂಎಸ್, ಎನ್‍ಹೆಚ್‍ಎಂಎಸ್, ಬಿಎನ್‍ವೈಎಸ್, ಬಿಯುಎಂಎಸ್ ಪದವಿ ಹೊಂದಿರುವವರು ಅರ್ಜಿ ಹಾಕಬಹುದು.

ಕರ್ನಾಟಕದ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ಹೊಂದಲು ವಿವೇಕಾನಂದರ ಯೋಜನೆ ಜಾರಿ: ಬೊಮ್ಮಾಯಿಕರ್ನಾಟಕದ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ಹೊಂದಲು ವಿವೇಕಾನಂದರ ಯೋಜನೆ ಜಾರಿ: ಬೊಮ್ಮಾಯಿ

Apply For Various Post At Vijayanagara Under National Health Mission

ಆಶಾ ಮೇಲ್ವಿಚಾರಕರು (ಮಹಿಳೆ) 1 ಹುದ್ದೆಗೆ ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್, ಡಿಪ್ಲೋಮಾ ಇನ್ ನರ್ಸಿಂಗ್ ಹೊಂದಿರವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

KPSC Recruitment; ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣನೆ ಆದೇಶ KPSC Recruitment; ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣನೆ ಆದೇಶ

ಶುಶ್ರೂಷಕಿಯರು (ಮಹಿಳೆ) 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿಎಸ್ಸಿ, ಪಿಬಿಬಿಎಸ್, ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಹಾಕಬಹುದು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (1) ಹುದ್ದೆಗೆ ಎಲ್‍ಹೆಚ್‍ವಿ ಯುಪಿಹೆಚ್‍ಸಿ ಪದವಿ, ಪಿ.ಹೆಚ್.ಸಿ.ಓ ಹೊಂದಿರಬೇಕು. (ಮಹಿಳೆ ಎ.ಎನ್.ಎಂ) 5 ಹುದ್ದೆಗೆ ಎಎನ್‍ಎಂ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಪ್ರಯೋಗಶಾಲಾ ತಂತ್ರಜ್ಞರು (ರಕ್ತ ಶೇಖರಣ ಘಟಕ) 1 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ ಹೊಂದಿರುವವರು ಅರ್ಜಿ ಹಾಕಬಹುದು. ಪ್ರಯೋಗಶಾಲಾ ತಂತ್ರಜ್ಞರು 1 ಹುದ್ದೆಗೆ ಬಿಎಂಎಲ್‍ಟಿ, ಡಿಎಂಎಲ್‍ಟಿ ಪದವಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ನೇತ್ರ ಸಹಾಯಕರು (1) ಹುದ್ದೆಗೆ ಡಿಪ್ಲೋಮಾ ಇನ್ ಆಪ್ತೋಮೆಟ್ರಿ, ಆಪ್ತಲ್ಮಿಕ್ ಅಸಿಸ್ಟಂಟ್ ವಿದ್ಯಾರ್ಹತೆ ಇದೆ. ಒಟಿ ಟೆಕ್ನಿಷಿಯನ್ (1) ಹುದ್ದೆಗೆ ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ವಿದ್ಯಾರ್ಹತೆ ಹೊಂದಿರಬೇಕು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್‍ಸೈಟ್ https://vijayanagara.nic.in ನಲ್ಲಿ ಅಥವಾ ಹೊಸಪೇಟೆಯ ಹೊಸ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗದ ಆರ್. ಸಿ. ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.

ಅರ್ಜಿಗಳನ್ನು ಜ.13ರಿಂದ 21ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 21 ಸಂಜೆ 5.30ರೊಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳಿಗೆ ಸೂಚನೆಗಳು; ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚುಗೊಳಿಸುವುದು ಅಥವಾ ಕಡಿಮೆಗೊಳಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ನಿರ್ಧಾರವಾಗಿರುತ್ತದೆ. ಆಯ್ಕೆಯ ಪ್ರಕ್ರಿಯೆ ಯಾವುದೇ ಬದಲಾವಣೆಯಾದರು ಆಯ್ಕೆ ಸಮಿತಿ ತಿರ್ಮಾನವೇ ಅಂತಿಮ.

ಕೋವಿಡ್-19 ರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸದವರಿಗೆ ಆದ್ಯತೆ ನೀಡಲಾಗುವುದು. 6 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.2, 6 ತಿಂಗಳು 1 ದಿನದಿಂದ 12 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.4ರಷ್ಟು ಕ್ರಮಾಂಕ ದೊರೆಯಲಿದೆ.

12 ತಿಂಗಳು 1 ದಿನದಿಂದ 18 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.6, 18 ತಿಂಗಳು 1 ದಿನದಿಂದ 24 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ. 8ರಷ್ಟು ಕೃಪಾಂಕವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ಹೊಸ ರೋಸ್ಟರ್ ಆಧಾರದ ಮೇಲೆ ಮೇರಿಟ್ ಕಂ ರೋಸ್ಟರ್ ಆಧಾರ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುತ್ತದೆ.

ಎಂ. ಬಿ. ಬಿ. ಎಸ್ ವೈದ್ಯಾಧಿಕಾರಿಗಳ ಹುದ್ದೆಗೆ ಹುದ್ದೆಗಳ ಸಂಖ್ಯೆ ತುಂಬುವವರೆಗೆ ವಾಕ್ ಇನ್ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಜಿಲ್ಲೆಯ ಜಾಲತಾಣ https://vijayanagara.nic.in ನಲ್ಲಿ ಅಥವಾ ಹೊಸಪೇಟೆ ಆರ್. ಸಿ. ಹೆಚ್ ಕಚೇರಿಗೆ ಸಂಪರ್ಕಿಸಬಹುದಾಗಿದೆ.

English summary
Apply for various post at Vijayanagara district. Candidates can apply till January 21, 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X