Valentine's Day 2023 Horoscope: ಫೆಬ್ರವರಿ 14 ಪ್ರೇಮಿಗಳ ದಿನ ಹೇಗಿದೆ ನಿಮ್ಮ ಪ್ರೀತಿ ಜಾತಕ ತಿಳಿಯಿರಿ...
ಮೊದಲ ಬಾರಿಗೆ ಪ್ರಪೋಸ್ ಮಾಡ್ತಾಯಿದ್ದೀರಾ? ಪ್ರಪೋಸ್ ಮಾಡಬೇಕಾ ಬೇಡವಾ ಅನ್ನೋ ಭಯವಿದಿಯಾ? ಏನಾಗಬಹುದು ಅನ್ನೋ ಆತಂಕವಿದಿಯಾ? ಹಾಗಾದರೆ ಫೆಬ್ರವರಿ 14 ಪ್ರೇಮಿಗಳ ದಿನ ಹೇಗಿದೆ ನಿಮ್ಮ ಪ್ರೇಮ ಜಾತಕ ತಿಳಿಯಿರಿ.
ಫೆಬ್ರವರಿ 14 ಪ್ರೇಮಿಗಳ ದಿನ. ಯಾವ ದಿನ ಪ್ರೇಮಿಗಳದಲ್ಲ ಹೇಳಿ. ಎಲ್ಲಾ ದಿನವೂ ಪ್ರೇಮಿಗಳ ದಿನವೇ. ಆದರೆ ಈ ಪ್ರೀತಿಯನ್ನ ದಿನಾ ತೋರಿಸಿಕೊಳ್ಳಲು ಅಥವಾ ವ್ಯಕ್ತಪಡಿಸಲು ಆಗುವುದಿಲ್ಲ. ಬಿಡುವಿಲ್ಲದೆ ಕೆಲಸಗಳ ಮಧ್ಯ ನಾವು ನಮ್ಮವರಿಗಾಗಿ ನೀಡಬೇಕಾದ ಸಮಯ ಹಾಗೂ ಹೇಳಬೇಕಾದ ಅದೆಷ್ಟೋ ವಿಚಾರಗಳನ್ನು ಮರೆತುಬಿಟ್ಟಿರುತ್ತೇವೆ. ಇದಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಆ ದಿನವೇ ಪ್ರೇಮಿಗಳ ದಿನ. ಈ ದಿನಕ್ಕೆ ಪ್ರೇಮಿಗಳು ಕುತೂಹಲದಿಂದ ಕಾಯುತ್ತಾರೆ. ತಮ್ಮ ಪ್ರೀತಿ ಪಾತ್ರರು ತಮಗಾಗಿ ಯಾವ ಉಡುಗೊರೆಗಳನ್ನು ನೀಡುತ್ತಾರೆ? ಏನನ್ನು ಹೇಳುತ್ತಾರೆ? ಎಲ್ಲಗೆ ಕರೆದುಕೊಂಡು ಹೋಗುತ್ತಾರೆ? ಹೀಗೆ ಒಂದಲ್ಲಾ ಎರಡಲ್ಲ ಹತ್ತಾರೂ ನಿರೀಕ್ಷೆಗಳಿರುತ್ತವೆ. ಈ ದಿನ ಈ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುವ ಮೂಲಕ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ ಪ್ರೇಮಿಗಳು.
