ಕೋಲಾರ : ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ

ಕೋಲಾರ, ಮೇ 20 : ಕೋಲಾರ ತಾಲೂಕು ಕಸಬಾ ಹೋಬಳಿ ಟಮಕ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಖಾಲಿ ಇರುವ ಅರ್ಚಕರ ಹುದ್ದೆ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ನಿಯಮಗಳ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಚನಾ ವೃತ್ತಿಯನ್ನು ಮಾಡುವಂತವ ಆಸಕ್ತಿ ಇರುವವರು 10 ದಿನಗಳೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಯು, ವಿದ್ಯಾರ್ಹತೆ ಮತ್ತು ಪೂಜಾರ್ಹತೆ ಪತ್ರ ಅಥವಾ ಸಂಬಂಧಪಟ್ಟ ಆಗಮ ಉತ್ತೀರ್ಣತಾ ಪತ್ರ ಲಗತ್ತಿಸಬೇಕು. ವಯೋಮಿತಿಯು 21 ರಿಂದ 33 ವರ್ಷವಾಗಿರಬೇಕು. ಯಾವುದೇ ಕ್ರಿಮಿನಲ್ ಅಪರಾಧವೆಸಗಿರಬಾರದು ಹಾಗೂ ನ್ಯಾಯಾಲಯದಿಂದ ದಂಡನೆಗೆ ಒಳಗಾಗಿರಬಾರದು.

Apply for priest job in Kolar Veeranjaneya Swamy temple

ಪೊಲೀಸ್ ಇಲಾಖೆಯಿಂದ ಪಡೆದ ನಿರಾಪೇಕ್ಷಣಾ ಪತ್ರ, ವೈದ್ಯಾಧಿಕಾರಿಗಳಿಂದ ದೇಹದಾಧೃಡ ಪ್ರಮಾಣ ಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಬೇಕು.

ನೇಮಕಗೊಂಡ ಅಭ್ಯರ್ಥಿಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯದತ್ತಿಗಳ ಅಧಿನಿಯಮಗಳು 2002 ಸೆಕ್ಷನ್ 13 ರಲ್ಲಿನ ನಿಬಂಧನೆಗಳಿಗೆ ಬದ್ದರಾಗಿರಬೇಕು.

2 ವರ್ಷಗಳ ಪರಿವೀಕ್ಷಣಾ ಅವಧಿ ಪೂರೈಸಬೇಕಾಗಿದ್ದು, ಈ ಅವಧಿಯಲ್ಲಿ ಅನಗತ್ಯವೆಂದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು.

ಅರ್ಚಕರ ಹುದ್ದೆಗೆ ದೇವಾಲಯಕ್ಕೆ ನಿಗದಿಪಡಿಸಿರುವ ತಸ್ತೀಕ್ ಆದಾಯದ ಮೇರೆಗೆ ಸಂಭಾವನೆ ಪಾವತಿಸಲಾಗುವುದು. ಈ ಹುದ್ದೆಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ ಹಾಗೂ ಈ ನೇಮಕಾತಿಯು ಧಾರ್ಮಿಕ ದತ್ತಿ ಆಯುಕ್ತರ ಅನುಮೋದನೆಗೆ ಒಳಪಟ್ಟಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+