ಪ್ರೇಮ ಗುರು ವ್ಯಾಲೆಂಟೈನ್ ನೆನಪಾಗುವುದೇಕೆ?
ಹಾಗೆ ನೋಡಿದರೆ ಫೆ.14 ಅಂದ್ರೆ ಒಳಗೆ ಸುಪ್ತವಾಗಿದ್ದ ಪ್ರೇಮ ಕಾರಂಜಿಯಾಗಿ ಚಿಮ್ಮುವ ದಿನ. ಹೀಗಾಗಿ ಜಗತ್ತಿನಾದ್ಯಂತ ಪ್ರೇಮಿಗಳಿಗೆ ನೆನಪಾಗುವ ವ್ಯಕ್ತಿ ಎಂದರೆ ಪಾದ್ರಿ ವ್ಯಾಲೆಂಟೈನ್. ಆತ ಪ್ರೇಮಿಗಳ ಗುರು.
Recommended Video
ಫೆಬ್ರವರಿ 14: ಪ್ರೇಮ ಅಂದ್ರೆ ಸುಮ್ನೆನಾ..? ಎಲ್ಲ ಹೃದಯಕ್ಕೂ ಪ್ರೇಮದ ತಂತಿ ಮೀಟಿದ ಅನುಭವವಾಗಿರುತ್ತದೆ.. ಬಹಳಷ್ಟು ಜನರ ಬದುಕಿನಲ್ಲೂ ಪ್ರೇಮದ ಕಥೆಯೊಂದು ಗಿರಕಿ ಹೊಡೆದಿರುತ್ತದೆ..
ಇಲ್ಲಿ ಪ್ರೀತಿಸಿ ಗೆದ್ದವರು... ಪ್ರೀತಿಸಿ ಸೋತವರು.. ಪ್ರೀತಿಯಲ್ಲೇ ಮಿಂದೇಳುತ್ತಿರುವವರು ಇದ್ದೇ ಇದ್ದಾರೆ. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ... ಬಹುಶಃ ಈ ಪ್ರೇಮಲೋಕದಲ್ಲಿ ಪ್ರೀತಿಗೆ ಸೋಲದ ಹೃದಯಗಳೇ ಇಲ್ಲವೇನೋ..[ಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನ]
ಹಾಗೆ ನೋಡಿದರೆ ಫೆ.14 ಅಂದ್ರೆ ಒಳಗೆ ಸುಪ್ತವಾಗಿದ್ದ ಪ್ರೇಮ ಕಾರಂಜಿಯಾಗಿ ಚಿಮ್ಮುವ ದಿನ. ಹೀಗಾಗಿ ಜಗತ್ತಿನಾದ್ಯಂತ ಪ್ರೇಮಿಗಳಿಗೆ ನೆನಪಾಗುವ ವ್ಯಕ್ತಿ ಎಂದರೆ ಪಾದ್ರಿ ವ್ಯಾಲೆಂಟೈನ್. ಆತ ಪ್ರೇಮಿಗಳ ಗುರು. ಆತನ ನೆನಪಿಸಿಕೊಳ್ಳದೆ ಹೋದರೆ ವ್ಯಾಲೆಂಟೈನ್ ಡೇಗೆ ಅರ್ಥವೇ ಬಾರದೇನೋ...?[ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?]

ಪ್ರೇಮಾಚರಣೆಗೆ ಮೀಸಲು
ಹಾಗೆನೋಡಿದರೆ ಜಗತ್ತಿನಾದ್ಯಂತ ಆಚರಣೆ ಮಾಡೋದಕ್ಕೆ ಎಲ್ಲದಕ್ಕೂ ಒಂದೊಂದು ದಿನವಿದೆ. ಜತೆಗೆ ಕಾರಣಗಳೂ ಇವೆ. ಹಾಗೆಯೋ ಪ್ರೇಮಾಚರಣೆಗೆ ಈ ದಿನ ಮೀಸಲಾಗಿದೆ. ಒಟ್ಟಿಗೆ ಕಲೆತು ಸಂಭ್ರಮಿಸೋಕೆ ನಲ್ಲ-ನಲ್ಲೆಯರ ಕಿವಿಯಲ್ಲಿ ಲವ್‍ಯೂ ಎಂದು ಉಸುರೋಕೆ, ಗುಲಾಬಿ ನೀಡಿ ಪ್ರೇಮ ನಿವೇದನೆಗೆ, ಮಡಿಲ ಮೇಲೆ ತಲೆಯಿಟ್ಟು ಮೈಮರೆಯೋಕೆ, ಕೈಕೈ ಹಿಡಿದು ಖುಷಿಯಾಗಿ ಓಡಾಡೋಕೆ, ಮೈಮೈ ಬೆಸೆಯೋಕೆ ಹೀಗೆ ಒಂದೇ ಎರಡೇ ಬಹಿರಂಗ ಪ್ರೇಮ ಶೃಂಗಾರಕ್ಕೆ ನೂರಾರು ಆಯ್ಕೆಗಳು.. ಇವತ್ತು ಏನೇ ಮಾಡಿದರೂ ಅದು ಖುಷಿ ಕೊಡುತ್ತದೆ. ಅದಕ್ಕೆ ಕಾರಣ ವ್ಯಾಲೆಂಟೈನ್.