ಈ ದಿನ ವಿವಾಹಿತರು ವಿಶೇಷವಾಗಿ ಪ್ರೇಮಿಗಳಿಗೆ, ಪ್ರೇಮ ಪ್ರಸ್ತಾಪಕ್ಕಾಗಿ ಒಂದೊಳ್ಳೆ ಸಮಯವನ್ನು ಕಾಯುತ್ತಿರುವವರಿಗೆ ತುಂಬಾ ವಿಶೇಷವಾಗಿದೆ. ಪ್ರೇಮಿಗಳ ದಿನವನ್ನು ಒಂದುವಾರ ಮುಂಚಿತವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಫೆಬ್ರವರಿ 8 ಪ್ರಪೋಸ್ ಡೇ, ಫೆಬ್ರವರಿ 9 ಚಾಕೊಲೇಟ್ ಡೇ, ಫೆಬ್ರವರಿ 10 ಟೆಡ್ಡಿ ಡೇ, ಫೆಬ್ರವರಿ 11 ಪ್ರಾಮಿಸ್ ಡೇ, ಫೆಬ್ರವರಿ 12 ಹಗ್ ಡೇ ಮತ್ತು ಫೆಬ್ರವರಿ 13 ಕಿಸ್ ಡೇ, ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ದಿನ ನಿಮ್ಮ ಜಾತಕ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ಮೇಷ: ಪ್ರೀತಿಯ ಜೀವನ ಸುಖಮಯ
ಈ ಪ್ರೇಮಿಗಳ ದಿನ ಮೇಷ ರಾಶಿಯವರಿಗೆ ಮಿಶ್ರವಾಗಿರುತ್ತದೆ. ಮೇಷ ರಾಶಿಯ ಅವಿವಾಹಿತರಿಗೆ ಬಯಸಿದ ಸಂಗಾತಿ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಯಾರ ಮೇಲಾದರೂ ಪ್ರೀತಿ ಹುಟ್ಟಿದ್ದರೆ ಅವರೊಂದಿಗೆ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಇದು ಉತ್ತಮ ಸಮಯ. ಅವರಿಗಾಗಿ ನೀವು ಇಂದು ಸರ್ಪೈಸ್ ಕೊಡಬಹುದು. ಪ್ರವಾಸವನ್ನು ಯೋಜಿಸಬಹುದು. ಈ ರಾಶಿಯ ಜನರು ತಮ್ಮ ಸಂಗಾತಿಯನ್ನು ಅತ್ಯಂತ ಕಾಳಜಿಯಿಂದ ಪ್ರೀತಿಸುತ್ತಾರೆ. ನಿಮ್ಮ ಪ್ರೀತಿಯ ಜೀವನ ಸುಖಮಯವಾಗಿರುತ್ತದೆ. ಈ ವ್ಯಾಲೆಂಟೈನ್ ವಾರದಲ್ಲಿ ನಿಮ್ಮ ಸಂಗಾತಿಯನ್ನು ಹುಡುಕಲು ನಿಮಗೆ ಅವಕಾಶಗಳಿವೆ.

ವೃಷಭ: ನಿಷ್ಠಾವಂತ ಪ್ರೇಮಿ
ವೃಷಭ ರಾಶಿಯವರು ಮೊಂಡುತನದವರಾಗಿರುತ್ತಾರೆ. ಆದರೆ ಅವರು ಕರುಣಾಮಯಿ. ಅವರು ನಿಷ್ಠಾವಂತ ಪ್ರೇಮಿಯಾಗಿರುತ್ತಾರೆ. ಸಂಗಾತಿಗೆ ಪ್ರೀತಿ ನೀಡುವುದರಲ್ಲಿ ಕಡಿಮೆ ಇರುವುದಿಲ್ಲ. ತಮ್ಮ ಪ್ರೀತಿ ಬೇಡಿದ್ದನ್ನು ನೀಡುವ ಧಾರಳ ಮನಸ್ಸಿನವರಾಗಿರುತ್ತಾರೆ. ಈ ರಾಶಿಯವರನ್ನು ಪ್ರೀತಿಸುವ ಜನರು ಅಧಿಕವಾಗಿರುತ್ತಾರೆ. ನಿಮ್ಮ ಆಕರ್ಷಕ ನೋಟ ನೋಡುಗರನ್ನು ಸೆಳೆಯುತ್ತಾದೆ. ನಿಮ್ಮ ಮಾತಿಗೆ ಮರುಳಾಗದವರಿಲ್ಲ. ಹೀಗಾಗಿ ಈ ದಿನ ಬಯಸಿದ ಸಂಗಾತಿಯ ನಿರೀಕ್ಷೆಯಲ್ಲಿರುವವರಿಗೆ ಈ ದಿನ ಉತ್ತಮವಾಗಿದೆ. ವೃಷಭ ರಾಶಿಯವರು ಈ ವ್ಯಾಲೆಂಟೈನ್ ವಾರದಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಬಹುದು.

