ಕೊಪ್ಪಳ; ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಹಾಕಿ

ಕೊಪ್ಪಳ, ಜೂನ್ 28; ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 05ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿ ಕೊಪ್ಪಳ ಸಂಜೀವಿನಿ-ಕೆ. ಎಸ್. ಆರ್. ಎಲ್. ಪಿ. ಎಸ್ ಯೋಜನೆಯಡಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದೆ. ಸಂಜೀವಿನಿ-ಕೆ. ಎಸ್. ಆರ್. ಎಲ್. ಪಿ. ಎಸ್ ಸಂಸ್ಥೆಯು ಸಾಂಸ್ಥಿಕ ನಿರ್ಮಾಣ ಮತ್ತು ಸಾಮರ್ಥ್ಯ ಬಲವರ್ಧನೆ, ಸಾಮಾಜಿಕ ಅಭಿವೃದ್ಧಿ (ಎಫ್. ಎನ್. ಹೆಚ್. ಡಬ್ಲ್ಯೂ., ಸಾಮಾಜಿಕ ಸೇರ್ಪಡೆ, ಲಿಂಗತ್ವ, ಒಗ್ಗೂಡಿಸುವಿಕೆ), ಹಣಕಾಸು ಸೇರ್ಪಡೆ, ಕೃಷಿ ಜೀವನೋಪಾಯ, ಡಿ. ಡಿ. ಯು. ಜಿ. ಕೆ. ವಾಯ್ ಯೋಜನೆಯಡಿ ಕೌಶಲ್ಯ ತರಬೇತಿ ಕಾರ್ಯಕ್ರಮ.

Apply For District Resource Person Post At Koppal Under KSRLPS

ಈ ಐದು ಕ್ಷೇತ್ರಗಳಲ್ಲಿ ಅನುಭವವಿರುವ ಮತ್ತು ಕ್ರಿಯಾಶೀಲ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ತಾಂತ್ರಿಕ ಸೇವೆಗಳನ್ನು ಪಡೆದುಕೊಳ್ಳಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ತೇರ್ಗಡೆಯಾಗಿರಬೇಕು.

ಕನಿಷ್ಠ 5 ವರ್ಷಗಳ ಕಾಲ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರಬೇಕು. ತರಬೇತಿ ಪಡೆದುಕೊಳ್ಳಲು ಅಥವಾ ನೀಡಲು ವಿವಿಧ ಸಂಸ್ಥೆಗಳಿಗೆ ಪ್ರವಾಸ ಮಾಡಲು ಸಿದ್ಧರಿರಬೇಕು. ಕಳೆದ 3ವರ್ಷಗಳಿಂದ ಯೋಜನೆಯ ಸಿಬ್ಬಂದಿ/ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿರುವ ಅನುಭವಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಈ ಎಲ್ಲಾ ಕ್ಷೇತ್ರಗಳಲ್ಲಿ ಕನಿಷ್ಠ 5ವರ್ಷ ಕಾರ್ಯನಿರ್ವಹಿಸಿ ಅನುಭವವಿರುವ ಹಾಗೂ ಮಾನದಂಡಗಳನ್ವಯ ಅರ್ಹತೆಯುಳ್ಳ ಆಸಕ್ತರು ಖುದ್ದಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ದೊರೆಯುವ ನಿಗದಿತ ನಮೂನೆ ಪಡೆದುಕೊಂಡು ಜುಲೈ 5ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಕಾನೂನು ಪದವೀಧರರ ತರಬೇತಿಗೆ ಅರ್ಜಿ ಹಾಕಿ; ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24 ನೇ ಸಾಲಿನ ಆಡಳಿತ ನ್ಯಾಯಾಧೀಕರಣ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ವರ್ಗದ ಕಾನೂನು ಪದವೀಧರರ ತರಬೇತಿಗಾಗಿ ಅರ್ಹ ಕಾನೂನು ಪದವೀಧರರ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು. ತರಬೇತಿಯ ಅವಧಿ 2 ವರ್ಷವಾಗಿದ್ದು, ಮಾಸಿಕ ರೂ.10,000ಗಳ ಶಿಷ್ಯ ವೇತನ ನೀಡಲಾಗುವುದು ಹಾಗೂ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ ಹಿರಿಯ ವಕೀಲರವರಲ್ಲಿ ತರಬೇತಿಗೆ ನಿಯೋಜಿಸಲಾಗುವುದು.

ಆಸಕ್ತ ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 24 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು www.tw.kar.nic.in ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಸಲ್ಲಿಸಿ ಸೂಕ್ತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, 4ನೇ ಮುಖ್ಯ ರಸ್ತೆ, 16ನೇ ಅಡ್ಡರಸ್ತೆ, ಸಂಪಂಗಿರಾಮನಗರ ಪೊಲೀಸ್ ಠಾಣೆ ಎದುರು, ಸಂಪಂಗಿರಾಮನಗರ, ಬೆಂಗಳೂರು ಇಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22240449.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+