Ravan Dahan 2024: ದಸರಾದಲ್ಲಿ ರಾವಣ ದಹನ: ಈ ಸಂಪ್ರದಾಯ ಬಂದಿದ್ದು ಯಾವಾಗ?
ನಾಳೆ ಕನ್ಯಾ ಪೂಜೆಯೊಂದಿಗೆ ನವರಾತ್ರಿಯ ಹಬ್ಬ ಕೊನೆಗೊಳ್ಳಲಿದೆ. ಅಕ್ಟೋಬರ್ 12ರ ಶನಿವಾರದಂದು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ದಸರಾದಂದು ವಿವಿಧ ಸ್ಥಳಗಳಲ್ಲಿ ರಾಮಲೀಲಾ ಆಯೋಜಿಸಲಾಗುತ್ತದೆ. ಅಕ್ಟೋಬರ್ 11ರಂದು ಭಾರತದೆಲ್ಲೆಡೆ ರಾವಣನ ಪ್ರತಿಮೆಯನ್ನು ಸುಟ್ಟು ಹಬ್ಬವನ್ನು ಆಚರಿಸಲಾಗುತ್ತದೆ.
ರಾವಣನ ಪ್ರತಿಕೃತಿಯನ್ನು ಸುಡುವ ಸಂಪ್ರದಾಯವು ಭಾರತದಲ್ಲಿ ದಸರಾ ಹಬ್ಬದ ಪ್ರಮುಖ ಭಾಗವಾಗಿದೆ. ಈ ಆಚರಣೆ ಬಹಳ ಹಿಂದಿನಿಂದಲೂ ಇದೆ. ದಸರಾದ ಈ ಸಂಪ್ರದಾಯವು ರಾವಣ ದಹನ್‌ನೊಂದಿಗೆ ಸಂಬಂಧಿಸಿದೆ. ಇದು ಭಗವಾನ್ ರಾಮನಿಂದ ರಾವಣನನ್ನು ಕೊಲ್ಲುವುದನ್ನು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ.

ಈ ಸಂಪ್ರದಾಯದ ಪ್ರಾರಂಭದ ಬಗ್ಗೆ ಯಾವುದೇ ನಿರ್ದಿಷ್ಟ ದಿನಾಂಕ ಲಭ್ಯವಿಲ್ಲ. ಆದರೆ ಈ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಾಮಾಯಣದ ಪ್ರಕಾರ, ಶ್ರೀರಾಮನು ಲಂಕಾದ ರಾಜನಾದ ರಾವಣನನ್ನು ಕೊಂದಾಗ, ಈ ವಿಜಯದ ನೆನಪಿಗಾಗಿ ಜನರು ರಾವಣನ ಪ್ರತಿಕೃತಿಗಳನ್ನು ಸುಡಲು ಪ್ರಾರಂಭಿಸಿದರು. ಈ ಪೌರಾಣಿಕ ಕಥೆಯನ್ನು ತ್ರೇತಾ ಯುಗದಿಂದ ಹೇಳಲಾಗಿದೆ. ಇದು ಮಾನವ ಇತಿಹಾಸದ ಪ್ರಾಚೀನ ಯುಗವಾಗಿದೆ.
ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಮೊದಲು ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು ಎಂದು ಹೇಳಲಾಗುತ್ತದೆ. ರಾಂಚಿಯು ಮೊದಲು ಬಿಹಾರದ ಭಾಗವಾಗಿದ್ದರೂ, ಈಗ ಅದು ಜಾರ್ಖಂಡ್‌ನ ಭಾಗವಾಗಿದೆ. ರಾವಣ ದಹನವನ್ನು 1948 ರಲ್ಲಿ ರಾಂಚಿಯಲ್ಲಿ ಮಾಡಲಾಯಿತು.

