ಚೆನ್ನವೀರ ಕಣವಿಯವರಿಗೆ ಸ್ವಾಗತ ಕೋರಿದ್ದು ಪ್ರತಾಪ ಸಿಂಹ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 29: ಐತಿಹಾಸಿಕ ಮೈಸೂರು ದಸರಾಕ್ಕೆ ಚಾಲನೆ ನೀಡಲು ಬಂದಂಥ ನಾಡೋಜ ಚೆನ್ನವೀರ ಕಣವಿಯವರನ್ನು ಗುರುವಾರ ಪ್ರತಾಪ ಸಿಂಹ, ನಗರದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಬೆಳಗ್ಗೆ ಧಾರವಾಡ ಎಕ್ಸ್ ಪ್ರೆಸ್ ರೈಲಿನಲ್ಲಿ ಮಗನೊಂದಿಗೆ ಬಂದ ಅವರನ್ನು ರೈಲು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ರಮೇಶ್ ಬಾಬು ಹಾಗೂ ಸಂಸದ ಪ್ರತಾಪಸಿಂಹ ಹಾಜರಿದ್ದರು. ಅವರಿಗೆ ಮೈಸೂರು ಪೇಟ ತೊಡಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಿಸಲು ಆಗಮಿಸಿರುವುದು ಸಂತಸ ತಂದಿದೆ ಎಂದರು.[ಅಕ್ಟೋಬರ್ 1ರಂದು ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ]

Mysuru dasara: Chennaveera Kanavi welcome by Pratapa simha

ದಸರಾ ಉದ್ಘಾಟಕರಾಗಿ ನೀವು ಬರಬೇಕೆಂದು ಮುಖ್ಯಮಂತ್ರಿಗಳು ದೂರವಾಣಿ ಕರೆ ಮಾಡಿದಾಗ ನನಗೆ ಆಶ್ಚರ್ಯವಾಯಿತು. ಮೊದಲ ಬಾರಿಗೆ ಐತಿಹಾಸಿಕ ದಸರಾವನ್ನು ಉದ್ಘಾಟಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವುದಕ್ಕೆ ಖುಷಿಯಾಗಿದೆ. ನನಗೆ ಆರೋಗ್ಯ ಸರಿಯಾಗಿಲ್ಲದಿದ್ದರೂ ದಸರಾ ಉದ್ಘಾಟನೆಗೆ ಬಂದಿದ್ದೇನೆ ಎಂದು ಹೇಳಿದರು.[ದಸರಾಗೆ ಕೈ ಬೀಸಿ ಕರೆಯುತ್ತಿದೆ ಸಿಂಗಾರಗೊಂಡ ಅರಮನೆ ನಗರಿ]

ಕಾವೇರಿ ಮತ್ತು ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಭಿಪ್ರಾಯಪಟ್ಟರು. ಕಾವೇರಿ ವಿವಾದ ಭುಗಿಲೆದ್ದಿದ್ದು, ರಾಜ್ಯಾದ್ಯಂತ ಹಲವು ಹೋರಾಟಗಳು ನಡೆದಿವೆ. ಆದರೂ ರೈತರು ಶಾಂತಿಯುತವಾಗಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿಕೊಂಡರು.[ಗೋಲ್ಡ್ ಕಾರ್ಡ್, ಪ್ಯಾಲೆಸ್ ಆನ್ ವೀಲ್ಸ್, ಲಲಿತಮಹಲ್ ನಲ್ಲಿ ಊಟ]

Mysuru dasara: Chennaveera Kanavi welcome by Pratapa simha

ಪ್ರತಿ ವರ್ಷವೂ ಜಿಲ್ಲಾಧಿಕಾರಿ ಸೇರಿದಂತೆ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ದಸರಾ ಉದ್ಘಾಟಕರನ್ನು ಸ್ವಾಗತಿಸುತ್ತಾರೆ. ಆದರೆ ಈ ಬಾರಿ ಜಿಲ್ಲಾಧಿಕಾರಿ ರಂದೀಪ್ ಬಾರದೆ ತಹಸೀಲ್ದಾರ್ ಬರಮಾಡಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Writer Chennaveera Kanavi who will inauagurate Mysuru dasara welcome by MP Pratap simha on Thursday. Only Tahasildar is there to welcome Kanavi.
Please Wait while comments are loading...