ಬೆಳಗಾವಿ; ಯರಗಟ್ಟಿ ಅರ್ಬನ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ
ಬೆಳಗಾವಿ, ಅಕ್ಟೋಬರ್ 19; ದಿ ಯರಗಟ್ಟಿ ಅರ್ಬನ್ ಕೋ-ಅಪ್. ಕ್ರೆಡಿಟ್ ಬ್ಯಾಂಕ್ ಲಿ,. ಯರಗಟ್ಟಿ ಬೆಳಗಾವಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 2/11/2021 ಕೊನೆಯ ದಿನವಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಅನ್ವಯ ನೇಮಕಾತಿ ಮಾಡಲಾಗುತ್ತದೆ. ಅರ್ಜಿಗಳನ್ನು ಪ್ರಧಾನ ಕಚೇರಿ ಯರಗಟ್ಟಿಯಿಂದ ಪಡೆದುಕೊಂಡು ಭರ್ತಿ ಮಾಡಿ ಸಲ್ಲಿಸಬಹುದು.
ಮ್ಯಾನೇಜರ್ 1, ಕಿರಿಯ ಸಹಾಯಕರು 5 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ದಿ ಯರಗಟ್ಟಿ ಅರ್ಬನ್ ಕೋ-ಅಪ್. ಕ್ರೆಡಿಟ್ ಬ್ಯಾಂಕ್ ಲಿ. ಯರಗಟ್ಟಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮ್ಯಾನೇಜರ್ 1 ಹುದ್ದೆಗೆ ಅರ್ಜಿ ಸಲ್ಲಿಸುವವರು ಕಾನೂನು ಬದ್ಧವಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪಡೆದಿರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಐಚ್ಛಿಕ ವಿಷಯ ಹೊಂದಿರಬೇಕು ಅಥವ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ವಿಷಯ ಹೊಂದಿರಬೇಕು.
ಕಂಪ್ಯೂಟರ್ ಕಾರ್ಯಾಚರಣೆ ಹಾಗೂ ಅಪ್ಲಿಕೇಶನ್ ಕೋರ್ಸ್‌ಗಳನ್ನು ಸರ್ಕಾರಿ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪಡೆದುಕೊಂಡಿರಬೇಕು. ಸಹಕಾರಿ ವಿಷಯದಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ. ವೇತನ ಶ್ರೇಣಿ 22,800-43,200 ಆಗಿದೆ.
ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪಾಸಾಗಿರಬೇಕು. ಕನ್ನಡ ಭಾಷೆಯ ಜ್ಞಾನದೊಂದಿಗೆ ಕನ್ನಡ ಓದಲು, ಬರೆಯಲು ತಿಳಿದುಕೊಳ್ಳಲು ಮತ್ತು ಮಾತನಾಡಲು ಬರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 38 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮ್ಯಾನೇಜರ್ ಹುದ್ದೆಗೆ 1200 ರೂ. ಕಿರಿಯ ಸಹಾಯಕ ಹುದ್ದೆಗೆ 1000 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಅರ್ಜಿ ಶುಲ್ಕವನ್ನು ನೇರವಾಗಿ ಪ್ರಧಾನ ಕಚೇರಿ ಯರಗಟ್ಟಿಯಲ್ಲಿ ತುಂಬಬಹುದು ಅಥವ ಡಿಡಿ/ ಪೋಸ್ಟಲ್ ಆರ್ಡರ್ ಅನ್ನು ದಿ ಯರಗಟ್ಟಿ ಅರ್ಬನ್ ಕೋ-ಅಪ್. ಕ್ರೆಡಿಟ್ ಬ್ಯಾಂಕ್ ಲಿ,. ಯರಗಟ್ಟಿ ಈ ಹೆಸರಿನಲ್ಲಿ ಪಾವತಿಯಾಗುವಂತೆ ಕಳಿಹಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ತುಂಬಲು 2/11/2021 ಕೊನೆಯ ದಿನವಾಗಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಅನ್ವಯ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆಯಡಿಯಲ್ಲಿ ಗೌರವಧನ ಆಧಾರದಲ್ಲಿ ಯುವಪರಿವರ್ತಕರ ಹುದ್ದೆಗೆ ಅರ್ಹ ಯುವಕ ಅಥವಾ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು 2 ಭಾವಚಿತ್ರ ಮತ್ತು ಸ್ವ ವಿವರಗಳೊಂದಿಗೆ ಸಹಾಯಕ ನಿರ್ದೇಶಕರ ಕಚೇರಿ ಯುವ ಸಬಲೀಕರಣ ಇಲಾಖೆ ಮತ್ತು ಕ್ರೀಡಾ ಇಲಾಖೆ ಚಾಮುಂಡಿ ವಿಹಾರ ಕ್ರೀಡಾಂಗಣ ಅಥವಾ [email protected] ಅನ್ನು ಸಂಪರ್ಕಿಸಬಹುದು.
ಅಕ್ಟೋಬರ್ 27ರಂದು ಬೆಳಗ್ಗೆ 10.30 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2444922 ಮತ್ತು ಕ್ಷೇತ್ರ ಸಂಪರ್ಕಧಿಕಾರಿ ಎಂ. ಚೇತನ್ ಅವರ ಮೊಬೈಲ್ ಸಂಖ್ಯೆಯನ್ನು 9731947828 ಸಂಪರ್ಕಿಸಬಹುದು.
ಯುವ ಸಮಲೋಚಕರಾದ ಎಸ್. ಸುಷ್ಮ ಅವರ ಮೊಬೈಲ್ ಸಂಖ್ಯೆ 7019696094 ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿಗೆ ಅರ್ಜಿ ಆಹ್ವಾನ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ High Performance Manager & Head Coach (Swimming Athletics and Shooting) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸೂಕ್ತ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ನೋಟರಿ ಮಾಡಿಸಿ ಅರ್ಜಿಗಳನ್ನು ಅಕ್ಟೋಬರ್ 22ರೊಳಗೆ ಕಛೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಮೈಸೂರು ಇಲ್ಲಿನ ನೋಟಿಸ್ ಬೋರ್ಡ್ ನೋಡಬಹುದುದ ಅಥವಾ ದೂರವಾಣಿ ಸಂಖ್ಯೆ 0821-2564179 ಅನ್ನು ಸಂಪರ್ಕಿಸಬಹುದು.












Click it and Unblock the Notifications