20 ವರ್ಷ ವೈದ್ಯೆಯಾಗಿ ಸೇವೆ, ಬಳಿಕ ಬನ್‌ ಅಂಗಡಿ; ಮಾನಸಿಕ ಒತ್ತಡದಿಂದ ಹೊರಬಂದ ಡಾಕ್ಟರ್‌ ಬದುಕು ಈಗ ಹೇಗಿದೆ?

ಓದಿ ಡಾಕ್ಟರ್ಆಗಬೇಕು, ಎಂಜಿನಿಯರ್‌ ಆಗಬೇಕು ಎನ್ನುವ ಕನಸು ಬಹಳ ಮಂದಿಗೆ ಇರುತ್ತದೆ. ಡಾಕ್ಟರ್‌ ಆಗುವ ಭರದಲ್ಲಿ ರಾತ್ರಿ ನಿದ್ದೆ ಬಿಟ್ಟು ಓದಿ ಪರೀಕ್ಷೆಗಳಲ್ಲಿ ಪಾಸಾಗಿ, ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಡಾಕ್ಟರ್‌ಗಳ ಸಂಪಾದನೆ ಕಂಡು ಹೆಬ್ಬೇರಿಸುವ ಅನೇಕರಿಗೆ ಆ ಸಾಧನೆ ಹಿಂದಿರುವ ಕಷ್ಟಗಳ ಬಗ್ಗೆ ತಿಳಿದಿರುವುದಿಲ್ಲ. ವೈದೈಕೀಯ ವೃತ್ತಿ ಎಂದರೆ ಅದೊಂದು ತಪ್ಪಸ್ಸು.

Women Quite Medical Profession And Opened Steamed Bun Shop All Because Of Mental Stress Responsibility

Women: ಬದುಕಿನಲ್ಲಿ ನೆಮ್ಮದಿ ಮುಖ್ಯ

ಆದರೆ ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಅಂಶವಿದೆ. ವೃತ್ತಿ ಯಾವುದೇ ಇರಲಿ ಅಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲ ಎಂದಾದರೆ ಎಷ್ಟು ಸಂಪಾದನೆ ಇದ್ದರೂ ಸರಿ, ಹೆಸರು ಕೀರ್ತಿ ಇದ್ದರೂ ಸರಿ ಅದು ವೇಸ್ಟ್‌. ಮನಸ್ಸಿಲ್ಲದ ಮನಸ್ಸಿನಿಂದ ಮಾಡುವ ಕೆಲಸದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವುದು ಬಿಟ್ಟರೆ ಮತ್ತೇನೂ ಅಲ್ಲ. ಆ ಸಂದರ್ಭದಲ್ಲಿ ಆ ಬದುಕನ್ನು ಬಿಟ್ಟು ಹೊರ ಬರುವುದೇ ಜಾಣತನ.

ಇಲ್ಲೊಬ್ಬ ವೈದ್ಯೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಇದೀಗ ವೈದ್ಯಕೀಯ ವ್ರತ್ತಿಯಿಂದ ಹೊರಬಂದು ಸ್ಟೀಮ್ಡ್ ಸ್ಟಫ್ಡ್ ಬನ್ ಅಂಗಡಿಯನ್ನು ತೆರೆದಿದ್ದಾರೆ. ತಮ್ಮ ವೃತ್ತಿಜೀವನವನ್ನು ಬದಲಾಯಿಸಿಕೊಂಡ ಬಳಿಕ ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ಕಾಲ ದುಡೀತಾ ಇದ್ದಾರೆ. ಆದರೆ ಈ ಕೆಲಸ ಹೆಚ್ಚು ಸಂತೋಷವನ್ನು ಕೊಡುತ್ತದೆ ಎನ್ನುವುದು ಮಹಿಳೆಯ ಅಭಿಪ್ರಾಯ.

Women: ಸ್ಟೀಮ್ಡ್ ಸ್ಟಫ್ಡ್ ಬನ್ ಅಂಗಡಿ ವ್ಯಾಪಾರ

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ , 48 ವರ್ಷದ ಡಾಂಗ್ ಮಿನ್, 2023 ರಲ್ಲಿ ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ತೊರೆದು ಹುಬೈ ಪ್ರಾಂತ್ಯದ ವುಹಾನ್‌ನಲ್ಲಿ ಸ್ಟೀಮ್ಡ್ ಸ್ಟಫ್ಡ್ ಬನ್ ಅಂಗಡಿಯನ್ನು ತೆರೆದಿದ್ದಾರೆ. ಇದೀಗ 3 ವರ್ಷಗಳ ನಂತರ, ಅವರ ಮೊದಲ ಔಟ್‌ಲೆಟ್ ಯಶಸ್ವಿ ವ್ಯವಹಾರವಾಗಿ ಬೆಳೆದಿದೆ. ಜುಲೈನಲ್ಲಿ ಅವರು ಎರಡನೇ ಅಂಗಡಿಯನ್ನು ಓಪನ್‌ ಮಾಡಿದ್ದಾರೆ.

