ನವರಾತ್ರಿ 2023: ನಾಳೆ ಯಾವ ಬಣ್ಣ ಮಂಗಳಕರ- ಸಂಪೂರ್ಣ ಪಟ್ಟಿ ಇಲ್ಲಿದೆ....
ಶರದೀಯ ನವರಾತ್ರಿಯು ಅಕ್ಟೋಬರ್ 15 ಅಕ್ಟೋಬರ್ ರಿಂದ ಪ್ರಾರಂಭವಾಗಿದೆ. ಒಂಬತ್ತು ದಿನಗಳ ಈ ಹಬ್ಬವು 9 ಬಣ್ಣಗಳ ವಿಶಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. ಕಿತ್ತಾಳೆ, ಬಿಳಿ, ಕೆಂಪು, ನೀಲಿ, ಹಳದಿ, ಹಸಿರು, ಬೂದು, ನೇರಳು, ನವಿಲು ಹಸಿರು ಬಣ್ಣಗಳು ನವರಾತ್ರಿಯ ಒಂಬತ್ತು ದಿನಗಳ ಕಾಲ ವಿಶೇಷ ಅರ್ಥ ಮತ್ತು ಪ್ರಾಮುಖ್ಯತೆಯನ್ನು ಹೊಂದಿವೆ. ಹಾಗಾದರೆ ಈ ನವರಾತ್ರಿ ದಿನಗಳಲ್ಲಿ ಯಾವ ದಿನ ಯಾವ ಬಣ್ಣ ಹೆಚ್ಚು ಸೂಕ್ತ ಎಂದು ತಿಳಿಯೋಣ.
ನವರಾತ್ರಿ ಬಣ್ಣಗಳು
ನವರಾತ್ರಿ ಈಗಾಗಲೇ ಆರಂಭವಾಗಿದೆ. ಅಕ್ಟೋಬರ್ 24ರಂದು ವಿಜಯದಶಮಿಯ ಆಚರಣೆಯೊಂದಿಗೆ ಇದು ಕೊನೆಗೊಳ್ಳುತ್ತದೆ. ಪ್ರಪಂಚದಾದ್ಯಂತದ ಹಿಂದೂಗಳು ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ನಾನಾ ರೂಪಗಳನ್ನು ಪೂಜಿಸುತ್ತಾರೆ. ಆಚರಣೆಯ ಪ್ರತಿ ದಿನವು ದೇವಿಯ ವಿಶಿಷ್ಟ ಅಂಶವನ್ನು ಸಂಕೇತಿಸುವ ಬಣ್ಣವನ್ನು ಬಳಸಲಾಗುತ್ತದೆ. ಈ ಒಂಬತ್ತು ವರ್ಣಗಳ ಮಹತ್ವವು ದೇವಿಯ ಆಧ್ಯಾತ್ಮಿಕ ಮತ್ತು ದೈಹಿಕ ಅಭಿವ್ಯಕ್ತಿಗಳಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಪ್ರತಿ ದಿನ ಆಯಾ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳುವ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತದೆ. ಹಾಗಾದರೆ ಯಾವ ದಿನ ಯಾವ ಬಣ್ಣ ಸೂಕ್ತ ಎನ್ನುವುದನ್ನು ದಿನಾಂಕದೊಂದಿಗೆ ತಿಳಿಯಿರಿ.

ದಿನ 1 ನವರಾತ್ರಿ ಬಣ್ಣ: 15 ಅಕ್ಟೋಬರ್ 2023
ಕಿತ್ತಾಳೆ ಬಣ್ಣ ಶೈಲಪುತ್ರಿ ದೇವಿಯನ್ನು ಸೂಚಿಸುತ್ತದೆ. ಕಿತ್ತಾಳೆ ದಯೆ ಮತ್ತು ಪೋಷಣೆಯನ್ನು ಸಂಕೇತಿಸುತ್ತದೆ. ಕಷ್ಟದ ಸಮಯದಲ್ಲಿ ಆಕೆಯ ಅನುಯಾಯಿಗಳು ಆಹಾರಕ್ಕಾಗಿ ಹುಡುಕಿದಾಗ ದುರ್ಗಾ ದೇವಿಯು ಅವರ ಕೋರಿಕೆಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ಶೈಲಪುತ್ರಿ ದೇವಿಯ ಪೂಜೆಯ ಮೊದಲ ದಿನ ಈ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ.
