ಭರ್ಜರಿ ಫೀಚರ್ಸ್ ಹೊಂದಿರುವ Xiaomi 14 CIVI: ಸೆಲ್ಫಿ ಪ್ರೀಯರೇ ಟಾರ್ಗೆಟ್
ಭಾರತೀಯ ಮೊಬೈಲ್ ಮಾರುಕಟ್ಟೆ ದೊಡ್ಡದಿದೆ. ಈ ಮಾರುಕಟ್ಟೆಯಲ್ಲಿ ದಿನವೂ ಹೊಸ ಗ್ರಾಹಕರನ್ನು ಹುಡುಕುವುದು ಕಂಪನಿಗಳಿಗೆ ದೊಡ್ಡ ಕೆಲಸ. ಈ ನಿಟ್ಟಿನಲ್ಲಿ ಕಂಪನಿಗಳು ಹೊಸ ಹೊಸ ಆವಿಷ್ಕಾರದೊಂದಿಗೆ ಮಾರುಕಟ್ಟೆಗೆ ಬರುತ್ತಿವೆ. ಅಲ್ಲದೆ ಹೊಸ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುತ್ತವೆ. ಅಂತಹದ್ದೇ ಹೊಸ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿರುವ ಚೀನಾ ಮೂಲದ ಜಿಯೋಮಿ ಮತ್ತೊಂದು ಫೋನ್ ಬಿಡುಗಡೆ ಮಾಡಲಿದೆ.
ಗ್ರಾಹಕರ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಮೊಬೈಲ್ ತಯಾರಿಸುತ್ತವೆ. ಈ ನಿಟ್ಟಿನಲ್ಲಿ ವಿಭಿನ್ನ ಮಾದರಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬರುತ್ತವೆ. ಈಗ ವಿಶ್ವದಲ್ಲಿ ಸೆಲ್ಫಿ ಕ್ರೇಜ್ ಸಹ ಹೆಚ್ಚಿದೆ ಇದನ್ನು ಗಮನದಲ್ಲಿಟ್ಟುಕೊಂಡು ಜಿಯೋಮಿ ಭರ್ಜರಿ ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ಮೊಬೈಲ್ ಲಾಂಚ್ ಮಾಡಲಿದೆ.

ಜಿಯೋಮಿ 14 ಅಲ್ಟ್ರಾ ಮೊಬೈಲ್ ಬಳಿಕ ಭಾರತೀಯ ಮಾರುಕಟ್ಟೆಗೆ Xiaomi 14 CIVI ಕಾಲಿಡಲಿದೆ. ಫೋನ್ ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ಮತ್ತು 50,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಆಗುತ್ತಿದ್ದು, ಮಿಡ್ ರೇಂಜ್ ಗ್ರಾಹಕರನ್ನು ಕಂಪನಿ ಟಾರ್ಗೆಟ್ ಮಾಡಲಿದೆ.
ಈ ಫೋನಿ ಡಿಸ್‌ಪ್ಲೇ ಹೇಗಿದೆ?
ಜಿಯೋಮಿ 14 ಸಿವಿ 6.55 ಇಂಚಿನ ಅಮ್ಲೋಡ್ 1.5K ಪ್ಯಾನೆಲ್ ಹೊಂದಿದ್ದು, 240 Hz ರಿಫ್ರೇಶ್ ದರವನ್ನು ಹೊಂದಿದೆ. ಅಲ್ಲದೆ 3,000 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಜಿಯೋಮಿ 14 ಸಿವಿ ಕರ್ವಡ್ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ.

ಜಿಯೋಮಿ 14 ಸಿವಿಯಲ್ಲಿ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ ನೀಡಲಾಗುತ್ತಿದ್ದು, 12GB ರ್ಯಾಮ್, 512GB ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಈ ಫೋನ್ 4,700 mAh ಬ್ಯಾಟರಿ ಹೊಂದಿದ್ದು, 67 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಭರ್ಜರಿ ಕ್ಯಾಮೆರಾ
ಜಿಯೋಮಿ 14 ಸಿವಿ ಕ್ಯಾಮೆರಾವು ಹಿಂಭಾಗದ ವೃತ್ತಾ ಕಾರದಲ್ಲಿ ಮೂರು ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರೈಮರಿ ಕ್ಯಾಮೆರಾ 50 MP ಮತ್ತು 50 MP ಲೈಕಾ ಪೋರ್ಟ್ರೇಟ್ ಶೂಟರ್ ಅನ್ನು ಹೊಂದಿದೆ. ಇನ್ನೊಂದು ಕ್ಯಾಮೆರಾ 12 MP ಅಲ್ಟ್ರಾ-ವೈಡ್ ಫೆಸಿಲಿಟಿ ಹೊಂದಿದೆ. ಈ ಫೋನ್‌ನಲ್ಲಿ ಸೆಲ್ಫಿಗಾಗಿ 32 MP ಪ್ರೈಮರಿ ಮತ್ತು 32 MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಮಾರಾಟವು ಜೂನ್ 20 ರಿಂದ ಪ್ರಾರಂಭವಾಗಲಿದ್ದು, ಜಿಯೋಮಿ ನ ವೆಬ್‌ಸೈಟ್, ಫ್ಲಿಪ್‌ಕಾರ್ಟ್‌ಗಳಲ್ಲಿ ಖರೀದಿಸಬಹುದು.
ಜಿಯೋಮಿ 14 ಸಿವಿ ಬೆಲೆ 8 GB RAM ಹೊಂದಿರುವ ಮೂಲ ರೂಪಾಂತರಕ್ಕೆ ರೂ 42,999 ಮತ್ತು 12 GB RAM, 512 GB ಇಂಟರ್ನಲ್ ಸ್ಟೋರೇಜ್ ಮೊಬೈಲ್ ರೂ 47,999 ಲಭ್ಯ. ಗ್ರಾಹಕರು 3,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದ.
ಜಿಯೋಮಿ 14 ಸಿವಿ ಬೆಲೆ
8 GB RAM 42,999
12 GB RAM 47,999
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications