ಬೆಳಕಿನೊಂದಿಗೆ ಆತ್ಮದ ಬಂಧ ಬೆಸೆಯುವ ಮಿಣಮಿಣ ಹಣತೆ!
ದೀಪಾವಳಿ, ದೀಪಾವಳಿ ಗೋವಿಂದ ಲೀಲಾವಳಿ...ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು ಇವೆಲ್ಲಾ ದೀಪಾವಳಿ ಹಬ್ಬದ ಸರ್ವಶ್ರೇಷ್ಠತೆ ಸಾರಿರುವ ಮನ ಮುಟ್ಟುವ ಗೀತೆಗಳು..
ಜ್ಞಾನ, ಆತ್ಮದ ಜೊತೆಗೆ ಒಲವಿನ ಸಂಬಂಧ ಬೆಸೆಯುವ ದೀಪಾವಳಿ ಹಬ್ಬದಲ್ಲಿ ಯಲ್ಲಿ ಹಸಿರು ತೋರಣ, ಅಂಗಳದಲ್ಲಿ ದೊಡ್ಡದಾದ ರಂಗವಲ್ಲಿ, ಸಾಲು ಸಾಲು ದೀಪಗಳ ಸೊಬಗು, ಹೋಳಿಗೆ ಊಟ, ಸುರು ಸುರು ಬತ್ತಿ, ಹೂವಿನ ಕುಂಡ, ಕೃಷ್ಣ ಪಟಾಕಿ ಅಬ್ಬಬ್ಬಾ ಎಷ್ಟೆಲ್ಲಾ ಉಂಟು ದೀಪಾವಳಿ ವಿಶೇಷತೆ. ಬಗ್ಗೆ ಹೇಳುತ್ತಾ ಹೋದರೆ ಇವುಗಳನ್ನು ಹಚ್ಚುತ್ತಾ, ಆಡುತ್ತಾ ನಮಗರಿವಿಲ್ಲದಂತೆ ನಾವು ಪುಟಾಣಿಗಳಾಗಿಯೇ ಬಿಟ್ಟಿರುತ್ತೇವೆ.[ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬ ಆಚರಿಸುವುದು ಹೇಗೆ?]
ದೀಪಾವಳಿ ಎಂದಾಗ ಮುಖ್ಯವಾಗಿ ಸಣ್ಣ ಮಣ್ಣಿನ ಹಣತೆ ನಮ್ಮ ನೆನಪಿನ ಬುತ್ತಿಯಲ್ಲಿ ಹಾದುಹೋಗುತ್ತದೆ. ಮಣ್ಣಿನ ಹಣತೆಯ ಬೆಳಕಿನ ಸೌಂದರ್ಯದ ಎದುರು ಸೂರ್ಯನು ನಾಚಿ ನೀರಾಗುತ್ತಾನೆ. ಕಾರ್ತಿಕ ಮಾಸದಲ್ಲಿ ಪ್ರತಿಯೊಬ್ಬರ ಮನೆಯ ಮುಂಭಾಗದ ಹೊಸ್ತಿಲಲ್ಲಿ ರಾರಾಜಿಸುವ ಮಣ್ಣಿನ ಹಣತೆಗಳು ಕಾಲಕ್ಕೆ ತಕ್ಕಂತೆ ವಿವಿಧ ಶೈಲಿ, ಆಕಾರ, ಬಣ್ಣ, ವಿಭಿನ್ನ ಹೆಸರುಗಳನ್ನು ಪಡೆದುಕೊಳ್ಳುತ್ತಾ ಬಂದಿದೆ.
ಮೊದಲೆಲ್ಲಾ ಮಣ್ಣಿನ ಹಣತೆಗಳನ್ನು ಕುಂಬಾರ ಜೇಡಿ ಮಣ್ಣನ್ನು ತಿದ್ದಿ ತೀಡಿ ಕೈಯಿಂದ ಮಾಡುತ್ತಿದ್ದ. ಆದರೆ ಆ ಕುಂಬಾರನ ಕೈ ಜಾಗದಲ್ಲಿ ಇತ್ತೀಚೆಗೆ ಅಚ್ಚುಗಳು ಬಂದಿವೆ. ಇದರಿಂದ ರಾಜಸ್ಥಾನ ಶೈಲಿಯ ದೀಪದಿಂದ ಹಿಡಿದು ಎಲೆ, ತುಳಸಿಕಟ್ಟೆ, ಶಂಖು, ಓಂ, ಗಣೇಶ ದೀಪ, ಕಂಬ ದೀಪ ಹೀಗೆ ನಾನಾ ವೈವಿಧ್ಯ ಆಕಾರ ದೀಪಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅದನ್ನು ನೋಡುತ್ತಾ ನಿಂತರೆ, ಕೊಂಡು ಕೊಳ್ಳದೇ ಹೊರಬರಲು ಸಾಧ್ಯವೇ ಇಲ್ಲ.
ದೀಪಗಳ ಭರಾಟೆ ಮಾರುಕಟ್ಟೆಯಲ್ಲಿ ಸುಮಾರು 15 ದಿನಗಳ ಮೊದಲೇ ಆರಂಭವಾಗಿರುತ್ತದೆ. 2 ರೂ ಯಿಂದ ಹಿಡಿದು 500, 1000 ರೂಗಳವರೆಗೂ ಇದರ ಬೆಲೆ ಇದ್ದು, ದೀಪದಲ್ಲಿ ಮೂಡಿರುವ ಕಲೆ, ಆಕಾರದ ಮೇಲೆ ಅವಲಂಬಿತವಾಗಿರುತ್ತದೆ. ವಿಭಿನ್ನ ಶೈಲಿಯ ದೀಪಗಳು ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಇನ್ನಿತರ ಕಡೆಗಳಿಂದ ರವಾನೆಯಾಗುತ್ತವೆ. ಮಣ್ಣಿನ ಬಣ್ಣಕ್ಕೆ ಅನುಗುಣವಾಗಿ ದೀಪಗಳ ಬಣ್ಣವಿರುತ್ತದೆ. ಬನ್ನಿ ಮಾರುಕಟ್ಟೆಯಲ್ಲಿ ಯಾವ ತೆರನಾದ ದೀಪಗಳು ಇವೆ ಎಂದು ನೋಡಿಕೊಂಡು ಬರೋಣ.[ವಿಶೇಷ ಲೇಖನ: ದೀಪಾವಳಿ ಕೇವಲ ಮನೆ ಜ್ಯೋತಿಯಲ್ಲ, ಆತ್ಮಜ್ಯೋತಿ]

ದೀಪಗಳು ಎಲ್ಲೆಲ್ಲಿಂದ ರವಾನೆಯಾಗುತ್ತದೆ?
ವಿಶೇಷ ಶೈಲಿಯ ದೀಪಗಳು ಆಂದ್ರ ಪ್ರದೇಶ, ತಮಿಳುನಾಡು, ಪಾಂಡಿಚೇರಿ, ಬಾಂಬೆ, ರಾಜಸ್ಥಾನ ರಾಜ್ಯಗಳಿಂದ ರವಾನೆಯಾಗುತ್ತವೆ. ನಮ್ಮ ರಾಜ್ಯದಲ್ಲಿಯೂ ತಯಾರಾಗುತ್ತವೆ.

ಯಾವ ಯಾವ ತೆರನಾದ ದೀಪಗಳು ಮಾರುಕಟ್ಟೆಗೆ ಬಂದಿಳಿದಿವೆ?
ಶಂಖು, ಓಂ, ಕಂಬ, ತುಳಸಿಕಟ್ಟೆ, ಚತ್ರ, ಎಲೆ, ಲ್ಯಾಂಪ್, ಪಿಂಗಾಣಿ, ತೂಗು ದೀಪ, ಅಲ್ಲಾವುದ್ದೀನ್ ಖಿಲ್ಜಿ ದೀಪಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಎಷ್ಟು ದಿನಗಳ ಮೊದಲೇ ದೀಪಗಳು ಮಾರುಕಟ್ಟೆಗೆ ಬರುತ್ತವೆ?
ಸುಮಾರು 15-20ದಿನಗಳ ಮೊದಲೇ ದೀಪಗಳು ಮಾರುಕಟ್ಟೆಗೆ ಬರುತ್ತವೆ. ದಾರಿಹೋಕರ, ದೀಪ ಪ್ರಿಯರ ಕಣ್ಮನಗಳನ್ನು ಸೆಳೆಯಲು ಪ್ರಾರಂಭಿಸುತ್ತವೆ.