ದಿನ 2 ನವರಾತ್ರಿ ಬಣ್ಣ: 16 ಅಕ್ಟೋಬರ್ 2023
ಬಿಳಿ ಬಣ್ಣ ಬ್ರಹ್ಮಚಾರಿಣಿ ದೇವಿಯನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣ ಸದಾಚಾರ ಮತ್ತು ನ್ಯಾಯದ ಜೊತೆಗೆ ಶುದ್ಧತೆ ಮತ್ತು ಮುಗ್ಧತೆಯನ್ನು ಸಂಕೇತಿಸುತ್ತದೆ. ತಾಯಿ ದೇವಿಯ ಅನುಯಾಯಿಗಳು ಅವಳ ಸಹಾಯವನ್ನು ಕೇಳಿದಾಗ, ದುರ್ಗಾ ದೇವಿಯು ಎಲ್ಲಾ ದುಷ್ಟರನ್ನು ನಾಶಮಾಡುತ್ತಾಳೆ ಮತ್ತು ನ್ಯಾಯವನ್ನು ಒದಗಿಸುವಂತೆ ನೋಡಿಕೊಳ್ಳುತ್ತಾಳೆ. ಹೀಗಾಗಿ ಬಿಳಿ ಬಣ್ಣೆ ಎರಡನೇ ದಿನ ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗುತ್ತದೆ.
ದಿನ 3 ನವರಾತ್ರಿ ಬಣ್ಣ: 17 ಅಕ್ಟೋಬರ್ 2023
ಕೆಂಪು ಬಣ್ಣ ಮಾತಾ ಚಂದ್ರಘಂಟಾವನ್ನು ಸೂಚಿಸುತ್ತದೆ. ಈ ಬಣ್ಣ ಚೈತನ್ಯ, ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಹೆಚ್ಚುವರಿಯಾಗಿ ಇದು ಆರೋಗ್ಯ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತದೆ. ರಕ್ತವು ಕೆಂಪು ಬಣ್ಣದೊಂದಿಗೆ ಸಂಬಂಧಿಸಿದೆ. ಇದು ದುರ್ಗಾ ದೇವಿಯ ಧೈರ್ಯ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ.
ದಿನ 4 ನವರಾತ್ರಿ ಬಣ್ಣ: 18 ಅಕ್ಟೋಬರ್ 2023
ನೀಲಿ ಬಣ್ಣ ಕೂಷ್ಮಾಂಡಾ ದೇವಿಯನ್ನು ಸೂಚಿಸುತ್ತದೆ. ಇದು ಸಂತೋಷದ ಸಂಕೇತವಾಗಿದೆ. ಇದು ಎಲ್ಲಾ ಪ್ರಯತ್ನಗಳಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ. ಈ ದಿನ ಭಕ್ತರು ದುರ್ಗಾ ದೇವಿಯ ಸಹಾಯ ಮತ್ತು ರಕ್ಷಣೆಯನ್ನು ಕೋರಿದರೆ ಆಕೆ ಅವರಿಗೆ ಎಲ್ಲಾ ಮಾರ್ಗಗಳನ್ನು ತೆರೆಯುತ್ತಾಳೆ. ಸಂತೋಷದ ಹಾದಿಯನ್ನು ಒದಗಿಸುತ್ತಾಳೆ ಎಂದು ಹೇಳಲಾಗುತ್ತದೆ.

ದಿನ 5 ನವರಾತ್ರಿ ಬಣ್ಣ: 19 ಅಕ್ಟೋಬರ್ 2023
ಹಳದಿ ಬಣ್ಣ ಸ್ಕಂದ ದೇವತೆಯನ್ನು ಸೂಚಿಸುತ್ತದೆ. ಹಳದಿ ಬಣ್ಣ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಇದು ಜೀವನದಲ್ಲಿ ಅದೃಷ್ಟ ಮತ್ತು ಸಾಧನೆಯನ್ನು ಸೂಚಿಸುತ್ತದೆ. ದುರ್ಗಾ ದೇವಿ ಅನುಯಾಯಿಗಳು ಸಹಾಯಕ್ಕಾಗಿ ದುರ್ಗಾ ದೇವಿಯನ್ನು ಕೇಳಿದಾಗ ಅವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ನೀಡುತ್ತಾಳೆ.
