ನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ (ಕ್ರಿ.ಶ.1813 ರಿಂದ ಕ್ರಿ.ಶ.1814) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದಲ್ಲಿರುವ ದೇವಿ ಜಗಜ್ಜನನಿ ಎಂಬುದು.
ನವರಾತ್ರಿಯ ಸಂದರ್ಭದಲ್ಲಿ ದೇವಿಯ ವಿವಿಧ ರೂಪಗಳ (ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಹಾಡುವುದು, ಅಥವಾ ಕೇಳುವುದು ಚೆನ್ನ. ಅಲ್ಲವೇ?
ನವರಾತ್ರಿಯ ಮೊದಲ ದಿವಸ ನಾನು ನಿಮಗೆ ಕೇಳಿಸಲು ಆಯುತ್ತಿರುವ ಕೃತಿ ಕಲ್ಯಾಣಿ ರಾಗದಲ್ಲಿರುವ ತ್ಯಾಗರಾಜರ (ಕ್ರಿ.ಶ.1767- ಕ್ರಿ.ಶ.1847) ಒಂದು ಕೃತಿ - ಸುಂದರಿ ನೀ ದಿವ್ಯರೂಪಮುನು ಎಂಬುದು. ತ್ಯಾಗರಾಜರು ತಮಿಳುನಾಡಿನ ಮದ್ಯಭಾಗದಲ್ಲಿ, ತಂಜಾವೂರಿನ ಬಳಿ ತಿರುವಾರೂರಿನಲ್ಲಿದ್ದವರು. ಒಮ್ಮೆ ತಮ್ಮ ಶಿಷ್ಯರಾದ ವೀಣಾ ಕುಪ್ಪಯ್ಯರ್ ಅವರ ಮನೆಗೆ ಅಹ್ವಾನಿತರಾಗಿ ಅವರಿದ್ದ ಚೆನ್ನಪಟ್ಟಣಂ (ಚೆನ್ನೈ, ಮದ್ರಾಸು) ಗೆ ಪ್ರವಾಸ ಕೈಗೊಂಡಿದ್ದರು. ಆಗ, ಅಲ್ಲೇ ಬಳಿಯಿರುವ ತಿರುವೊಟ್ಟ್ರಿಯೂರ್ ಎಂಬ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ಊರು, ಈಗ ಮದ್ರಾಸಿಗೇ ಸೇರಿಕೊಂಡಂತೆ, ಊರಿನ ಉತ್ತರಭಾಗದಲ್ಲಿದೆ. ಅಲ್ಲಿರುವ ತ್ರಿಪುರಸುಂದರಿಯ ಮೇಲೆ ಐದು ಕೃತಿಗಳನ್ನು ರಚಿಸಿದರು. ಇವು ತಿರುವೊಟ್ಟ್ರಿಯೂರ್ ಪಂಚರತ್ನ ಕೃತಿಗಳು ಎಂದೇ ಹೆಸರುವಾಸಿಯಾಗಿವೆ.
ಕಲ್ಯಾಣಿ ರಾಗ 15, 16ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿದ್ದರೂ, ಅದಕ್ಕೆ ಅಷ್ಟಾಗಿ ಪಂಡಿತರ ಪ್ರಶಸ್ತಿ ದೊರಕಿರಲಿಲ್ಲವೆಂದು ತೋರುತ್ತದೆ. ಹಾಗೆಂದೇ, ವೆಂಕಟಮಖಿಯಂತಹ ಶಾಸ್ತ್ರಜ್ಞರು ಈ ರಾಗವನ್ನು ಮುಸಲ್ಮಾನರಿಗೆ ಪ್ರಿಯವಾದ ರಾಗ -ಎಂದು ಅದಕ್ಕೆ ಇರುವ ಉತ್ತರಾದಿ ಮತ್ತು ಪರ್ಶಿಯನ್ ಸಂಗೀತದ ಸಂಬಂಧಗಳನ್ನು ಹೇಳಿ ತೋರಿಸಿ, ಸಂಗೀತ ಪ್ರಬಂಧಗಳ ರಚನೆಗಳಿಗೆ ಇದು ಅಷ್ಟಾಗಿ ಹೊಂದಿಕೆಯಾಗದು ಎಂದು ನುಡಿದಿದ್ದಾರೆ. ಆದರೆ, ಕಾಲಾನುಕ್ರಮದಲ್ಲಿ ಅದು ಕರ್ನಾಟಕ ಸಂಗೀತದ ವಾಗ್ಗೇಯಕಾರರಿಗೆ ಬಹಳ ಪ್ರೀತಿಯ ರಾಗವೇ ಆಗಿಹೋಯಿತು. ತ್ಯಾಗರಾಜರೊಬ್ಬರೇ ಸುಮಾರು ಮೂವತ್ತಕ್ಕೂ ಹೆಚ್ಚು ರಚನೆಗಳನ್ನು ಕಲ್ಯಾಣಿ ರಾಗದಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಒಂದು ಉತ್ತಮ ರಚನೆ ಸುಂದರಿ ನೀ ದಿವ್ಯ ರೂಪಮುನು. ಆದಿತಾಳದಲ್ಲಿ ನಿಬದ್ಧವಾಗಿರುವ ಈ ಕೃತಿಯ ಸಾಹಿತ್ಯ ತೆಲುಗಿನಲ್ಲಿದೆ. ಈ ರಚನೆಯಲ್ಲಿ ತ್ಯಾಗರಾಜರು ತಿರುವೊಟ್ಟ್ರಿಯೂರಿನ ತ್ರಿಪುರ ಸುಂದರಿಯನ್ನು ನೋಡಿದ ತಮ್ಮ ಭಾಗ್ಯವನ್ನು ಬಡವನಿಗೆ ಸಿರಿಬಂದಂತೆ ಎಂದು ವರ್ಣಿಸಿದ್ದಾರೆ.
ಈ ರಚನೆಯನ್ನು ನೀವು ಇಲ್ಲಿ ಕೇಳಬಹುದು: ಬಾಲಮುರಳಿ ಅವರ ಕಂಠದಲ್ಲಿ ಸುಂದರಿ ನೀ ದಿವ್ಯ ರೂಪಮುನು. ಆರಂಭದಲ್ಲಿ ಕಲ್ಯಾಣಿ ರಾಗಾಲಾಪನೆಯೂ ಇದೆ. ಕೊನೆಯಲ್ಲಿ ಸೊಗಸಾದ ಕಲ್ಪನಾಸ್ವರಗಳು ಇವೆ. ಕೇಳಿ ಆನಂದಿಸಿ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications