ಲಾಕ್ಡೌನ್ 4.0 ನಡುವೆ ಸಂಚಾರ, ಇಲ್ಲಿದೆ ಸಮಗ್ರ ಮಾರ್ಗಸೂಚಿ
ಬೆಂಗಳೂರು, ಮೇ 25: ಕೊರೊನಾವೈರಸ್ ನಿಯಂತ್ರಿಸಲು ನಿರ್ಣಾಯಕ ಹೋರಾಟ ನಡೆಸಿರುವ ಕೇಂದ್ರ ಸರ್ಕಾರ, ಹಂತ ಹಂತವಾಗಿ ಲಾಕ್ಡೌನ್ ವಿಧಿಸುತ್ತಿದೆ. ಆದರೆ, ಲಾಕ್ಡೌನ್ 4.0 ಅವಧಿಯಲ್ಲಿ ಸಾರಿಗೆ, ಸಂಚಾರಕ್ಕೆ ಅನುಮತಿ, ವಿನಾಯಿತಿ ನೀಡಲಾಗಿದೆ. ದೇಶಿ ವಿಮಾನಯಾನ, ರಾಜ್ಯಗಳ ನಡುವೆ ಬಸ್ ಸಂಚಾರ, ಪ್ಯಾಸೆಂಜರ್ ರೈಲು ಓಡಾಟಕ್ಕೂ ಗೃಹ ಸಚಿವಾಲಯ ಅನುಮತಿ ನೀಡಿದೆ. ಈ ಎಲ್ಲಾ ಸಾರಿಗೆ ಸಂಪರ್ಕ ಬಳಸಿ ಲಾಕ್ಡೌನ್ ನಡುವೆ ಸಂಚರಿಸಲು ಪ್ರಯಾಣಿಕರಿಗೆ ಅಗತ್ಯವಾದ ಮಾರ್ಗಸೂಚಿಗಳ ಸುದ್ದಿಚಿತ್ರ ಇಲ್ಲಿದೆ
Recommended Video
ಬಸ್, ರೈಲು, ವಿಮಾನ ಅಥವಾ ಖಾಸಗಿ ಕಾರು ವಾಹನ ಯಾವುದೇ ಇರಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೆಲ ನಿಯಮಗಳು ಕಡ್ಡಾಯವಾಗಿದೆ. ಇದು ಪ್ರಯಾಣಿಕರಿಗಲ್ಲದೆ, ಸಿಬ್ಬಂದಿಗೂ ಅನ್ವಯವಾಗತ್ತದೆ. ಜೊತೆಗೆ ಬಸ್, ರೈಲು, ವಿಮಾನ ನಿಲ್ದಾಣದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ.
ಸೇವಾ ಸಿಂಧು ಪೋರ್ಟಲ್ ನಿಂದ ಅನುಮತಿ ಪಡೆಯುವುದು ಕಡ್ಡಾಯವೇ.? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಪಾಸ್ ಕಡ್ಡಾಯವೇ? ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋದರೆ ಕ್ವಾರಂಟೈನ್ ನಲ್ಲಿರಬೇಕೆ? ಎಂಬ ಹಲವು ಪ್ರಶ್ನೆಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಪಡೆದುಕೊಳ್ಳಬಹುದು.
ಸುಮಾರು ಎರಡು ತಿಂಗಳ ಬಳಿಕ ಆರಂಭವಾದ ಬಸ್ ಸಂಚಾರ, ಶ್ರಮಿಕ ರೈಲು ನಂತರ ಪ್ಯಾಸೆಂಜರ್ ರೈಲು ಸಂಚಾರ, ವಂದೇ ಭಾರತ್ ಮಿಷನ್ ವಿಶೇಷ ವಿಮಾನ ನಂತರ ದೇಶಿ ವಿಮಾನಯಾನ ಸಂಪರ್ಕ ಎಲ್ಲದರಲ್ಲೂ ಪಾಲಿಸಬೇಕಾದ ನಿಗದಿತ ಕಾರ್ಯಾಚರಣೆ ವಿಧಾನಗಳನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಹಾಗೂ ಮಾರ್ಗಸೂಚಿಯನ್ನು ಇಲ್ಲಿ ಇನ್ಫೋಗ್ರಾಫಿಕ್ಸ್ ರೂಪದಲ್ಲಿ ನೀಡಲಾಗಿದೆ.
ವಿನ್ಯಾಸ: ಭರತ್ ಎಚ್. ಸಿ
1. ವಲಸೆ ಕಾರ್ಮಿಕರ ರೈಲು ಸಂಚಾರಕ್ಕೆ ಮಾರ್ಗಸೂಚಿ

2. ಪ್ಯಾಸೆಂಜರ್ ರೈಲು ಪ್ರಯಾಣಿಕರಿಗೆ ಮಾರ್ಗಸೂಚಿ

3. ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?

4. ದೇಶಿ ವಿಮಾನ ಸಂಚಾರದ ವೇಳೆ ಪಾಲಿಸಬೇಕಾದ ನಿಯಮಗಳು

5. ಕೆಎಸ್ಸಾರ್ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ನಿಯಮಗಳು

6. ಕೆಎಸ್ಸಾರ್ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ನಿಯಮಗಳು

ಇದು ಅಂತಾರಾಷ್ಟ್ರೀಯ ಹಾಗೂ ದೇಶೀಯ ಪ್ರಯಾಣಿಕರಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗಸೂಚಿಯಾಗಿದೆ.ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. ಏಳು ದಿನಗಳ ಕಾಲ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಇರಲಿದ್ದು, ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.












Click it and Unblock the Notifications