ದಿನ 6 ನವರಾತ್ರಿ ಬಣ್ಣ: 20 ಅಕ್ಟೋಬರ್ 2023
ಹಸಿರು ಕಾತ್ಯಾಯನಿ ಮಾತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಶೌರ್ಯ, ಸ್ಥೈರ್ಯ ಮತ್ತು ತೊಂದರೆಗಳು ಅಥವಾ ಅಪಾಯದ ಮುಖಾಂತರ ನಿರ್ಣಯವನ್ನು ಸೂಚಿಸುತ್ತದೆ. ಯಾರಾದರೂ ದುರ್ಗಾ ದೇವಿಯನ್ನು ಸಹಾಯಕ್ಕಾಗಿ ಬೇಡಿದರೆ, ಬೇಡಿ ಬಂದ ಭಕ್ತರಿಗೆ ದೇವಿ ಕೈಹಿಡಿದು ಕಾಪಾಡುತ್ತಾಳೆ.
ದಿನ 7 ನವರಾತ್ರಿ ಬಣ್ಣ: 21 ಅಕ್ಟೋಬರ್ 2023
ಕಲರಾತ್ರಿ ದೇವತೆಯನ್ನು ಬೂದು ಬಣ್ಣದಿಂದ ಪ್ರತಿನಿಧಿಸಲಾಗುತ್ತದೆ. ಈ ಬಣ್ಣ ಬುದ್ಧಿವಂತಿಕೆ, ಒಳನೋಟ, ಸತ್ಯ ಮತ್ತು ಸ್ಪಷ್ಟತೆಯನ್ನು ಸೂಚಿಸುತ್ತದೆ. ಭಕ್ತರು ಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ದುರ್ಗಾ ದೇವಿಯನ್ನು ಬೇಡಿದಾಗ ಆಕೆ ಕಾಪಾಡುತ್ತಾಳೆ.
ದಿನ 8 ನವರಾತ್ರಿ ಬಣ್ಣ: 22 ಅಕ್ಟೋಬರ್ 2023
ನೇರಳು ಮಹಾಗೌರಿ ದೇವಿಯನ್ನು ಸೂಚಿಸುತ್ತದೆ. ನೇರಳು ಬುದ್ಧಿವಂತಿಕೆ ಮತ್ತು ಸೃಜನಶೀಲತೆಯನ್ನು ಸಂಕೇತಿಸುತ್ತದೆ. ಇದು ಪುನರ್ಜನ್ಮ, ಫಲವತ್ತತೆ ಮತ್ತು ವಿಸ್ತರಣೆಯನ್ನು ಸಹ ಪ್ರತಿನಿಧಿಸುತ್ತದೆ. ಭಕ್ತರು ಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ದುರ್ಗಾ ದೇವಿಯನ್ನು ದುರ್ಗಾ ದೇವಿಯು ಅವರಿಗೆ ಸೃಜನಶೀಲತೆ ಮತ್ತು ತಿಳುವಳಿಕೆಯನ್ನು ನೀಡುತ್ತಾಳೆ.
ದಿನ 9 ನವರಾತ್ರಿ ಬಣ್ಣ: 25 ಅಕ್ಟೋಬರ್ 2023
ನವಿಲು ಹಸಿರು ಬಣ್ಣ ಸ್ಪಷ್ಟತೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಇದು ಸಿದ್ಧಿದಾತ್ರಿ ದೇವಿಗೆ ಸಂಬಂಧಿಸಿದ ಬಣ್ಣವಾಗಿದೆ. ಈ ಬಣ್ಣದ ವಸ್ತ್ರಗಳನ್ನು ಧರಿಸಿ ಮತ್ತು ಅದಕ್ಕೆ ತಕ್ಕಂತೆ ದೇವಿಯ ದೇವಾಲಯವನ್ನು ಅಲಂಕರಿಸಿ ಈ ದಿನ ಪೂಜೆ ಮಾಡಲಾಗುತ್ತದೆ.












Click it and Unblock the Notifications