ಮಿಥುನ: ಮಾತಿನಲ್ಲಿ ಮೋಡಿ
ಮಿಥುನ ರಾಶಿಯವರಿಗೆ ಫೆಬ್ರವರಿ 14 ವಿಶೇಷವಾಗಿರುತ್ತದೆ. ಈ ರಾಶಿಯವರು ತಮ್ಮನ್ನು ತಾವು ಪ್ರೇಯಸಿ ಮುಂದೆ ಉತ್ತಮವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ನಿಮ್ಮ ಮಾತಿಗೆ ಮೋಡಿ ಮಾಡುವ ಶಕ್ತಿಯಿದೆ. ನಗುವಿಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ. ಅಂಥ ಸೊಗಸಾದ ಮಾತಿನ ಕಲೆ ನಿಮಗಿದೆ. ಆದರೆ ನೀವು ಮಾತಿನ ಮೇಲೆ ನಿಲ್ಲಬೇಕು. ನಿರ್ಧಾರಗಳನ್ನು ಬದಲಿಸುವುದು ಒಳ್ಳೆಯದಲ್ಲ. ಬೇರೊಬ್ಬರ ಮನಸ್ಸಿನ ಜತೆಗೆ ಆಟವಾಡುವುದು ತರವಲ್ಲ. ನಿಮ್ಮ ಮನಸ್ಸಿನಲ್ಲಿರುವ ಪ್ರೇಮ ನಿವೇದನೆ ಮಾಡಲು ಅಡ್ಡಿಯಿಲ್ಲ.

ಕಟಕ: ತಪ್ಪುಗ್ರಹಿಕೆಗಳು ನಿವಾರಣೆ
ಈ ರಾಶಿಯವರು ತುಂಬಾನೇ ರೊಮ್ಯಾಂಟಿಕ್. ಇವರು ಕಾಲ್ಪನಿಕ ಪ್ರೇಮ ಕಥೆಗಳು ನಂಬುತ್ತಾರೆ. ಎಲ್ಲವನ್ನೂ ಪ್ರೀತಿಸುತ್ತಾರೆ. ಈ ವ್ಯಾಲೆಂಟೈನ್ ದಿನ ನಿಮ್ಮ ಪ್ರೀತಿ ಮತ್ತು ಸ್ನೇಹದ ಬಂಧಗಳು ಬಲಗೊಳ್ಳುತ್ತವೆ. ಹಿಂದಿನ ಎಲ್ಲಾ ತಪ್ಪುಗ್ರಹಿಕೆಗಳು ನಿವಾರಣೆಯಾಗುತ್ತವೆ ಮತ್ತು ಕರ್ಕಾಟಕ ರಾಶಿಯವರು ತಮ್ಮ ಸಂಬಂಧಗಳಲ್ಲಿ ಉತ್ಸಾಹ ಮತ್ತು ಉಲ್ಲಾಸವನ್ನು ಅನುಭವಿಸುತ್ತಾರೆ. ಈ ದಿನವನ್ನು ಪೂರ್ಣವಾಗಿ ಆನಂದಿಸುವಿರಿ. ನೀವು ಈ ಬಾರಿ ಪ್ರೇಮ ನಿವೇದನೆ ಮಾಡಬಹುದು. ಆದರೆ ಒಂದೇ ಸಲಕ್ಕೆ ಆಗುವ ಸಾಧ್ಯತೆ ಇಲ್ಲ. ಆದರೆ ಬೆನ್ನು ಬಿದ್ದು ಪ್ರಯತ್ನಿಸಿದರೆ, ಹಾಗಂತ ತೊಂದರೆ ಕೊಡಿ ಅಂತಲ್ಲ. ಪ್ರೇಮ ನಿವೇದನೆ ಮಾಡಿದ ನಂತರ ಎದುರಿನವರ ಅಭಿಪ್ರಾಯವನ್ನು ತಿಳಿಸುವುದಕ್ಕೆ ಸ್ವಲ್ಪ ಸಮಯ ಕೊಡಿ.

