ಧಾರವಾಡ; ಅತಿಥಿ ಶಿಕ್ಷಕರ ಹುದ್ದೆ, ಮೇ 22ರ ತನಕ ಅರ್ಜಿ ಹಾಕಿ
ಧಾರವಾಡ, ಮೇ 18; ಧಾರವಾಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತತರು ಮೇ 22ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಂಚಟಗೇರಿ, ನವಲಗುಂದ, ಹುಬ್ಬಳ್ಳಿಯ ಸದಾಶಿವನಗರ ಹಾಗೂ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ ಧಾರವಾಡ, ಶಿಂಗನಹಳ್ಳಿಯಲ್ಲಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ನಡೆಯುತ್ತಿದೆ.

ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಕನ್ನಡ, ಇಂಗ್ಲೀಶ್, ಗಣಿತ, ಸಮಾಜ ವಿಜ್ಞಾನ, ವಿಜ್ಞಾನ, ಹಿಂದಿ, ಉರ್ದು ವಿಷಯಗಳಲ್ಲಿ ಪದವಿ ಮತ್ತು ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿದೆ.
ಆಸಕ್ತರು ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ ಭವನ, ಸಾಧನಕೇರಿ ರಸ್ತೆ, ಸರ್ಕಾರಿ ಮುದ್ರಣಾಲಯ ಹತ್ತಿರ, ಧಾರವಾಡ ಇವರ ಕಾರ್ಯಾಲಯವನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2971590 ಹಾಗೂ ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ ಅಂಚಟಗೇರಿ- 448054139. ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ, ಶಿಂಗನಹಳ್ಳಿ ಮತ್ತು ಮೌಲಾನಾ ಆಜಾದ ಶಾಲೆ ನವಲಗುಂದ-8497847789, ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ ಶಾಲೆ, ಸದಾಶಿವನಗರ, ಹುಬ್ಬಳ್ಳಿ-9916168583 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.
ಮೂಲ ದಾಖಲೆಗಳ ಪರಿಶೀಲನೆ; 2022ರ ಪದವೀಧರರ 6 ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವೃಂದದ 1:1 ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮೇ 18 ರಿಂದ ಮೇ 22 ರವರೆಗೆ ನಡೆಯಲಿದೆ.
ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಮೇ 18ರಂದು ಜೀವ ವಿಜ್ಞಾನ (ಕನ್ನಡ) 1-13, ಗಣಿತ ವಿಜ್ಞಾನ (ಉರ್ದು) 1-11, ಸಮಾಜ ವಿಜ್ಞಾನ (ಉರ್ದು) 1-22 ಹಾಗೂ ಮೇ 19 ರಂದು ಸಮಾಜ ವಿಜ್ಞಾನ (ಕನ್ನಡ) 1-50, ಸಮಾಜ ವಿಜ್ಞಾನ (ಕನ್ನಡ) 51-112 ಮತ್ತು ಮೇ 20 ರಂದು ಗಣಿತ ವಿಜ್ಞಾನ (ಕನ್ನಡ) 1-50, ಗಣಿತ ವಿಜ್ಞಾನ (ಕನ್ನಡ) 51-95 ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಯಲಿದೆ.
ಮೇ 22 ರಂದು ಇಂಗ್ಲಿಷ್ (ಆಂಗ್ಲ ಭಾಷೆ) 1-38 ಅನುಕ್ರಮ (ಆಯ್ಕೆ ಪಟ್ಟಿಯಲ್ಲಿನ) ಸಂಖ್ಯೆಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳೊಂದಿಗೆ ಬೆಳಗ್ಗೆ 10.30 ಗಂಟೆಯಿಂದ ಸಂಜೆ 5,.30 ರವರೆಗೆ ನಡೆಯುವ ಮೂಲ ದಾಖಲಾತಿಗಳ ಪರಿಶೀಲನಾ ಕಾರ್ಯಕ್ಕೆ ಹಾಜರಿರಲು ಸೂಚನೆ ನೀಡಲಾಗಿದೆ.












Click it and Unblock the Notifications