ಚಂದ್ರಯಾನ

Chandrayaana - Kannada poem for children
ದೂರದಲ್ಲಿ ಕೆಲವೊಮ್ಮೆ ದುಂಡಗೆ, ಕೆಲವೊಮ್ಮೆ ಚಕ್ಕುಲಿಯಾಕಾರದಲ್ಲಿ ಕಾಣುವ ಚಂದಾಮಾಮ, ಅದರ ಸುತ್ತಲೂ ಫಳಫಳನೆ ಹೊಳೆಯುವ ನಕ್ಷತ್ರಗಳನ್ನು ಅರಿಯಲೆತ್ನಿಸುವ ಪುಟಾಣಿಗಳಿಗಾಗಿ ವಿಜ್ಞಾನದ ಅಭಿವೃದ್ಧಿಯನ್ನು ಸಾರುವ ಒಂದು ಕವನ ತಾಳಿಕೋಟಿಯ ಚಂದ್ರಗೌಡ ಕುಲಕರ್ಣಿ ಅವರಿಂದ.

ಗೋಲ ಗೋಲ ಖಗೋಲ ಗರ್ಭದಿ
ವಿಸ್ಮಯ ಸರಣಿ ನೂರಾರು !
ತಾರಾ ಪುಂಜ ಉಲ್ಕಾ ಪಾತ
ನೀಹಾರಿಕೆಗಳ ತವರೂರು !

ಅಂತರಿಕ್ಷದ ಅದ್ಭುತ ನಮ್ಮಯ
ಬೆಳ್ಳಿ ಬೆಳಕಿನ ಚಂದ್ರಾಮ !
ಚಂದ್ರನ ಮುಟ್ಟಿ ಮೈಯನು ತಟ್ಟಿ
ಬರುವುದೆ ಇಂದಿನ ಸಂಭ್ರಮ !

ಬಾನಂಗಳದ ತಿಂಗಳ ರಾಜನ
ಸುತ್ತುತಲಿರುವುದು ಉಪಕರಣ !
ಕ್ಷಣ ಕ್ಷಣ ಚಿತ್ರಣ ಮಾಹಿತಿ ಹರಿದು
ಬರುವುದು ನಮಗೆ ಅನುದಿನ !

ಗಗನದೊಡೆಯನ ಮಡಿಲನು ಶೋಧಿಸಿ
ನಿಜವನು ತಿಳಿಯುವ ಹಂಬಲ !
ಮಾನವ ಸಹಿತ ಚಂದ್ರಯಾನಕೆ
ಬಹಳ ದಿನಗಳು ಬೇಕಿಲ್ಲ !

ಭಾರತ ದೇಶದ ಹೆಮ್ಮೆಯ ಸಾಧನೆ
ಚಂದ್ರನ ಮೇಲಿನ ಈ ಯಾನ !
ಕಲಾಂ ಕನಸು ನನಸಾಗುವುದು
ಯಾರಿಗೆ ಇಲ್ಲವು ಅನುಮಾನ !

ಈ ಶತಮಾನದ ಅದ್ಭುತ ಗಳಿಗೆ
ಚಂದ್ರಯಾನದ ಸಾಧನೆ !
ಇಸ್ರೊ ಸಂಸ್ಥೆಯ ಪರಿಣತ ಪಡೆಗೆ
ಸಾವಿರ ಸಾವಿರ ವಂದನೆ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+