ಇನ್ನೂ ಆಧುನಿಕ ದಸರಾ ಆಚರಣೆಗಳ ಬಗ್ಗೆ ಮಾತನಾಡಿದರೆ, ಈ ಸಂಪ್ರದಾಯ ಉತ್ತರ ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ದೆಹಲಿಯಂತಹ ಪ್ರದೇಶಗಳಲ್ಲಿ 19 ನೇ ಶತಮಾನದಲ್ಲಿ ಹೆಚ್ಚು ಜನಪ್ರಿಯವಾಯಿತು. ಪ್ರಸ್ತುತ ಭಾರತದ ಬಹುತೇಕ ಭಾಗಗಳಲ್ಲಿ ದಸರಾ ದಿನದಂದು ರಾವಣ ದಹನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.
ರಾವಣ... ಹೆಸರು ಕೇಳಿದ ಕೂಡಲೇ ರಾಕ್ಷಸ, ದುಷ್ಟ, ಪರಸತಿ ವ್ಯಾಮೋಹಿ, ಭಯಂಕರ. ದುರುಳ ಹೀಗೆ ಒಳ್ಳೆಯದಕ್ಕಿಂತಲೂ ಕೆಟ್ಟ ಬಿರುದುಗಳೇ ನೆನಪಾಗುತ್ತವೆ. ದಸರಾ ಹಬ್ಬದ ದಿನದಂದು ಕೆಟ್ಟದ್ದನ್ನು ಸೂಚಿಸುವ ರಾವಣನ ಬೃಹತ್ ಪ್ರತಿಮೆ ತಯಾರಿಸಿ ಹಲವೆಡೆ ಸುಡಲಾಗುತ್ತದೆ. ಅಂದರೆ, ದುಷ್ಚರ ವಿರುದ್ಧ ವಿಜಯವನ್ನು ಸಾಧಿಸುವ ಹಬ್ಬವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.
ಅಕ್ಟೋಬರ್ 11ರಂದು ಭಾರತದೆಲ್ಲೆಡೆ ರಾವಣನ ಪ್ರತಿಮೆಯನ್ನು ಸುಟ್ಟು ಹಬ್ಬವನ್ನು ಆಚರಿಸುತ್ತಿರುವಾಗಲೇ ಮತ್ತೊಂದೆಡೆ ಇದೇ ನೆಲದಲ್ಲಿ ರಾಕ್ಷಸರ ರಾಜ, ಲಂಕಾಧಿಪತಿಯನ್ನು ಪೂಜಿಸುವ ಗ್ರಾಮವೂ ಇದೆ. ಮಹಾರಾಷ್ಟ್ರದಲ್ಲಿರುವ ಇದೊಂದು ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ರಾವಣವನ್ನು ಪೂಜಿಸಿ, ಆರಾಧಿಸಲಾಗುತ್ತಿದೆ.
ಮಹಾರಾಷ್ಟ್ರದ ಅಕೋಲಾ ಎಂಬ ಜಿಲ್ಲೆಯಲ್ಲಿ ರಾವಣವನನ್ನು ಪೂಜಿಸಲಾಗುತ್ತಿದೆ. ಈ ಗ್ರಾಮದಲ್ಲಿ ರಾವಣನ ಬೃಹತ್ ಪ್ರತಿಮೆಯಿದ್ದು, ಪ್ರತಿಮೆಯು 10 ತಲೆ ಹಾಗೂ 20 ಕೈಗಳನ್ನು ಹೊಂದಿದೆ.
ರಾವಣನ ಬುದ್ಧಿಶಕ್ತಿ ಹಾಗೂ ಆತನ ತಪಸ್ವಿ ಗುಣಗಳನ್ನು ಇಲ್ಲಿ ಆರಾಧಿಸಲಾಗುತ್ತದೆ. ಕಳೆದ 200 ವರ್ಷಗಳಿಂದಲೂ ಈ ಗ್ರಾಮದಲ್ಲಿ ರಾವಣನನ್ನು ಪೂಜಿಸಲಾಗುತ್ತಿದೆ ಎಂದು ಇಲ್ಲಿನ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ದಸರಾ ಸಂದರ್ಭದಲ್ಲಿ ದೇಶದ ಉಳಿದ ಭಾಗದಲ್ಲಿ ರಾವಣನ ಪ್ರತಿಮೆಯನ್ನು ಸುಡುತ್ತಾರೆ. ದುಷ್ಟರ ವಿರುದ್ಧ ಒಳಿತು ಗೆಲವು ಸಾಧಿಸುವ ಸಂಕೇತ ಇದಾಗಿದೆ. ಆದರೆ, ಸಂಗೋಲಾದ ನಿವಾಸಿಗಳು ರಾಕ್ಷಸ ರಾಜನ ಬುದ್ಧಿವಂತಿಗೆ ಹಾಗೂ ಆತನಲ್ಲಿದ್ದ ತಪಸ್ವಿ ಗುಣಗಳಿಗಾಗಿ ಪೂಜಿಸುತ್ತಾರೆ.












Click it and Unblock the Notifications