Get Updates
Get notified of breaking news, exclusive insights, and must-see stories!

ನಿರುದ್ಯೋಗಿಗಳಿಗೆ ಸುವರ್ಣಾವಕಾಶ; ಚಿತ್ರದುರ್ಗದಲ್ಲಿ 75 ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ, ನವೆಂಬರ್ 24: ನಿರುದ್ಯೋಗಿಗಳಿಗೆ ಸುವರ್ಣಾವಕಾಶ ಸಿಕ್ಕಿದ್ದು, ಚಿತ್ರದುರ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ 75 ಗೃಹರಕ್ಷಕ ಸಿಬ್ಬಂದಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಖಾಲಿ ಇರುವ ಗೃಹರಕ್ಷಕರ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸ್ವಯಂ ಸೇವಕ ಗೃಹರಕ್ಷಕ ಸದಸ್ಯರಾಗಲು ಇಚ್ಛೆ ಇರುವ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಮುಂದಿನ ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮಾದೇಷ್ಟರು, ಗೃಹರಕ್ಷಕ ದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇಲ್ಲಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Applications Invited For 75 Home Guard Posts In Chitradurga District

ಚಿತ್ರದುರ್ಗ ಜಿಲ್ಲೆಯಯಲ್ಲಿ ಖಾಲಿ ಇರುವ ಗೃಹರಕ್ಷಕ ಹುದ್ದೆಗಳ ವಿವರ
ಹೊಸದಾಗಿ ಪ್ರಾರಂಭವಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಉಪ ಘಟಕದಲ್ಲಿ 32 ಖಾಲಿ ಸ್ಥಾನಗಳು, ಮೊಳಕಾಲ್ಮೂರು ತಾಲ್ಲೂಕು ರಾಂಪುರ ಉಪ ಘಟಕದಲ್ಲಿ 09 ಖಾಲಿ ಸ್ಥಾನಗಳು, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಉಪ ಘಟಕದಲ್ಲಿ 10 ಖಾಲಿ ಸ್ಥಾನಗಳು, ಚಿತ್ರದುರ್ಗ ತಾಲ್ಲೂಕು ಭರಮಸಾಗರ ಉಪ ಘಟಕದಲ್ಲಿ 14 ಖಾಲಿ ಸ್ಥಾನಗಳು ಹಾಗೂ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಉಪ ಘಟಕದಲ್ಲಿ 10 ಖಾಲಿ ಸ್ಥಾನಗಳು ಸೇರಿದಂತೆ ಒಟ್ಟು 75 ಖಾಲಿ ಸ್ಥಾನಗಳು ಇವೆ.

ಅರ್ಹತೆಗಳು
* ವಯಸ್ಸು: ಕನಿಷ್ಟ 19 ರಿಂದ 45 ವರ್ಷ ಒಳಗಿನವರಿರಬೇಕು.
* ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.
* ಗೃಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ನಿರ್ದಿಷ್ಟ ಪ್ರದೇಶದ ಗರಿಷ್ಟ 5 ಕಿ.ಮೀ ಒಳಗಿನವರಾಗಿರಬೇಕು.
* ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು.
* ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು.
* ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿರಬೇಕು.
* ಪುರುಷರು 168 ಸೆಂ.ಮೀ ಎತ್ತರ, 50 ಕೆ.ಜಿ ತೂಕ ಇರಬೇಕು.
* ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
* ಸ್ವಯಂ ಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

Applications Invited For 75 Home Guard Posts In Chitradurga District

ಅರ್ಜಿ ವಿತರಣೆ ಸ್ಥಳ
ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೆದೇಹಳ್ಳಿ ರಸ್ತೆ, ಚಿತ್ರದುರ್ಗ ಇಲ್ಲಿ ಅರ್ಜಿಗಳು ದೊರೆಯಲಿದ್ದು, ನವೆಂಬರ್ 25ರಿಂದ ಡಿಸೆಂಬರ್ 6ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಡಿಸೆಂಬರ್ 10, ಸಂಜೆ 5.30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-231403, ಬೋಧಕರು- 94810 47857, ಸಹಾಯಕ ಬೋಧಕರು 9481501233 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರು ತಿಳಿಸಿದ್ದಾರೆ.

Recommended Video

      Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+