ತಾಯಿಯ ಮಡಿಲಲ್ಲಿ
ಅಮ್ಮಾ ನಗು .. ನೀ ನಗು..
ಇನ್ನು ಇನ್ನೂ .. ನೀ ನಗು
ಅಮ್ಮ ನೀನು ನಕ್ಕರೆ
ನಮ್ಮ ಬಾಳೆ ಸಕ್ಕರೆ
ಸಿಡುಕದೆ ನಿನ್ನ ಮಕ್ಕಳ ಮೇಲೆ
ತೋರಬಾರದೆ ಅಕ್ಕರೆ ।ಅಮ್ಮ।
ತಿಂಗಳಿಗೊಮ್ಮೆ ಸಂಬಳ ದಿನವು
ನಾಳೆಯ ಗೆಳತಿಯ ಬಲ್ಲೆವು ನಾವು
ಆಸೆಯನಿಂದು ತಡೆಯದೆ ಹೋದೆವು
ಎಂದಿಗೂ ಹೀಗೆ ತಪ್ಪನು ಮಾಡೆವು
ಕೋಪವ ಬಿಡದೆ ನಾವಿಂದು ನಿನ್ನನು ಬಿಡೆವು ।ಅಮ್ಮ।
ಮುರುಕಲು ಮನೆಯೇ ನಮಗಿರಲೇನು
ಹರಕಲು ಬಟ್ಟೆಯ ಧರಿಸಿದರೇನು
ಗಂಜಿಯ ಕುಡಿದು ಬೆಳೆಸಿದರೇನು
ನೀರನೆ ಕುಡಿಯುತ ಬೆಳೆಸಿದರೇನು
ಅಮ್ಮನ ಪ್ರೀತಿ ವಾತ್ಸಲ್ಯ ನಮಗಿಲ್ಲವೇನು ।ಅಮ್ಮ।












Click it and Unblock the Notifications