ರಾಜಸ್ಥಾನದ ಗಂಗಾನಗರ ಕ್ಷೇತ್ರದಲ್ಲಿ ಪಕ್ಷೇತರರದ್ದೇ ಮೇಲುಗೈ!
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಗಂಗಾನಗರ ಸಹ ಒಂದು. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜಿಪಿ ಮತ್ತು ಕಾಂಗ್ರೆಸ್ ಗಳಿಗಿಂತ ಹೆಚ್ಚಾಗಿ ಪಕ್ಷೇತರರೇ ಮೇಲು ಗೈ ಸಾಧಿಸಿರುವುದು ವಿಶೇಷ.
ಇಲ್ಲಿ 1952 ರಿಂದ ಇಲ್ಲಿಯವರೆಗೆ ನಡೆದ 14 ವಿಧಾನಸಭೆ ಚುನಾವಣೆಗಳಲ್ಲಿ 5 ರಲ್ಲಿ ಕಾಂಗ್ರೆಸ್, 2 ರಲ್ಲಿ ಬಿಜೆಪಿ ಮತ್ತು 7 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 337661 ಜನಸಂಖ್ಯೆ ಇದ್ದು, ಶೇ.83 ರಷ್ಟು ಹಿಂದುಗಳಿದ್ದರೆ, ಶೇ.3 ರಷ್ಟು ಮುಸ್ಲಿಮರು ಮತ್ತು ಶೇ.14 ರಷ್ಟು ಸಿಕ್ಖ್ ಸಮುದಾಯದವರಿದ್ದಾರೆ.
ಒಟ್ಟು 52.25 ಪ್ರತಿಶತ ಪುರುಷ ಮತ್ತು ಶೇ.47.75 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕಾಮಿನಿ ಜಿಂದಾಲ್ ಅವರು 77860 ಮತಗಳನ್ನು ಪಡೆದು, ಬಿಜೆಪಿಯ ಶ್ಯಾಮ್ ಗಂಗಾನಗರ್ ಅವರನ್ನು ಸೋಲಿಸಿದ್ದರು. ಶ್ಯಾಮ್ ಗಂಗಾನಗರ್ ಗಳಿಸಿದ ಮತಗಳು 40792.
ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications