ಕೋವಿಡ್ ಗೆದ್ದವರು ಪ್ಲಾಸ್ಮಾ ದಾನ ಮಾಡುವುದು ಹೇಗೆ?
ಬೆಂಗಳೂರು, ಆಗಸ್ಟ್ 16 : ಕೊರೊನಾ ವೈರಸ್ ಸೋಂಕಿತರು ಗುಣಮುಖರಾದ ಬಳಿಕ ಪ್ಲಾಸ್ಮಾ ದಾನ ಮಾಡಬಹುದು. ಕೋವಿಡ್ ಸೋಂಕು ತೀವ್ರಗೊಂಡವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಪ್ಲಾಸ್ಮಾ ದಾನ ಮಾಡಿ ಎಂದು ಕರ್ನಾಟಕ ಸರ್ಕಾರ ಜನರಿಗೆ ಮನವಿ ಮಾಡಿದೆ. ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು, ಗುಣಮುಖರಾದ 28 ದಿನಗಳ ಬಳಿಕ ಪ್ಮಾಸ್ಮಾ ದಾನ ಮಾಡಬಹುದಾಗಿದೆ. ದಾನಿಗಳ ಪೋಷಣೆ ಮತ್ತು ಆರೈಕೆಗಾಗಿ 5 ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತದೆ.
18 ರಿಂದ 60 ವರ್ಷ ಎಲ್ಲಾ ಪುರುಷರು, ಗರ್ಭ ಧರಿಸದೇ ಇರುವ ಮಹಿಳೆಯರು ಪ್ಲಾಸ್ಮಾ ದಾನವನ್ನು ಮಾಡಬಹುದಾಗಿದೆ ಎಂದು ಸರ್ಕಾರ ಹೇಳಿದೆ. ಇದೊಂದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ. ಯಾರೂ ಸಹ ಆತಂಕಗೊಳ್ಳುವ ಅಗತ್ಯವಿಲ್ಲ.
ಯಾವುದೇ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬೇಕಾದರೆ ವ್ಯಕ್ತಿಯ ದೇಹದ ತೂಕ 50 ಕೆಜಿಗಿಂತ ಹೆಚ್ಚಿರಬೇಕು. ದಾನ ಮಾಡುವವರು ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ.













Click it and Unblock the Notifications