ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ಆಗಸ್ಟ್ 7ರ ಬೆಲೆ ಹೀಗಿದೆ...
ನವದೆಹಲಿ, ಆಗಸ್ಟ್ 07: ದೇಶಾದ್ಯಂತ ಆಗಸ್ಟ್ ತಿಂಗಳಿನಲ್ಲಿ ಚಿನ್ನದ ಬೆಲೆ ಕುಸಿತ ಕಂಡುಬಂದಿದ್ದು, ಆಗಸ್ಟ್ 07ರಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಶನಿವಾರ ಚಿನ್ನದ ಬೆಲೆಯಲ್ಲಿ ಅಧಿಕ ಮಟ್ಟದಲ್ಲಿ ಇಳಿಕೆಯಾಗಿದ್ದು, ಹಬ್ಬಕ್ಕೆ ಚಿನ್ನ ಖರೀದಿಸಲು ಪ್ಲಾನ್ ಹಾಕಿಕೊಂಡಿದ್ದವರಿಗೆ ಇದು ಉತ್ತಮ ಅವಕಾಶ ಎಂದೇ ಹೇಳಬಹುದು.
ಬೆಳ್ಳಿ ಬೆಲೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡುಬಂದಿದೆ. ಕೆ.ಜಿ ಬೆಳ್ಳಿಗೆ ಸಾವಿರ ರೂವರೆಗೂ ಇಳಿಕೆಯಾಗಿದೆ. ಜುಲೈನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ ಆಗಸ್ಟ್ ಆರಂಭದಿಂದಲೂ ಇಳಿಕೆ ಹಾದಿಯಲ್ಲಿದೆ. ಸತತ ಏಳು ದಿನಗಳ ಕಾಲ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 2.21% ರಷ್ಟು ಇಳಿಕೆಯಾಗಿ 1,763.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.22%ರಷ್ಟು ಇಳಿಕೆಯಾಗಿ 24.34 ಯುಎಸ್ ಡಾಲರ್ ಆಗಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 750 ರೂ ಇಳಿಕೆಯಾಗಿ 46,000 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 820 ರೂ ಇಳಿಕೆಯಾಗಿ 50,180 ರೂ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 750 ರೂ ಇಳಿಕೆಯಾಗಿ 44,850 ರೂ ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 820 ರೂ ಇಳಿಕೆಯಾಗಿ 47,840 ರೂ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ ಚೆನ್ನೈ, ಹೈದರಾಬಾದ್‌ನಲ್ಲಿ 1500 ರೂ ಇಳಿಕೆಯಾಗಿ 70,200 ರೂ ಆಗಿದ್ದರೆ, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 1600 ರೂ ಇಳಿಕೆಯಾಗಿ, 65,000 ರೂಪಾಯಿ ಆಗಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿತವಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
10 ಗ್ರಾಂ ಚಿನ್ನಕ್ಕೆ 1000 ರೂ ತಗ್ಗುವ ಸಾಧ್ಯತೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆಗೊಂಡಿರುವ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಚಿನ್ನದ ಬೆಲೆ 10 ಗ್ರಾಂಗೆ 1,000 ರೂಪಾಯಿಗಳಷ್ಟು ತಗ್ಗುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ.
ಹೇಗಿದೆ ಚಿನ್ನದ ವಹಿವಾಟು?
2014 ರ ನಂತರ ಮೊದಲ ಬಾರಿಗೆ 2021ರ ಮೊದಲ ಆರು ತಿಂಗಳಲ್ಲಿ ಅತಿ ಹೆಚ್ಚಿನ ನಿವ್ವಳ ಹೊರಹರಿವು ದಾಖಲಾಗಿದೆ. ಆರ್‌ಬಿಐಗಳು ತ್ರೈಮಾಸಿಕದಲ್ಲಿ ನಿರಂತರವಾಗಿ ಚಿನ್ನ ಖರೀದಿ ನಡೆಸಿದ್ದವು. ಜಾಗತಿಕ ಚಿನ್ನದ ಮೀಸಲು ಎರಡನೇ ತ್ರೈಮಾಸಿಕದಲ್ಲಿ 199.9 ಟನ್‌ಗೆ ಏರಿಕೆಯಾಗಿದೆ. ಗ್ರಾಹಕರು ಮತ್ತು ಚಿಲ್ಲರೆ ಹೂಡಿಕೆದಾರರು ಮರು ಖರೀದಿ ಮಾಡುತ್ತಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಕಡಿಮೆ ಸ್ಥಿರತೆ ಪ್ರದರ್ಶಿಸಿದ್ದಾರೆ.
ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಆಗಸ್ಟ್ 07ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್.ಸಿ.













Click it and Unblock the Notifications