ಒತ್ತಡದಿಂದ ಡಾಕ್ಟರ್‌ ವೃತ್ತಿಗೆ ವಿದಾಯ

ವೈದ್ಯಕೀಯ ವೃತ್ತಿಯೊಂದಿಗೆ ಬಂದ ಒತ್ತಡ ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಿಕೊಳ್ಳುವುದು ಸಾಧ್ಯವಾಗದೆ ಡಾಕ್ಟರ್‌ ವೃತ್ತಿಗೆಯೇ ವಿದಾಯ ಹೇಳುವ ತೀರ್ಮಾನಕ್ಕೆ ಬರುತ್ತಾರೆ. ವೈದ್ಯೆಯಾಗಿದ್ದಾಗ, ಕೆಲಸ ಬಿಡುವ ಆಲೋಚನೆ ನನ್ನ ಮನಸ್ಸಿಗೆ ಆಗಾಗ ಬರುತ್ತಿತ್ತು. ಈಗ, ಬನ್ ಅಂಗಡಿಯನ್ನು ನಡೆಸುವುದು ಅಷ್ಟೊಂದು ಸುಲಭವಲ್ಲ, ದಿನ ಪೂರ್ತಿ ದುಡಿಯುವುದರಿಂದ ಸುಸ್ತಾಗಬಹುದು ಎನ್ನುವ ಯೋಚನೆಯೂ ಬರ್ತಾ ಇತ್ತಂತೆ. ಆದರೆ ಈಗ ತಾನು ಅತ್ಯಂತ ಸಂತೋಷವಾಗಿದ್ದೇನೆ ಎನ್ನುತ್ತಾರೆ ಡಾಂಗ್ ಮಿನ್.

ಸ್ತ್ರೀರೋಗತಜ್ಞರಿಂದ ಬನ್ ಅಂಗಡಿ ಮಾಲೀಕರವರೆಗಿನ ಪಯಣ

1999 ರಲ್ಲಿ ವುಹಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಿಂದ ಪದವಿ ಪಡೆದ ಡಾಂಗ್‌ ಶೆನ್ಜೆನ್‌ನಲ್ಲಿ ಸ್ತ್ರೀರೋಗತಜ್ಞೆಯಾಗಿ ವೃತ್ತಿಜೀವನವ ಆರಂಭಿಸುತ್ತಾರೆ. ನಂತರ ಅವರು ತಮ್ಮ ತಾಯಿಗೆ ಖಾಸಗಿ ಕ್ಲಿನಿಕ್ ಅನ್ನು ನಿರ್ವಹಿಸುವುದಕ್ಕೆ ಸಹಾಯ ಮಾಡಲು ವುಹಾನ್‌ಗೆ ತೆರಳುತ್ತಾರೆ. ಅವರ ತಾಯಿ ನಿವೃತ್ತರಾದ ನಂತರ, ಕ್ಲಿನಿಕ್ ಬಂದ್‌ ಆಗುತ್ತದೆ. ಕುಟುಂಬವು ಹುಬೈನಲ್ಲಿರುವ ತಮ್ಮ ಊರು ಟಿಯಾನ್ಮೆನ್ ಗೆ ವಾಪಾಸಾಗುತ್ತದೆ. ಡಾಂಗ್ ನಂತರ ವೈದ್ಯರಾಗಿ ಕೆಲಸಕ್ಕೆ ಸೇರುತ್ತಾರೆ. ಸಣ್ಣ ಸಮುದಾಯ ಆಸ್ಪತ್ರೆಯ ಕಾನೂನು ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಾರೆ. ಈ ಕೆಲಸದಲ್ಲಿ ಮಾನಸಿಕ ಒತ್ತಡ ಹೆಚ್ಚಿತ್ತು. ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ಅವರು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿತ್ತು.

ಒಬ್ಬ ವೈದ್ಯನಾಗಿ, ತಾನು ಗಣನೀಯ ಮಾನಸಿಕ ಒತ್ತಡವನ್ನು ಎದುರಿಸಿದೆ ಎನ್ನುವುದು ಡಾಂಗ್‌ ಅಭಿಪ್ರಾಯ. ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ವಿವಿಧ ಸರ್ಕಾರಿ ಸಂಸ್ಥೆಗಳಿಗಾಗಿ ವೈದ್ಯಕೀಯೇತರ ವ್ಯವಹಾರಗಳನ್ನು ಮಾಡುವುದಕ್ಕಾಗಿಯೂ ತನ್ನ ಎನರ್ಜಿಯನ್ನು ವ್ಯಯಿಸಬೇಕಿತ್ತು. ಚೀನಾದಲ್ಲಿನ ವೈದ್ಯಕೀಯ ವಿವಾದಗಳ ಸುತ್ತಲಿನ ಒತ್ತಡ ಮಿತಿ ಮೀರಿತ್ತು. ಕೊನೆಗೆ ಈ ವೃತ್ತಿಗೆ ಗುಡ್‌ ಬೈ ಹೇಳುವುದೇ ವಾಸಿ ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ ಡಾಂಗ್.‌

