ದಕ್ಷಿಣ ಕನ್ನಡದಲ್ಲಿ ಕೆಲಸ ಖಾಲಿ ಇದೆ; ಅ. 10ರೊಳಗೆ ಅರ್ಜಿ ಹಾಕಿ
ಮಂಗಳೂರು, ಅಕ್ಟೋಬರ್ 01; ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹೊರ ಗುತ್ತಿಗೆ ಆಧಾರದ ಮೇಲೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಹುದ್ದೆಗೆ ಅರ್ಜಿಗಳನ್ನು ಕರೆದಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 10/10/2021 ಕೊನೆಯ ದಿನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯಿತಿಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನರೇಗಾ ಯೋಜನೆಯಡಿ ಒಟ್ಟು 6 administrative assistant ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಈ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಕೇವಲ ಮೆರಿಟ್ ಲಿಸ್ಟ್ ಆಧಾರದ ಮೇಲೆ ನಡೆಯಲಿದೆ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು zpdk.kar.nic.in ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಹ ಅಪ್ ಲೋಡ್ ಮಾಡಬೇಕಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 10/10/2021 ಕೊನೆ ದಿನ.
ಅರ್ಹತೆಗಳು; Administrative assistant ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಬಿ.ಕಾಂ ಪದವಿ ಪಡೆದಿರಬೇಕು. ಕನ್ನಡ ಮತ್ತು ಇಂಗ್ಲಿಶ್ ಟೈಪಿಂಗ್ ಕಂಪ್ಯೂಟರ್‌ನಲ್ಲಿ ಮಾಡಲು ತಿಳಿದಿರಬೇಕು. ಎಂ. ಎಸ್ ವಲ್ಡ್, ಎಕ್ಸೆಲ್, ಪವರ್ ಪಾಯಿಂಟ್ ಸೇರಿದಂತೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕನಿಷ್ಠ 2 ವರ್ಷಗಳ ಕಾಲ ಸಂಬಂಧಿತ ಅನುಭವ ಹೊಂದಿರಬೇಕು. 21/9/2021ಕ್ಕೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.
ಅಗತ್ಯ ದಾಖಲೆಗಳು; ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ. ಅಂಕಪಟ್ಟಿ, ಬಿ.ಕಾಂ. ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ಕಂಪ್ಯೂಟರ್ ಜ್ಞಾನದ ಪ್ರಮಾಣ ಪತ್ರವನ್ನು ಜೊತೆಗೆ ಲಗತ್ತಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 14,543.60 ರೂ. ವೇತನ ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ನೇಮಕಾತಿ ಪ್ರಕಟಣೆ ತಿಳಿಸಿದೆ.
ಕಲಬುರಗಿಯಲ್ಲಿ ವಿವಿಧ ಹುದ್ದೆ ಭರ್ತಿ; ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾ ಸಮಿತಿ ಮೂಲಕ ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ನೋಡಲ್ ಆಫೀಸರ್/ ಸಮಾಜ ಸೇವಾ ಕಾರ್ಯಕರ್ತರು (ಯುನಿಟ್ ಇನ್‍ಚಾರ್ಜ್) ಹುದ್ದೆಗೆ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಅಕೌಂಟೆಂಟ್-ಕಂ-ಕ್ಲರ್ಕ್ ಕಂ ಸ್ಟೋರ್ ಕೀಪರ್ ಹುದ್ದೆಗೆ ಬಿ.ಕಾಂ. ಪದವಿ ವಿದ್ಯಾರ್ಹತೆ ನಿಗದಿಗೊಳಿಸಲಾಗಿದೆ.
ಕಂಪ್ಯೂಟರ್ ಅಪರೇಟರ್ ಹುದ್ದೆಗೆ ದ್ವಿತೀಯ ಪಿ.ಯು.ಸಿ ಮತ್ತು ಕಂಪ್ಯೂಟರ್ ತರಬೇತಿ ಹೊಂದಿರಬೇಕು. ಕಚೇರಿ ಸೇವಕರ ಹುದ್ದೆಗೆ ಎಸ್. ಎಸ್. ಎಲ್. ಸಿ. ವಿದ್ಯಾರ್ಹತೆ ಹೊಂದಿರಬೇಕು. ಕೃತಕಾಂಗ ಜೋಡಣೆ (ಪಿಆ್ಯಂಡ್ಓ) ಅಭಿಯಂತರರು ಹುದ್ದೆಗೆ ಪಿ. ಆಂಡ್ ಓ ಇಂಜಿನಿಯರಿಂಗ್ ಪದವಿ/ ಡಿಪ್ಲೋಮಾದಲ್ಲಿ 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಪ್ರಾಸ್ಥೋಟಿಸ್ಟ್ ಮತ್ತು ಆರ್ಥೊಟಿಸ್ಟ್ (ಪಿ. ಆಂಡ್ ಒ) ಹುದ್ದೆಗೆ ಡಿಪ್ಲೋಮಾ ಪಿ. ಆಂಡ್ ಒ/ಐ.ಟಿ.ಐ. (ಫಿಟ್ಟರ್) ನಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು. ಲೇದರ್ ವರ್ಕ್/ಶೂ ಮೇಕರ್ ಹುದ್ದೆಗೆ ಪ್ರಮಾಣಪತ್ರದೊಂದಿಗೆ 2 ವರ್ಷಗಳ ಅನುಭವ ಹೊಂದಿರಬೇಕು. ಕ್ಲೀನಿಕಲ್ ಸೈಕಾಲಾಜಿಸ್ಟ್ ಹುದ್ದೆಗೆ ಎಂ.ಎ. ಇನ್ ಕ್ಲಿನಿಕಲ್ ಸೈಕಾಲಾಜಿ ವಿದ್ಯಾರ್ಹತೆ ಹೊಂದಿರಬೇಕು.
ಸ್ಪೀಚ್ ಥೆರಾಪಿಸ್ಟ್ ಮತ್ತು ಆಡಿಯೋಲಾಜಿಸ್ಟ್ ಹುದ್ದೆಗೆ ಬಿ.ಎಸ್.ಸಿ. ಇನ್ ಸ್ಪೀಚ್ ಆಂಡ್ ಆಡಿಯೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಫಿಸಿಯೋಥೇರಾಪಿಸ್ಟ್/ ಅಕ್ಯುಪೇಶನಲ್ ಥೆರಾಪಿಸ್ಟ್ ಹುದ್ದೆಗೆ ಪಿಜಿಯೋಥೆರಪಿ/ ಅಕ್ಯುಪೇಶನಲ್‍ಥೆರಪಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಮೊಬಿಲಿಟಿ ಇನ್ಸ್‍ಟ್ರಕ್ಟರ್ ಹುದ್ದೆಗೆ ಓ ಆಂಡ್ ಎಮ್ ಪ್ರಮಾಣಿತ ತರಬೇತಿ ಹೊಂದಿರಬೇಕು.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ 2021ರ ಅಕ್ಟೋಬರ್ 13ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-235222ಗೆ ಸಂಪರ್ಕಿಸಲು ಕೋರಲಾಗಿದೆ.












Click it and Unblock the Notifications