ಗೋಲ್ಡ್ ಕಾರ್ಡ್, ಪ್ಯಾಲೆಸ್ ಆನ್ ವೀಲ್ಸ್, ಲಲಿತಮಹಲ್ ನಲ್ಲಿ ಊಟ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 29: ಅ.1 ರಂದು ನಗರದ ಜೆ.ಕೆ.ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಅ.7 ರಂದು ಬನ್ನಿಮಂಟಪದಲ್ಲಿ ಟಾರ್ಚ್ ಲೈಟ್ ಮೈದಾನದಲ್ಲಿ ರಿಮೋಟ್ ಕಂಟ್ರೋಲ್ಡ್ ವಿಮಾನ ಮಾದರಿಗಳ ಹಾರಾಟ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ 1000 ಗೋಲ್ಡ್ ಕಾರ್ಡ್ ಮುದ್ರಿಸಲಾಗಿದ್ದು, 7,500 ರು. ದರ ನಿಗದಿಪಡಿಸಲಾಗಿದೆ. ಪ್ರತಿಯೊಂದು ಗೋಲ್ಡ್ ಕಾರ್ಡ್ ಗೆ ಇಬ್ಬರು ವಯಸ್ಕರು ಮತ್ತು ಒಂದು ಮಗುವಿಗೆ ಪ್ರವೇಶಾವಕಾಶವಿರುತ್ತದೆ. ಆನ್ ಲೈನ್ ನಲ್ಲಿ ಬುಕ್ ಮಾಡಲು www.mysoredasara.gov.in ಗೆ ಭೇಟಿ ನೀಡಬಹುದಾಗಿದೆ.[ಅಕ್ಟೋಬರ್ 1ರಂದು ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ]

Mysuru dasara: 7,500 fixed for Gold card

ಆಗಸದಿಂದ ಮೈಸೂರು: ಲಲಿತಮಹಲ್ ಹೆಲಿಪ್ಯಾಡ್ ನಿಂದ 'ಆಗಸದಿಂದ ಮೈಸೂರು' ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ಹತ್ತು ನಿಮಿಷಗಳ ಕಾಲ ಮೈಸೂರು ನಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಯಸ್ಕರಿಗೆ 2499 ರು. ಮತ್ತು ಹತ್ತನೆ ತರಗತಿ ಒಳಗಿನ ಮಕ್ಕಳಿಗೆ ಮತ್ತು ಅಂಗವಿಕಲರಿಗೆ 2299 ರು. ದರ ನಿಗದಿಪಡಿಸಲಾಗಿದೆ.

ಪ್ಯಾಲೆಸ್ ಆನ್ ವೀಲ್ಸ್: ಅ.2 ರಿಂದ 9ರವರೆಗೆ ಪ್ಯಾಲೆಸ್ ಆನ್ ವೀಲ್ಸ್ ಕಾರ್ಯಕ್ರಮದ ಮೂಲಕ ನಗರದಲ್ಲಿರುವ 8 ಅರಮನೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಒಬ್ಬರಿಗೆ 999 ರು. ದರ ನಿಗದಿ ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನೆನಪಿನ ಕಾಣಿಕೆಯಾಗಿ ಒಂದು ಕಲಾತ್ಮಕ ಕೀ ಚೈನ್, ಸಿಹಿ ತಿಂಡಿ, ಕುಡಿಯುವ ನೀರು ಮತ್ತು ನುರಿತ ಗೈಡ್ ನ ವ್ಯವಸ್ಥೆ ಮಾಡಲಾಗಿದೆ.[ದಸರಾಗೆ ಕೈ ಬೀಸಿ ಕರೆಯುತ್ತಿದೆ ಸಿಂಗಾರಗೊಂಡ ಅರಮನೆ ನಗರಿ]

ಮಧ್ಯಾಹ್ನದ ಊಟವನ್ನು ಲಲಿತಮಹಲ್ ಹೋಟೆಲ್ ನಲ್ಲಿ ಹಾಗೂ ಸಂಜೆ ಉಪಾಹಾರವನ್ನು ಅಲೋಕ ಅರಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಟಿಕೆಟ್ ದೊರೆಯುವ ಸ್ಥಳ: ಪ್ರವಾಸಿಗರು ಟಿಕೆಟ್ ಗಳನ್ನು mysoredasara.gov.in ವೆಬ್ ಸೈಟ್ ನಲ್ಲಿ ಪ್ಯಾಲೇಸ್ ಆನ್ ವೀಲ್ಸ್ ಬುಕ್ ಮಾಡಬಹುದಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ರಾಜ್ಯಾದ್ಯಂತ ಕೆಎಸ್ ಆರ್ ಟಿಸಿ ರಿಸರ್ವೇಷನ್ ಕೇಂದ್ರಗಳಲ್ಲಿ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದಸರಾ ವೆಬ್ ಸೈಟ್ mysoredasara.gov.in ಭೇಟಿ ನೀಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru dasara will be treat for tourists. Rs 7,500 fixed for Gold cards and palace on wheel, heli tourism promoting on the occasion of Mysuru Dasara.
Please Wait while comments are loading...