ಬನ್‌ ತಯಾರಿಸುವುದನ್ನೂ ಕಲಿ ವೈದ್ಯೆ

2023 ರಲ್ಲಿ ಇದೇ ರೀತಿಯ ಅಂಗಡಿಯನ್ನು ನಡೆಸುತ್ತಿದ್ದ ಕುಟುಂಬದಿಂದ ಡಾಂಗ್‌ ಕೂಡಾ ಸ್ಫೂರ್ತಿ ಪಡೆಯುತ್ತಾರೆ. ಅಲ್ಲಿಂದ ಸ್ಟೀಮ್ಡ್ ಸ್ಟಫ್ಡ್ ಬನ್ ವ್ಯವಹಾರದಲ್ಲಿ ತನ್ನ ಆಸಕ್ತಿ ಶುರುವಾಗುತ್ತದೆ. ಆರಂಭದಲ್ಲಿ ಅವರು ಬನ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರು. ಇವರ ಅಂಗಡಿಯ ಕುಕ್‌ ಅನಿರೀಕ್ಷಿತವಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಡಾಂಗ್ ಸ್ವತಃ ಬನ್ ತಯಾರಿಸುವುದು ಹೇಗೆಂದು ಕಲಿಯುತ್ತಾರೆ. ಶೀಘ್ರದಲ್ಲೇ ಬನ್‌ ಮಾಡುವ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಕೆಲಸ ಅವರಿಗೆ ಖುಷಿ ಕೊಡುತ್ತದೆ.ಕೊನೆಗೆ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಅಂಗಡಿಗೆಯೇ ಸಂಪೂರ್ಣವಾಗಿ ಫೋಕಸ್‌ ಮಾಡಲು ನಿರ್ಧಾರ ಮಾಡುತ್ತಾರೆ.

ಕುಟುಂಬದ ವಿರೋಧದ ನಡುವೆಯೂ ಹೊಸ ಸಾಹಸ

ಆರಂಭದಲ್ಲಿ ಅವರ ನಿರ್ಧಾರಕ್ಕೆ ಕುಟುಂಬದ ವಿರೋಧ ವ್ಯಕ್ತವಾಗುತ್ತದೆ. ಯಾಕೆಂದರೆ ಎಲ್ಲಾ ಹೆತ್ತವರ ಹಾಗೆಯೇ ಡಾಕ್ಟರ್‌ ಎನ್ನುವುದು ಸ್ಥಿರ ಮತ್ತು ಗೌರವಾನ್ವಿತ ಕೆಲಸ ಎನ್ನುವುದು ಅವರ ಅಭಿಪ್ರಾಯವೂ ಆಗಿತ್ತು. ಆದರೆ, ಬೇರೆಯವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಡಾಂಗ್‌ ಅವರಿಗೆ ತಿಳಿದಿತ್ತು. ಈಗಲೇ ಸುಮಾರು 50 ವರ್ಷ ವಯಸ್ಸಾಗಿದೆ ಮತ್ತು ಅನೇಕ ಅನುಭವಗಳನ್ನು ಅನುಭವಿಸಿದ್ದೇನೆ. ಹಾಗಿರುವಾಗ ಇನ್ನೊಬ್ಬರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ನಾನು ನನಗಾಗಿ ಬದುಕುವುದು ಮುಖ್ಯ ಎನ್ನುವ ನಿರ್ಧಾರಕ್ಕೆ ಬರುತ್ತಾರೆ.

ಅಂಗಡಿಯಲ್ಲಿ ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಬೇಕಾಗುತ್ತದೆ. ಆದರೂ ವೈದ್ಯೆಯಾಗಿ ಎದುರಿಸಿದ ಮಾನಸಿಕ ಒತ್ತಡ ಇಲ್ಲಿ ಅನುಭವಿಸುತ್ತಿಲ್ಲ ಎನ್ನುವ ಸಮಾಧಾನ ಅವರಿಗಿದೆ. ಅಲ್ಲದೆ ಈಗ ಅವರ ತಾಯಿ ಮತ್ತು ಸಹೋದರ ಕೂಡಾ ಅವರ ನಿರ್ಧಾರಕ್ಕೆ ಸಾಥ್‌ ಕೊಟ್ಟಿದ್ದಾರೆ.

ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ವಯಸ್ಸಿನ ಮಿತಿಯಿಲ್ಲ. ಮನಸ್ಸಿದ್ದರೆ, ಪರಿಶ್ರಮ ಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ಎಲ್ಲಾ ಪ್ರಯತ್ನಗಳಲ್ಲಿಯೂ ಯಶಸ್ಸು ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+