ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡಿಗೆ ತಾವು ಕೊಟ್ಟ ಸೀರೆಯನ್ನೇ ಉಡಿಸಿ: ಪಾರ್ವತಿ ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

Mysore dasara 2017: Karnataka CM siddaramaiahs wife parvati gifted Saree to goddess chamundeshwari

ಮೈಸೂರು, ಸೆಪ್ಟೆಂಬರ್ 28 : ಜಗತ್ಪ್ರಸಿದ್ಧ ಮೈಸೂರು ದಸರಾದ ಈ ವರ್ಷದ ವೈಭವಕ್ಕೆ ಇಂದು ತೆರೆಬೀಳಲಿದೆ. ಈ ನಡುವೆ, ಇಂದು ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡಿ ತಾಯಿಗೆ ಉಡಿಸುವ ಸೀರೆಯ ವಿಚಾರದಲ್ಲಿ ರಾಜಕೀಯ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ.

ವೈಭವದ ದಸರಾ ವಿಶೇಷ ಪುಟ

ಅಂಬಾರಿಯಲ್ಲಿ ಇರಿಸುವ ಚಿನ್ನದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಪ್ರತಿ ವರ್ಷ ಚೆಂದದ ರೇಷ್ಮೆ ಸೀರೆ ಉಡಿಸಲಾಗುತ್ತದೆ. ಕಳೆದ 15 ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ವ್ಯಕ್ತಿಯೊಬ್ಬರು ದೇವಿಗೆ ಸೀರೆಯನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸೀರೆಯನ್ನು ಕೊಟ್ಟಿದ್ದಾರೆ.

Karnataka CM Siddaramaiah's wife parvati gifted saree to goddess Chamundeshwari

ಆದರೆ ಈ ಬಾರಿ ಬಳೆಪೇಟೆಯ ವ್ಯಕ್ತಿ ನೀಡಿರುವ ಸೀರೆಯನ್ನು ತಾಯಿ ಚಾಮುಂಡಿಗೆ ಉಡಿಸುತ್ತಿಲ್ಲ. ಇದಕ್ಕೆ ಕಾರಣ ಈ ಬಾರಿ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಉಡಿಸುತ್ತಿರುವ ಸೀರೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕೊಟ್ಟಿರುವುದು.

ತಾಯಿ ಚಾಮುಂಡಿಗೆ ತುಂಬಾ ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ತಾಯಿ ಚಾಮುಂಡಿ ಭಕ್ತರೊಬ್ಬರು ಸೀರೆಯನ್ನು ಹರಕೆ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸೀರೆಯನ್ನು ಹರಕೆ ರೂಪದಲ್ಲಿ ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ. ಆದರೆ ಅರ್ಚಕರ ಈ ಮಾತನ್ನು ಒಪ್ಪದ ಸಿಎಂ ಪತ್ನಿ, ನಾವು ಕೊಡುವ ಸೀರೆಯನ್ನೇ ಈ ಬಾರಿ ಉತ್ಸವ ಮೂರ್ತಿಗೆ ಉಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕೊನೆಗೆ ಸಿಎಂ ಪತ್ನಿಯ ಒತ್ತಡಕ್ಕೆ ಮಣಿದ ದೇವಸ್ಥಾನದ ಅರ್ಚಕರು ಮುಂಗಡವಾಗಿ ಹೆಸರು ನೋಂದಾಯಿಸಿರುವ ವ್ಯಕ್ತಿ ಕೊಟ್ಟ ಸೀರೆ ಬಿಟ್ಟು ಸಿಎಂ ಪತ್ನಿ ನೀಡಿದ ಸೀರೆಯನ್ನು ದೇವಿಗೆ ಉಡಿಸೋಕೆ ನಿರ್ಧಾರ ಮಾಡಿದ್ದಾರೆ..

English summary
Karnataka CM Siddaramaiah's wife parvati gifted saree to goddess Chamundeshwari. She forced Palace authorities to use that saree to decorate Chamundeshwari in Mysuru Dasara 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X