ಪ್ರೇಮ ಪೂಜಾರಿ
ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಪ್ರೇಮ ಪೂಜಾರಿ ವ್ಯಾಲೆಂಟೈನ್ ಸಿಗುತ್ತಾನೆ. ಆತ ತನ್ನ ಹೆಸರನ್ನು ಜಗತ್ತಿಗೆ ಅದರಲ್ಲೂ ಪ್ರೇಮಿಗಳಿಗೆ ಧಾರೆ ಎರೆದು ಹೋದ ಘಟನೆಯೊಂದು ಹೃದಯ ಹಿಂಡುತ್ತದೆ.

ಮದುವೆಯಾಗುವುದೇ ಅಪರಾಧ
ಅದು ಕ್ರಿ.ಶ. 269ನೇ ಇಸವಿಯ ದಿನಗಳು... ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾ ಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾ ಅಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‍ನ ಹುಚ್ಚುವಾದವಾಗಿತ್ತು.

ಮದುವೆಗೆ ಗಲ್ಲು ಶಿಕ್ಷೆ
ಹಾಗಾಗಿ ಆತ ಮದುವೆ ಎಂದರೆ ಕೆಂಡಾ ಮಂಡಲವಾಗುತ್ತಿದ್ದನು. ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು. ಹೀಗಿರುವಾಗ ಪ್ರೀತಿ, ಪ್ರೇಮಕ್ಕೆ ಅವಕಾಶವೇ ಇಲ್ಲ ಬಿಡಿ.

ನೊಂದ ಪಾದ್ರಿ
ದೊರೆ ಕ್ಲಾಡಿಯಸ್‍ನ ಈ ಹುಚ್ಚಾಟ ನೋಡಿದ ಪಾದ್ರಿಯೊಬ್ಬರ ಮನಸ್ಸು ನೊಂದಿತ್ತು. ದೊರೆಯ ಈ ವಿಚಿತ್ರ ನೀತಿ ಆ ಪಾದ್ರಿಗೆ ಹಿಡಿಸಲಿಲ್ಲ. ಪ್ರೀತಿ, ಪ್ರೇಮಕ್ಕೆ ಅಡ್ಡಿ ಪಡಿಸಿ, ಮದುವೆಯನ್ನೇ ತಡೆದರೆ ಸಂತತಿ ಬೆಳೆಯುವುದಾದರೂ ಹೇಗೆ? ಹೆಣ್ಣು-ಗಂಡು ಕಲೆತು ಬಾಳುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಆ ಪಾದ್ರಿಯನ್ನು ಕೊರೆಯಲಾರಂಭಿಸಿದವು.

ಪ್ರೀತಿಗಾಗಿ ಹೋರಾಟ
ಹೃದಯದ ತುಡಿತವನ್ನು ಅದುಮಿಡಲಾಗದೆ ಹೊರ ಹಾಕಿ ಸಿಕ್ಕಿ ಬೀಳುತ್ತಿದ್ದ ಪ್ರೇಮಿಗಳಿಗೆ ದೊರೆ ಕ್ಲಾಡಿಯಸ್ ಕಣ್ಣ ಮುಂದೆ ನೀಡುತ್ತಿದ್ದ ಕ್ರೂರ ಶಿಕ್ಷೆಗಳು ಪಾದ್ರಿಯನ್ನು ಕೆರಳಿಸಿತ್ತು. ಇನ್ನು ಮುಂದೆ ನಾನು ಕೈಕಟ್ಟಿ ಕೂರಬಾರದು. ದೊರೆಯ ಈ ಕೆಟ್ಟ ಸಂಪ್ರದಾಯಕ್ಕೆ ವಿರಾಮ ಹಾಡಲೇ ಬೇಕೆಂಬ ತೀರ್ಮಾನಕ್ಕೆ ಪಾದ್ರಿ ಬಂದರು.

ಗುಪ್ತ ಮದುವೆ
ದೊರೆ ಕ್ಲಾಡಿಯಸ್ ರಾಜ್ಯದಲ್ಲಿ ಪ್ರೀತಿ, ಪ್ರೇಮ ಮಾಡಬಾರದು, ಮದುವೆಯಾಗಬಾರದು ಎಂಬ ರಾಜಾಜ್ಞೆಯನ್ನು ಖಂಡಿಸಿದ ಪಾದ್ರಿ ಅದರ ವಿರುದ್ಧವೇ ತಿರುಗಿ ಬಿದ್ದರು. ನನ್ನ ತಲೆ ತೆಗೆದರೂ ತೊಂದರೆಯಿಲ್ಲ. ಈ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲೇ ಬೇಕೆಂಬ ಹಠಕ್ಕೆ ಬಿದ್ದರು. ದೊರೆ ಕ್ಲಾಡಿಯಸ್‍ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದರು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ದೊರೆ ಕ್ಲಾಡಿಯಸ್‍ನ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ಪಾದ್ರಿಯ ಮೇಲೆ ಕೆಂಡಾ ಮಂಡಲನಾದನಲ್ಲದೆ, ಪಾದ್ರಿಗೆ ಮರಣದಂಡನೆಯನ್ನು ವಿಧಿಸಿದ ಕ್ಲಾಡಿಯಸ್.

ಗಲ್ಲಿಗೇರಿದ ದಿನ
ಅದರಂತೆ ಫೆಬ್ರವರಿ 14ರಂದು ಆ ಪಾದ್ರಿಯನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಆ ಪಾದ್ರಿಯೇ ವ್ಯಾಲೆಂಟೈನ್. ಪ್ರೇಮಿಗಳನ್ನು ಒಗ್ಗೂಡಿಸಿ ಮದುವೆಯ ಮಧುರ ಬಂಧಕ್ಕೆ ಸೇರಿಸುತ್ತಿದ್ದ ಪಾದ್ರಿ ವ್ಯಾಲೆಂಟೈನ್‍ನ ಸ್ಮರಣೆಗಾಗಿ ಗಲ್ಲಿಗೇರಿಸಿದ ಆ ದಿನವನ್ನು ವ್ಯಾಲೆಂಟೈನ್ ಡೇ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರೇಮಲೋಕ
ವ್ಯಾಲೆಂಟೈನ್ ಡೇಯನ್ನು ಪಾಶ್ಚಿಮಾತ್ಯರು ಹಬ್ಬದಂತೆ ಆಚರಿಸುತ್ತಾರೆ. ಶುಭಾಷಯದ ವಿನಿಮಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಾರೆ. ಒಂದೆಡೆ ಪ್ರೇಮಿಗಳು ಒಟ್ಟಾಗಿ ಕಲೆತು ಮೋಜು ಮಸ್ತಿಯಲ್ಲಿ ತೊಡಗುವುದರ ಮೂಲಕ ಪ್ರೇಮಲೋಕದಲ್ಲಿ ವಿಹರಿಸುತ್ತಾ ಮೈಮರೆತು ತೇಲಾಡುತ್ತಾರೆ.

ಕೃಷ್ಣ ರುಕ್ಮಿಣಿಯಂತಿರಲಿ
ಪಾಶ್ಚಿಮಾತ್ಯರಿಗೆ ಹೋಲಿಸಿದರೆ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಪ್ರೀತಿ, ಪ್ರೇಮಕ್ಕೆ ಗೌರವಿದೆ. ಹಾಗಾಗಿ ಅದಕ್ಕೆ ಕಾಮದ ವಾಸನೆ ಬೆರೆಸದೆ, ಮೈಮರೆತು ಪ್ರಮಾದ ಮಾಡಿಕೊಳ್ಳದೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಿ..
ನಿಮ್ಮ ಪ್ರೇಮ ರೋಮಿಯೋ-ಜೂಲಿಯಟ್‍ನಂತೆ ದುರಂತ ಅಂತ್ಯ ಕಾಣದೆ ಕೃಷ್ಣ-ರುಕ್ಮಿಣಿಯಂತೆ ನವೀರಾಗಿರಲಿ...
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications