ಬೆಂಗಳೂರಲ್ಲೂ ಮಣ್ಣಿನ ಗಣಪನಿಗೆ ಭಾರೀ ಬೇಡಿಕೆ

ಇಲ್ಲಿ ಕೂಡ ಜೇಡಿ ಮಣ್ಣಿನಿಂತ ತಯಾರಿಸಿದ ಸರಳ ಸುಂದರ ಗಣಪನಿಗೆ ಇನ್ನಿಲ್ಲದ ಬೇಡಿಕೆ. "ಕಳೆದ ವರ್ಷಕ್ಕಿಂತ ಈ ವರ್ಷ ಮಣ್ಣಿನಿಂದ ಮಾಡಿದ ಗಣಪನಿಗೆ ಬೇಡಿಕೆ ಜಾಸ್ತಿಯಾಗಿದೆ. ಕಳೆದ 30 ವರ್ಷಗಳಿಂದ ಪಿಓಪಿ ಬಳಸದೆ ಜೇಡಿ ಮಣ್ಣಿನಿಂದಲೇ ಗಣೇಶನನ್ನು ಮಾರುತ್ತಿದ್ದೇವೆ. ಜನರು ಕೂಡ ಇದೇ ರೀತಿ ಸ್ಪಂದಿಸುತ್ತಿದ್ದಾರೆ" ಎನ್ನುವುದು ಶ್ರೀನಿವಾಸನಗರದ ನಾಗರಾಜಪ್ಪ ಅವರ ನುಡಿ.
ರಾಮಗರದ ತಾಲೂಕಾ ಪಂಚಾಯತ್ ನಿಂತ ಅನುಮತಿಪಡೆದು ಕೆರೆಗಳಲ್ಲಿ ಸಿಗುವ ಜೇಡಿ ಮಣ್ಣನ್ನು ತಂದು ಕೆಂಗೇರಿ ಬಳಿಯ ಕುಂಬಳಗೋಡಿನಲ್ಲಿ ಮೂರ್ತಿಗಳನ್ನು ತಯಾರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ ನಾಗರಾಜಪ್ಪ. ಮಣ್ಣಿನ ದರ ಕೂಡ ಏರಿದ್ದರಿಂದ ಗಣಪ ಕೂಡ ಈ ಬಾರಿ ತುಟ್ಟಿಯಾಗಿದ್ದಾನೆ. ಮೊಳಕೈ ಉದ್ದದ, ನೀರಿನಲ್ಲಿ ಸಹಜವಾಗಿ ಮಿಶ್ರವಾಗುವ ಬಣ್ಣಗಳಿಂದ ಅಲಂಕೃತನಾದ ಗಣಪನಿಗೆ ಕನಿಷ್ಠ ನೂರು ರುಪಾಯಿ.
ದರ ಜಾಸ್ತಿಯಾಗಿದ್ದರೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶನಿಗಿಂತ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನಿಗೆ ಜನ ದುಂಬಾಲು ಬೀಳುತ್ತಿದ್ದಾರೆ. ಒಂದು ಬಕೆಟ್ ನೀರಿನಲ್ಲಿ ಗಣೇಶನನ್ನು ವಿಸರ್ಜಿಸಿ ಮೂರು ದಿನ ಇಟ್ಟರೆ ನೀರಿನಲ್ಲಿ ಕೂಡಿಕೊಂಡುಬಿಡುತ್ತದೆ. ಅದನ್ನು ಗಿಡಗಳಿಗೆ ಹಾಕಿದರಾಯಿತು. ಕೆರೆಗಳನ್ನೂ ಹಾಳುಮಾಡಿದಂತಾಗುವುದಿಲ್ಲ, ಪರಿಸರವನ್ನೂ ಉಳಿಸಿದಂತಾಗುತ್ತದೆ ಎನ್ನುವುದು ನಾಗರಾಜಪ್ಪ ಅವರ ಹೇಳಿಕೆ. [ಗೌರಿ ಹಬ್ಬಕ್ಕೆ ಬಾಗಿನದಲ್ಲಿ ಏನೇನಿರಬೇಕು] [ಮೋದಕ ಪ್ರಿಯ ಗಣಪ]












Click it and Unblock the Notifications