ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂ

|
Google Oneindia Kannada News

ವಾಷಿಂಗ್ಟನ್, ನ. 6: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಜಯಭೇರಿ ಬಾರಿಸಿ ಗೆಲುವಿನ ಕನಸು ಕಾಣುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಶೆಯಾಗಿದೆ. ಸದ್ಯದ ಮಾಹಿತಿಯಂತೆ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಸನಿಹದಲ್ಲಿದ್ದಾರೆ. ಜನಪ್ರಿಯ ಮತ ಗಳಿಸಿ 270 ಮ್ಯಾಜಿಕ್ ನಂಬರ್ ದಾಟಲು ಬೈಡನ್ ಅವರಿಗೆ ಇನ್ನು 6 ಮತಗಳು ಸಾಕು.

ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಸುದ್ದಿಗೋಷ್ಠಿ ನಡೆಸಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದರು. ಟ್ರಂಪ್ ಹೇಳಿಕೆಯನ್ನು ಪ್ರಮುಖ ಸುದ್ದಿಸಂಸ್ಥೆಗಳು ತಿರುಗೇಟು ನೀಡಿವೆ. ಎಬಿಸಿ, ಎನ್ ಬಿಸಿ, ಸಿಬಿಎಸ್ ಅಲ್ಲದೆ ಎಂಎಸ್ ಎನ್ ಬಿಸಿ ಕೂಡಾ ಖಂಡಿಸಿವೆ ಸುದ್ದಿಗೋಷ್ಠಿಯಿಂದ ಹೊರ ನಡೆದವು. ಸಿಎನ್ಎನ್ ಹಾಗೂ ಫಾಕ್ಸ್ ನ್ಯೂಸ್ ಮಾತ್ರ ವರದಿ ಮಾಡಿವೆ.

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

US Elections Infographics: Joe Biden on Verge of Victory
***
ಫಲಿತಾಂಶ ಇಂದು ಹೊರಬೀಳಬಹುದೇ?
ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಮುಂದಿನ ಗುರುವಾರ ತನಕ ಅಧಿಕೃತವಾಗಿ ಮತ ಎಣಿಕೆ ನಿಗದಿಯಾಗಿದೆ. ಜಾರ್ಜಿಯಾ, ನೆವಾಡಾ, ನಾರ್ಥ್ ಕರೋಲಿನಾ ಹಾಗೂ ಪೆನ್ಸಿಲ್ವೇನಿಯಾ ಫಲಿತಾಂಶದ ನಂತರ ಅಧ್ಯಕ್ಷರು ಯಾರು ಎಂಬುದು ನಿರ್ಧಾರವಾಗಲಿದೆ.

20 ಎಲೆಕ್ಟೋರಲ್ ಮತ ಹೊಂದಿರುವ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ 49.8% ಮತ ಗಳಿಸಿ ಮುಂದಿದ್ದರೆ, ಬೈಡನ್ 49% ಮತ ಗಳಿಸಿದ್ದಾರೆ. ಜಾರ್ಜಿಯಾದಲ್ಲಿ ಟ್ರಂಪ್ ಅಲ್ಪ ಮುನ್ನಡೆ ಗಳಿಸಿದ್ದರೆ, ನೆವಾಡಾದಲ್ಲಿ ಬೈಡನ್ ಮುಂದಿದ್ದಾರೆ. ಅಲಾಸ್ಕಾ, ನಾರ್ಥ್ ಕರೊಲಿನಾದಲ್ಲೂ ಟ್ರಂಪ್ ಮುಂದಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!

ಯುಎಸ್ ಚುನಾವಣೆ ಈ ಸಮಯದ ಬಲಾಬಲ
ಜನಪ್ರಿಯ ಮತಗಳು ಬಲಾಬಲ (270 ಮ್ಯಾಜಿಕ್ ನಂಬರ್)
ಬೈಡನ್ (ಡೆಮಾಕ್ರೆಟ್ಸ್): 264, 50.5% (73,414,819 ಮತಗಳು)
ಟ್ರಂಪ್ (ರಿಪಬ್ಲಿಕನ್ಸ್): 214, 47.9% (69,587,803 ಮತಗಳು)

***
ಯುಎಸ್ ಚುನಾವಣೆ ಈ ಸಮಯದ ಬಲಾಬಲ
ಸದನದ ಬಲಾಬಲ (218 ಮ್ಯಾಜಿಕ್ ನಂಬರ್)
ಡೆಮಾಕ್ರೆಟ್ಸ್: 208
ರಿಪಬ್ಲಿಕನ್ಸ್: 193 (+17 ಅಗತ್ಯ)

***
ಯುಎಸ್ ಚುನಾವಣೆ ಈ ಸಮಯದ ಬಲಾಬಲ
ಸೆನೆಟ್ ಬಲಾಬಲ (ಬಹುಮತಕ್ಕೆ 51 ಸ್ಥಾನ ಅಗತ್ಯ)

ಡೆಮಾಕ್ರೆಟ್ಸ್: 48 (+4 ಅಗತ್ಯ)
ರಿಪಬ್ಲಿಕನ್ಸ್: 48

ಅಂತಿಮವಾಗಿ, ಪೆನ್ಸಿಲ್ವೇನಿಯಾ 20 ಎಲೆಕ್ಟೋರಲ್ ಮತಗಳು, ಜಾರ್ಜಿಯಾ 16, ನಾರ್ಥ್ ಕರೊಲಿನಾ 15, ಅಲಾಸ್ಕಾ 3, ನೆವಾಡಾ 3 ಮತಗಳನ್ನು ಹೊಂದಿವೆ. ಈ ಪೈಕಿ ಜಾರ್ಜಿಯಾ ಬಿಟ್ಟು ಮಿಕ್ಕ ಎಲ್ಲಾ ರಾಜ್ಯಗಳಲ್ಲಿ ಟ್ರಂಪ್ ಮುಂದಿದ್ದು, ಎಲ್ಲಾ ಕಡೆ ಗೆದ್ದರೂ ಜನಪ್ರಿಯ ಮತಗಳ ಸಂಖ್ಯೆ 255 ಮಾತ್ರ ಆಗಲಿದೆ. 6 ಮತಗಳ ನಿರೀಕ್ಷೆಯಲ್ಲಿರುವ ಬೈಡನ್ ಜಾರ್ಜಿಯಾದಲ್ಲಿ ಗೆದ್ದರೆ 264+ 16 ಮತಗಳೊಂದಿಗೆ 270 ಮ್ಯಾಜಿಕ್ ನಂಬರ್ ದಾಟಿ 280 ಮತ ಗಳಿಸಿ ಅಧ್ಯಕ್ಷ ಸ್ಥಾನ ಗಳಿಸಲು ಅರ್ಹರಾಗುತ್ತಾರೆ.

English summary
US Elections Infographics: Joe Biden on Verge of Victory as he’s just six electoral votes away from winning the presidential polls. He has 264 votes, Trump has 214 so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X