ಸಿಂಹ: ನಿಷ್ಠೆ ಮತ್ತು ಪ್ರೀತಿಗೆ ಹೆಸರುವಾಸಿ
ಸಿಂಹ ರಾಶಿಯವರು ತಮ್ಮ ನಿಷ್ಠೆ ಮತ್ತು ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ವ್ಯಾಲೆಂಟೈನ್ಸ್ ವೀಕ್ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ನಿರ್ಭಯವಾಗಿ ಬಳಸಬಹುದು. ಸಿಂಹ ರಾಶಿಯವರು ಪ್ರೀತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಭಾವನೆಗಳನ್ನು ಬುದ್ಧಿವಂತಿಕೆಯಿಂದ ವ್ಯಕ್ತಪಡಿಸಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮಯವನ್ನು ನೀಡಿ. ಮನಸ್ಸಿನಲ್ಲಿ ಯಾರಾದರೂ ಇದ್ದರೆ, ನೀವು ವಿವಾಹ ವಯಸ್ಕರಾಗಿದ್ದರೆ ಪೋಷಕರ ಮೂಲಕ ಒಮ್ಮೆ ಪ್ರಯತ್ನಿಸಿ ನೋಡಿ. ಹಾಗಂತ ನೀವು ಅಂದುಕೊಂಡ ಉತ್ತರವೇ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಕನ್ಯಾ: ವಿಪರೀತ ಬುದ್ಧಿವಂತಿಕೆ
ಕನ್ಯಾರಾಶಿಯವರು ಅತ್ಯಂತ ನೇರವಾಗಿ ಮಾತನಾಡುವವರಾಗಿರುತ್ತಾರೆ. ಗಡಿಬಿಡಿಯಿಂದ ಕೂಡಿರುತ್ತಾರೆ. ವ್ಯಾಲೆಂಟೈನ್ಸ್ ಡೇ ಮತ್ತೊಂದು ದಿನ ಮಾಡಿದರಾಯ್ತು ಎನ್ನುವ ಅಸಡ್ಡೆ. ಮಾತ್ರವಲ್ಲದೆ ನೀವು ವಿಪರೀತ ಮಾತಿನಮಲ್ಲರು. ವಿಪರೀತ ಬುದ್ಧಿವಂತಿಕೆ ತೋರಿಸುತ್ತೀರಿ. ಅತಿಯಾದ ಆತ್ಮವಿಶ್ವಾಸ ಬೇಡ. ಎಲ್ಲವೂ ತಾನಾಗಿ ಆಗಲಿ ಎಂದು ಕಾಯುವುದು ಬೇಡ. ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಆಲಸ್ಯ ಮಾಡದೆ ಆದಷ್ಟು ಬೇಗ ತಿಳಿಸಿದರೆ ಒಳ್ಳೆಯದು. ನಾಳೆ- ನಾಡಿದ್ದು ಎಂದು ಮುಂದಕ್ಕೆ ಹಾಕಬೇಡಿ. ಕನ್ಯಾ ರಾಶಿಯವರು ಈ ಪ್ರೇಮಿಗಳ ವಾರದಲ್ಲಿ ತಮ್ಮ ಕಳೆದುಹೋದ ಪ್ರೀತಿಯನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಫೆಬ್ರವರಿ 14 ಕನ್ಯಾ ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಿದೆ.

