ಶಿವಮೊಗ್ಗ; ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, ಆಗಸ್ಟ್ 30; ಶಿವಮೊಗ್ಗದ ಸಿದ್ಧಾರ್ಥ ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಅನುದಾನಿತ ಪ್ರೌಢಶಾಲೆ ಇಲ್ಲಿ ಖಾಲಿ ಇರುವ ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ, ಬಿ.ಇಡಿ (ಹಿಂದಿ ಭಾಷೆ ಐಚ್ಚಿಕ ವಿಷಯ) ವಿದ್ಯಾರ್ಹತೆ ಹೊಂದಿರಬೇಕು. ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿಗಳನ್ನು ಹಾಕಬಹುದು.
ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಗೆ ಸಲ್ಲಿಸಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆಗೆ ಕಚೇರಿ ವೇಳೆಯಲ್ಲಿ ಕರೆ ಮಾಡಬಹುದಾಗಿದೆ.

ಆಸಕ್ತರು ದೂರವಾಣಿ ಸಂಖ್ಯೆ 08182-220925ಕ್ಕೆ ಕರೆ ಮಾಡಬಹುದಾಗಿದೆ ಎಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌರವ ಸಮಾದೇಷ್ಟರ ಹುದ್ದೆ ಭರ್ತಿ; ದಾವಣಗೆರೆ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಯು ಮೇ 25, 2021ರಿಂದ ಖಾಲಿಯಾಗಿದೆ. ಸರ್ಕಾರದ ನಿರ್ದೇಶನದಂತೆ ತುರ್ತಾಗಿ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಭರ್ತಿ ಮಾಡಬೇಕಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ, ಶೈಕ್ಷಣಿಕ ಅರ್ಹತೆ, ವಿಳಾಸ, ಪೋನ್ ನಂಬರ್ ಒಳಗೊಂಡ ಇನ್ನಿತರೆ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಫಿಜಿಯೋಥೆರಪಿಸ್ಟ್ ನೇಮಕಾತಿಗೆ ಅರ್ಜಿ; ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದಿತ ಚಟಿವಟಿಕೆಯಾದ 6 ರಿಂದ 18 ವರ್ಷದೊಳಗಿನ ತೀವ್ರತರ ವಿಕಲತೆ ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಭೌತಿಕ ಚಿಕಿತ್ಸೆಗಾಗಿ ಫಿಜಿಯೋಥೆರಪಿಸ್ಟ್‌ಗಳ ಅಗತ್ಯತೆ ಇದೆ.
ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಎಸ್.ಆರ್.ಪಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಫಿಜಿಯೋಥೆರಪಿಸ್ಟ್ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಮತ್ತು ಅರ್ಹರು ಸೆಪ್ಟೆಂಬರ್ 9ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಡಿ.ಪಿ.ಟಿ, ಬಿ.ಪಿ.ಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಕೆಲಸ ಮತ್ತು ಪಾವತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ; ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕೆ. ಆರ್. ರಸ್ತೆ, ದಾವಣಗೆರೆ ಉತ್ತರ ವಲಯ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9480695179 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಆಟೋಮೊಬೈಲ್ ತರಬೇತಿಗೆ ಅರ್ಜಿ ಆಹ್ವಾನ; ಕೊಪ್ಪಳದ ದದೇಗಲ್‌ನಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಜಿಟಿಟಿಸಿ ಆಟೋಮೊಬೈಲ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎ.ಎಸ್.ಡಿ.ಸಿ (ಆಟೊಮೊಟಿವ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್) ಮತ್ತು ಟೊಯೋಟ ಸಹಯೋಗದಲ್ಲಿ ಕೊಪ್ಪಳ ತಾಲೂಕಿನ ದದೇಗಲ್‌ನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಎಸ್ಎಸ್ಎಲ್‌ಸಿ, ಐಟಿಐ, ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಟೋಮೊಬೈಲ್ ಸೇಕ್ಟರ್ನಲ್ಲಿ ವಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೋಮೊಬೈಲ್ ವೆಲ್ಡರ್ ಬೇಸಿಕ್ ತರಬೇತಿ ಕೋರ್ಸ್‌ಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಆದ ಮತ್ತು ಐಟಿಐ, ಪಿಯುಸಿ, ಡಿಪ್ಲೋಮಾ ಪಾಸ್ ಅಥವ ಫೇಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರಾಯೋಗಿಕ ತರಬೇತಿಯ ಕೋರ್ಸ್ ಆಗಿದ್ದು, ಜಿಟಿಟಿಸಿ- ಟಿ.ಕೆ.ಎಮ್ ಮತ್ತು ಎ.ಎಸ್.ಡಿ.ಸಿ ಪ್ರಮಾಣೀಕರಣ ಅಟೋಮೊಬೈಲ್ ವಲಯಗಳ ನುರಿತ ತರಬೇತಿದಾರರಿಂದ ಉಚಿತವಾಗಿ ನೀಡಲಾಗುವುದು, ಒಂದು ವರ್ಷದ ತರಬೇತಿ ಕೋರ್ಸ್ ಪೂರ್ಣಗೊಳಿಸಿದ ನಂತರ ಎರಡು ವರ್ಷ ಟಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಮಾಸಿಕ ವೇತನ ಭತ್ಯೆಯೊಂದಿಗೆ ಆನ್ ಜಾಬ್ (ಕೆಲಸದ ಮೇಲೆಯೇ) ತರಬೇತಿಯೊಂದಿಗೆ 12,000 ರಿಂದ 15000 ಮಾಸಿಕ ಸ್ಟೈಫಂಡ್, ಪೌಷ್ಠಿಕ ಆಹಾರವುಳ್ಳ ಕ್ಯಾಂಟಿನ್, ಉಚಿತ ಸಮವಸ್ತ್ರ ಮತ್ತು ಸಾರಿಗೆ ಸೌಲಭ್ಯ., ಸುರಕ್ಷಿತ ಮತ್ತು ಆರೋಗ್ಯಕರ ತರಬೇತಿ ಪರಿಸರ ಮತ್ತು ಆನ್ ಜಾಬ್ ತರಬೇತಿಯ ನಂತರ ಜಿಟಿಟಿಸಿ ಮತ್ತು ಎ.ಎಸ್.ಡಿ.ಸಿ ಲೆವೆಲ್-3 ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತ ನಿರುದ್ಯೋಗಿ ಯುವಕರಿಂದ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಗದಗ ರೋಡ್-ದದೇಗಲ್ ಇಲ್ಲಿಗೆ ಸೆಪ್ಟಂಬರ್ 25ರ ಒಳಗಾಗಿ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತರಬೇತಿ ಕೇಂದ್ರದ ಪ್ರಾಂಶುಪಾಲರಿಗೆ ಕರೆ ಮಾಡಬಹುದಾಗಿದೆ. ದೂರವಾಣಿ ಸಂಖ್ಯೆ 8431167559, 9535483660, 9902556110











Click it and Unblock the Notifications