ಯಾವ ತೆರನಾದ ದೀಪಗಳನ್ನು ಜನರು ಇಷ್ಟಪಡುತ್ತಾರೆ ಯಾಕೆ?
ಪಿಂಗಾಣಿ, ಪ್ಲಾಸ್ಟಿಕ್, ಮೇಣದ ದೀಪಗಳು ಇದ್ದರೂ ಹೆಚ್ಚಾಗಿ ಜನರು ಕೊಳ್ಳುವುದು ಮಣ್ಣಿನ ದೀಪಗಳನ್ನು. ಏಕೆಂದರೆ ಭೂಮಿ ತಾಯಿ ದೇವರಿಗೆ ಸಮಾನ. ಮಣ್ಣನ್ನು ಜನರು ದೇವರೆಂದು ಭಾವಿಸುವುದರಿಂದ ಹೆಚ್ಚಾಗಿ ಮಣ್ಣಿನ ದೀಪಗಳನ್ನು ಕೊಳ್ಳುತ್ತಾರೆ ಎಂದು ೧೦ ವರ್ಷಗಳಿಂದ ದೀಪಗಳ ವ್ಯಾಪಾರ ಮಾಡುತ್ತಿರುವ ಶಂಭು ಹೇಳುತ್ತಾರೆ.

ಇವೆಲ್ಲಾ ಅಚ್ಚು ದೀಪಗಳು
ಮೊದಲು ಮಣ್ಣಿನ ದೀಪಗಳು ಸಣ್ಣವಾಗಿ ಬಹಳ ಸರಳವಾಗಿರುತ್ತಿದ್ದವು. ಅವುಗಳನ್ನು ಖುದ್ದಾಗಿ ಕೈಯಲ್ಲಿಯೇ ಮಾಡುತ್ತಿದ್ದರು. ಆದರೆ ಜನರು ಆಧುನಿಕ ಧಾವಂತಕ್ಕೆ ಸಿಲುಕಿರುವುದರಿಂದ ಸಮಯದ ಅಭಾವ ಇರುವುದರಿಂದ ಅಚ್ಚಿನ ಮೊರೆ ಹೋಗಿದ್ದಾರೆ. ಕೆಲವೇ ನಿಮಿಚಗಳಲ್ಲಿ ಸಾವಿರಕ್ಕೂ ಹೆಚ್ಚು ದೀಪಗಳನ್ನು ಮಾಡಬಹುದಂತೆ.

ದೀಪಗಳ ಬೆಲೆಗಳು ಎಷ್ಟು?
ದೀಪಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. ಎರಡು ರೂ ಯಿಂದ ಹಿಡಿದು 500,1000 ವರೆಗೂ ದೀಪಗಳ ಬೆಲೆಗಳು ಇವೆ. ಜೊತೆಗೆ ಶಂಖು ದೀಪ ೩೦ ರಿಂದ ೬೦ ರೂ ಇರುತ್ತದೆ, ದೀಪಗಳ ಆಕಾರಕ್ಕೆ ಅನುಗುಣವಾಗಿ ಬೆಲೆಗಳು ಬದಲಾಗುತ್ತವೆ. ಓಂ ದೀಪ 15ರಿಂದ 120 ರೂ, ತುಳಸಿಕಟ್ಟೆ ದೀಪ 40 ರೂ ಯಿಂದ 100ರವರೆಗೆ, ಗಣೇಶ ದೀಪ ಒಂದಕ್ಕೆ 300 ರೂ ಹೀಗೆ ದೀಪದ ಬೆಲೆಗಳು ಇವೆ.

ಸ್ವಾಗತದ ದೀಪ
ಇದು ಸ್ವಾಗತ ಕೋರುವ ದೀಪ. ಇದನ್ನು ಕೊಂಡು ಮನೆಯ ಮುಂಬಾಗಿಲಲ್ಲಿ ಇಟ್ಟು ಬರುವ ಅತಿಥಿಗಳನ್ನು ಸ್ವಾಗತ ಕೋರಿ

ಈ ಎಲ್ಲಾ ದೀಪಗಳು ಎಲ್ಲಿ ಸಿಗುತ್ತದೆ?
ಈ ಎಲ್ಲಾ ದೀಪಗಳು ಜಯನಗರದ 4ನೇ ಬ್ಲಾಕಿನಲ್ಲಿ ಸಿಗುತ್ತವೆ. ಈ ವಿಶೇಷ ಶೈಲಿಯ ದೀಪಗಳು ಬೇಕಿದ್ದಲ್ಲಿ ತಕ್ಷಣ ಜಯನಗರಕ್ಕೆ ಬನ್ನಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications