ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

By Staff
|
Google Oneindia Kannada News

Bhuvaneshwariನವದೆಹಲಿ, ಅ. 30 : 53ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ನವೆಂಬರ್ 1ರಂದು ಇಲ್ಲಿನ ಕರ್ನಾಟಕ ಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಮಗಳನ್ನು ಹಮ್ಮಿಕೊಂಡಿದೆ. ಭುವನೇಶ್ವರಿಗೆ ಬೆಳಿಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಲಾಗುತ್ತಿದೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ವಾರ್ತಾ ಇಲಾಖೆ, ಕರ್ನಾಟಕ ಸಕಾರ, ಬೆಂಗಳೂರು ಇವರು ಪ್ರಸ್ತುತಪಡಿಸುವ ದೆಹಲಿ ಕನ್ನಡ ಮಕ್ಕಳು ಅಭಿನಯಿಸುವ ನಾಟಕ: ಕೊಳಲು ನವಿಲು, ನಿರ್ದೇಶನ: ಟಿ.ಎಚ್. ಲವಕುಮಾರ್. ಸಂಗೀತ: ರವಿ ಮೂರೂರು, ಗಣೇಶ್ ಹೆಗಡೆ. ಕರ್ನಾಟಕ ಭವನದ ಉದ್ಯೋಗಿಗಳ ಮಕ್ಕಳು ಅಭಿನಯಿಸುವ ರೂಪಕ: ತಿರುಕನ ಕನಸು. ನಿರ್ದೇಶನ: ಟಿ.ಎಚ್. ಲವಕುಮಾರ್. ರಂಗ ಸಂಘಟನೆ: ರವೀಂದ್ರನಾಥ ಸಿರಿವರ ಹಾಗೂ ಕರ್ನಾಟಕ ಭವನದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

ದೆಹಲಿ ಕನ್ನಡ ಸೀನಿಯರ್ ಸೆಕಂಡರಿ ಶಾಲೆಯ ಕನ್ನಡೇತರ ಮಕ್ಕಳಿಂದ ಗೀತೆ. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ. ಸ್ಥಳ: ದೆಹಲಿ ಕರ್ನಾಟಕ ಸಂಘದ ಸಭಾಂಗಣ, ರಾವ್ ತುಲಾರಾಂ ಮಾರ್ಗ್,ಸೆಕ್ಟರ್ 12, ರಾಮಕೃಷ್ಣಪುರಂ, ನವದೆಹಲಿ- 110022

ಕನ್ನಡ ತಾಯಿ ಭುನೇಶ್ವರಿಗೆ ಪೂಜೆ
ದಿನಾಂಕ : ಶನಿವಾರ, 1 ನೇ ನವೆಂಬರ್ 2008.
ಸಮಯ : ಬೆಳಿಗ್ಗೆ 10 ಗಂಟೆಗೆ.
ಸ್ಥಳ : 'ಕಾವೇರಿ', ಕರ್ನಾಟಕ ಭವನ-1
ಸಂ.10, ಕೌಟಿಲ್ಯ ಮಾರ್ಗ್, ಚಾಣಕ್ಯಪುರಿ, ನವದೆಹಲಿ -110021

ಸರ್ವರಿಗೂ ಸ್ವಾಗತ : ಅರವಿಂದ ಜಿ. ರಿಸಬುಡ್ ಭಾ.ಆ.ಸೇ.ನಿವಾಸಿ ಆಯುಕ್ತರು ಕರ್ನಾಟಕ ಭವನ, ನವದೆಹಲಿ.
ಸಂಪರ್ಕ: 011-2410 3701/02/03

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X