ತುಲಾ: ಪ್ರೀತಿಯಲ್ಲಿ ಶ್ರೀಮಂತರು
ತುಲಾ ರಾಶಿಯವರು ಈ ದಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಈ ವ್ಯಾಲೆಂಟೈನ್ ವಾರದಲ್ಲಿ ತಮ್ಮ ಸಂಗಾತಿಗೆ ಮರೆಯಲಾಗದ ಅನುಭವವನ್ನು ನೀಡಲು ಬಯಸುತ್ತಾರೆ. ಆದರೂ ಪ್ರೀತಿ- ಪ್ರೇಮ ವಿಚಾರದಲ್ಲಿ ನೀವು ಬಹಳ ಎಚ್ಚರದಿಂದ ಇರಬೇಕು. ನಿಮ್ಮನ್ನು ಮೋಸಗೊಳಿಸುವವರು ಇರುತ್ತಾರೆ. ನಿಮ್ಮ ಜೀವನದಲ್ಲಿ ಇದಕ್ಕೂ ಮುಖ್ಯವಾದ ವಿಚಾರ ಬಹಳ ಇದೆ. ಇಲ್ಲ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲೇ ಬೇಕು ಎಂದು ಹಠ ಮಾಡಿ ಪಡೆದರೂ ತೀರಾ ನೆಮ್ಮದಿಯಾಗಿ ನೀವು ಇರುವುದಕ್ಕೆ ಆಗುವುದಿಲ್ಲ. ವಿಪರೀತ ನಿರೀಕ್ಷೆ ಬೇಡ. ಫೆಬ್ರವರಿ 14 ಈ ರಾಶಿಯವರಿಗೆ ಪ್ರೀತಿ ಮತ್ತು ಪ್ರಣಯಕ್ಕೆ ವಿಶೇಷವಾಗಿರುತ್ತದೆ.

ವೃಶ್ಚಿಕ: ಸೌಂದರ್ಯ ಪ್ರಜ್ಞೆ
ವೃಶ್ಚಿಕ ರಾಶಿಯವರು ತುಂಬಾ ಫ್ಯಾಶನ್ ಮಾಡುತ್ತಾರೆ. ಅವರಲ್ಲಿರುವ ಸೌಂದರ್ಯ ಪ್ರಜ್ಞೆಯಿಂದ ಆಕರ್ಷಿತರಾಗಿರುತ್ತಾರೆ. ಎಲ್ಲರ ಗಮನ ಅವರ ಮೇಲಿರುತ್ತದೆ. ಈ ವಾರದಲ್ಲಿ ಈ ರಾಶಿಯವರಿಗೆ ಹೆಚ್ಚು ಪ್ರೇಮ ಪ್ರಸ್ತಾಪಗಳು ಬರಬಹುದು. ಪ್ರೇಮ ಕವನ, ಸಂಗೀತ, ಹೃತ್ಪೂರ್ವಕ ಪ್ರೇಮ ಪತ್ರ, ಉಡುಗೊರೆಗಳು ಬರಬಹುದು. ಆದರೆ ನೀವು ಪ್ರೀತಿ-ಪ್ರೇಮದಿಂದ ದೂರ ಇರಿ. ಇದರಿಂದ ನಿಮ್ಮ ಪೋಷಕರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಹುಷಾರಾಗಿರಿ. ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಎಷ್ಟೇ ಹೇಳಿದರೂ ಪ್ರೀತಿ-ಪ್ರೇಮದಲ್ಲಿ ಬೀಳುತ್ತೀರಾ. ಪೋಷಕರನ್ನು ಎದುರು ಹಾಕಿಕೊಳ್ಳುತ್ತೀರಾ ಎಂಬುದು ಗೋಚರಿಸುತ್ತಿದೆ.

ಧನು: ಸ್ವಭಾವದಲ್ಲಿ ಬದಲಾವಣೆ ಅಗತ್ಯ
ನಾಚಿಕೆ ಬಿಡಬೇಕು ನೀವು. ಸಂಕೋಚ ಪಟ್ಟುಕೊಂಡರೆ ಆಗುವುದಿಲ್ಲ. ನೀವಂದುಕೊಂಡಿದ್ದು ಯಶಸ್ಸು ಕಾಣುತ್ತದೆ. ಆದರೆ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ನೀವು ನಿಜವಾದ ಪ್ರೀತಿಯನ್ನು ನಂಬುವಿರಿ. ಅವರು ತಮ್ಮ ಸಮಯವನ್ನು ಕ್ಷುಲ್ಲಕ ಕಾರಣಕ್ಕೆ ವ್ಯರ್ಥ ಮಾಡುವುದಿಲ್ಲ. ಈ ರಾಶಿಯವರು ಉತ್ತಮವಾದ ನಿರ್ಣಯದಿಂದಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ತಮ್ಮ ಪ್ರೀತಿಪಾತ್ರರೊಂದಿಗೆ ಅರ್ಥಪೂರ್ಣ ಮತ್ತು ಒಳ್ಳೆಯ ಸಮಯವನ್ನು ಕಳೆಯುತ್ತಾರೆ. ಧನು ರಾಶಿಯವರು ಈ ಪ್ರೇಮಿಗಳ ವಾರ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಹೊಂದಿರುತ್ತಾರೆ.

