Naga panchami 2023: ನಾಗ ಪಂಚಮಿ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಇವು...
ಶ್ರಾಮಣ ಮಾಸ ಆರಂಭವಾಗಿದೆ. ಶ್ರಾವಣ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ. ಈ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡ ಒಂದಾಗಿದೆ.
ಸಾಮಾನ್ಯವಾಗಿ ಜನರು ಈ ದಿನ ಉಪವಾಸ ಮಾಡುತ್ತಾರೆ. ಮನೆಯಲ್ಲಿ ಹಾವಿನ ವಿಗ್ರಹಗಳನ್ನು ಮಾಡುತ್ತಾರೆ. ಇದು ಮಾನವರು ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಸಂಕೇತಿಸುತ್ತದೆ.

ನಾಗ ಪಂಚಮಿಯನ್ನು ಶ್ರಾವಣ ಶುಕ್ಲದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬ ಆಗಸ್ಟ್ 21ರಂದು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಸರ್ಪಗಳನ್ನು ದೇವರೆಂದು ಪೂಜಿಸಲಾಗುತ್ತದೆ.
ನಾಗ ಪಂಚಮಿಯಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದರ ಜೀವನದಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಸೋಮವಾರದಂದು ಪಂಚಮಿ ಬರುವ ಕಾರಣ ಇದರ ಮಹತ್ವ ಹೆಚ್ಚಿದೆ. ಏಕೆಂದರೆ ಈ ದಿನ ಶ್ರಾವಣ ಸೋಮವಾರವಾಗಿದೆ. ಅಂದರೆ ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಇದೇ ದಿನ ನಾಗರ ಪಂಚಮಿ ಕೂಡ ಇರುವುದರಿಂದ ಇಬ್ಬರನ್ನೂ ಒಂದೇ ದಿನ ಪೂಜಿಸುವ ಮೂಲಕ ಭಕ್ತರು ಇಬ್ಬರ ಆಶೀರ್ವಾದವನ್ನು ಪಡೆಯುತ್ತಾರೆ.
ನಾಗ ಪಂಚಮಿಯಂದು ಜನರು ಹಾವಿನ ಮೂರ್ತಿಯನ್ನು ಪೂಜಿಸುತ್ತಾರೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ನೋವುಂಟು ಮಾಡದಂತೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಶೀರ್ವದಿಸುವಂತೆ ಪ್ರಾರ್ಥಿಸುತ್ತಾರೆ. ಈ ಬಾರಿಯ ಪಂಚಮಿ ಆಗಸ್ಟ್ 21 ರಂದು 12.21 ನಿಮಿಷಕ್ಕೆ ಆರಂಭವಾಗಲಿದೆ. ಹಾಗಾದರೆ ಈ ವಿಶೇಷ ನಾಗ ಪಂಚಮಿ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಬಗ್ಗೆ ತಿಳಿಯೋಣ.

ನಾಗ ಪಂಚಮಿಯಂದು ಮಾಡಿ
*ದೇವಾಲಯಗಳಲ್ಲಿ ಇರುವ ಮಣ್ಣಿನ ನಾಗನ ಮೂರ್ತಿ ಅಥವಾ ಲೋಹದ ಹಾವಿಗೆ ಹಾಲು, ಹೂವುಗಳು, ಹಣ್ಣುಗಳನ್ನು ಅರ್ಪಿಸಿ.
*ನಿಮ್ಮ ಜೀವನದಿಂದ ತೊಂದರೆಗಳನ್ನು ತೊಡೆದುಹಾಕಲು ದೇವರನ್ನು ಪೂರ್ಣ ಹೃದಯದಿಂದ ಆರಾಧಿಸಿ.
*ಶಿವ ಮತ್ತು ನಾಗದೇವರ ಆಶೀರ್ವಾದ ಪಡೆಯಲು ನಾಗ ಪಂಚಮಿಯಂದು ರುದ್ರಾಭಿಷೇಕವನ್ನು ಮಾಡಿ.
*ಈ ದಿನದ ಉಪವಾಸ ಮಾಡುವುದರಿಂದ ಶಿವನ ಆಶೀರ್ವಾದವನ್ನು ಪಡೆಯಬಹುದು.
*ದೇವಾಲಯಗಳಿಗೆ ಮುಂಜಾನೆ ಭೇಟಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಸಂಜೆ ಅಲ್ಲ. ಅಲ್ಲದೆ, ಇಡೀ ದಿನ ನಾಗ್ ಪಂಚಮಿ ಮಂತ್ರಗಳನ್ನು ಪಠಿಸಿ.
ನಾಗ ಪಂಚಮಿಯಂದು ಮಾಡಬೇಡಿ
*ಈ ವಿಶೇಷ ದಿನದಂದು, ಕಬ್ಬಿಣದಿಂದ ಮಾಡಿದ ಯಾವುದೇ ಅಡುಗೆ ಸಲಕರಣೆಗಳನ್ನು ಬಳಸುವುದನ್ನು ತಡೆಯಬೇಕು.
*ನಾಗಪಂಚಮಿಯಂದು ರೈತರು ಮತ್ತು ಇತರ ಕೃಷಿ ಕಾರ್ಮಿಕರು ಹೊಲ ಉಳುಮೆ ಮಾಡುವುದನ್ನು ತಪ್ಪಿಸುತ್ತಾರೆ, ಏಕೆಂದರೆ ಇದು ಹಾವುಗಳ ಜೀವಕ್ಕೆ ಅಪಾಯಕಾರಿ. ಭೂಮಿಯನ್ನು ಅಗೆಯುವುದನ್ನು ತಪ್ಪಿಸುತ್ತಾರೆ
*ಅಲ್ಲದೆ, ಸೂಜಿಗಳು ಮತ್ತು ಇತರ ಯಾವುದೇ ಚೂಪಾದ ವಸ್ತುಗಳನ್ನು ಬಳಕೆಯನ್ನು ತಪ್ಪಿಸಿ.
*ಹಸಿರು ಎಲೆಗಳ ತರಕಾರಿಗಳ ಸೇವನೆಯನ್ನು ತಪ್ಪಿಸಿ. ನೀವು ಸೇವಿಸುವ ಅಗತ್ಯವಿದ್ದರೆ, ಅವುಗಳನ್ನು ಕತ್ತರಿಸದೆಯೇ ಬೇಯಿಸಿ ತಿನ್ನುವುದು ಉತ್ತಮ.
*ಈ ದಿನ ಮರಗಳು ಮತ್ತು ಗಿಡಗಳನ್ನು ಕತ್ತರಿಸುವುದನ್ನು ತಪ್ಪಿಸಿ.












Click it and Unblock the Notifications