ಮಕರ: ದ್ವಿಸ್ವಭಾವ ಗುಣ
ಈ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಪ್ರಾಯೋಗಿಕ, ತರ್ಕಬದ್ಧ ಗುಣಗಳನ್ನು ಹೊಂದಿರುತ್ತಾರೆ. ನಿಮಗೆ ಯಾವಾಗಲೂ ದ್ವಿಸ್ವಭಾವ ಕಾಡುತ್ತದೆ. ಆದರೆ ಸಮಯ ನೋಡಿಕೊಂಡು, ನಿಧಾನವಾಗಿಯಾದರೂ ಹೇಳಿಕೊಳ್ಳಬಹುದು. ಆದರೆ ಇದೇ ಫೆಬ್ರವರಿ ಹದಿನಾಲ್ಕನೇ ತಾರೀಕೇ ಹೇಳಿಕೊಳ್ಳಬೇಕು ಎಂಬ ಆತರ ಬೇಡ. ಸಮಯಕ್ಕಾಗಿ ಕಾಯಿರಿ, ಒಂದೊಳ್ಳೆ ವಾತಾವರಣ, ಸಮಯ ನೋಡಿಕೊಂಡು ಪ್ರೀತಿ ನಿವೇದನೆ ಮಾಡಬಹುದು. ಮನೆಯಲ್ಲಿ ಸದ್ಯಕ್ಕೆ ನಿಮ್ಮ ಪ್ರೀತಿ ವಿಚಾರವನ್ನು ತಿಳಿಸುವುದು ಬೇಡ. ನಿಮ್ಮ ವಿವಾಹಕ್ಕೆ ಇನ್ನೂ ತುಂಬಾ ಸಮಯವಿದೆ.

ಕುಂಭ: ನಾಚಿಕೆ ಸ್ವಭಾವ
ಕುಂಭ ರಾಶಿಯವರು ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ನೀವು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತೀರಿ. ಪ್ರೀತಿ ಮತ್ತು ಪ್ರಣಯವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ವರ್ಷವಿಡೀ ಆಚರಿಸುವರು. ಅದೃಷ್ಟವು ಅವರನ್ನು ಬೆಂಬಲಿಸುತ್ತದೆ ಮತ್ತು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಆದಷ್ಟು ಬೇರೆಯವರ ಮಾತನ್ನು ನಂಬಬೇಡಿ. ನಿಮ್ಮ ಮನಸ್ಸಿನ ಮಾತನ್ನು ಕೇಳಿ.

ಮೀನ: ಅತ್ಯಂತ ಉದಾರ ಹೃದಯ
ಮೀನ ರಾಶಿಯವರು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಕೊಡುವ ಸ್ವಭಾವದವರಾಗಿರುತ್ತಾರೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ಅತ್ಯಂತ ಉದಾರ ಹೃದಯವನ್ನು ಹೊಂದಿರುತ್ತಾರೆ. ಈ ಹೃದಯವನ್ನು ಯಾರಾದರೂ ಕದಿಯಬಹುದು. ಆದರೆ ಅಷ್ಟು ಸುಲಭಕ್ಕೆ ಸಿಗುವಂತವರು ನೀವಾಗಿರುವುದಿಲ್ಲ. ಅವರ ಸ್ನೇಹಿತರು, ಕುಟುಂಬ ಮತ್ತು ಪಾಲುದಾರರ ನೆಚ್ಚಿನವರಾಗಿರುತ್ತಾರೆ. ಉತ್ಸಾಹದಿಂದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಈ ವಾರ ಮೀನ ರಾಶಿಯವರಿಗೆ ಪ್ರೀತಿ ಮತ್ತು ಪ್ರಣಯಕ್ಕೆ ಅನುಕೂಲಕರವಾಗಿರುತ್ತದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications