Diwali 2023: ದೀಪಾವಳಿಯಂದು ಏಕೆ ಜೂಜಾಡಲಾಗುತ್ತದೆ? ಈ ಸಂಪ್ರದಾಯ ಹೇಗೆ ಪ್ರಾರಂಭವಾಯಿತು ಎಂದು ತಿಳಿಯಿರಿ
ದೀಪಾವಳಿಗಾಗಿ ಎಲ್ಲೆಡೆ ಶಾಪಿಂಗ್ ಪ್ರಾರಂಭವಾಗಿದೆ. ಮಾರುಕಟ್ಟೆಗಳು ದೀಪಾವಳಿ ಅಲಂಕಾರಿಕ ವಸ್ತುಗಳಿಂದ ತುಂಬಿ ಹೋಗಿವೆ. ದೀಪಾವಳಿ ಹಬ್ಬ ಉತ್ಸಾಹದ ಜೊತೆಗೆ ಅನೇಕ ಪದ್ಧತಿಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಬಂಧಿಸಿದೆ. ಈ ಸಮಯದಲ್ಲಿ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಒಂದು ದೀಪಾವಳಿಯ ದಿನದಂದು ಜೂಜಾಟದ ಸಂಪ್ರದಾಯವಿದೆ. ಹಾಗಾದರೆ ದೀಪಾವಳಿಯಂದು ಜೂಜಾಟದ ಹಿಂದಿನ ಕುತೂಹಲಕಾರಿ ಕಥೆ ಏನು ಎಂದು ತಿಳಿಯೋಣ.
ಆಟದಲ್ಲಿ ಶಿವನನ್ನು ಸೋಲಿಸಿದ ಪಾರ್ವತಿ
ಪುರಾಣಗಳ ಪ್ರಕಾರ ಶಿವ ಮತ್ತು ಪಾರ್ವತಿ ದೀಪಾವಳಿಯ ದಿನದಂದು ಪಗಡೆ ಆಟ ಆಡುತ್ತಾರೆ. ಇದರಲ್ಲಿ ಶಿವನನ್ನು ಪಾರ್ವತಿ ದೇವಿ ಸೋಲಿಸುತ್ತಾಳೆ. ಅಂದಿನಿಂದ ಪ್ರತಿ ದೀಪಾವಳಿಯಂದು ಪಗಡೆಯಾಟ ಆಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಇದನ್ನು ಎಲ್ಲಿಯೂ ವಿವರಿಸಲಾಗಿಲ್ಲ.

ಲಕ್ಷ್ಮಿ ಕೋಪಕ್ಕೆ ಗುರಿ
ಪುರಾಣಗಳ ಪ್ರಕಾರ, ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಭಕ್ತರು ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ಸಂತೋಷವನ್ನು ಪಡುತ್ತಾರೆ. ಈ ಸಮಯದಲ್ಲಿ ಜೂಜಿನಲ್ಲಿ ಹಣವನ್ನು ಕಳೆದುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಏನನ್ನೂ ಬಾಜಿ ಕಟ್ಟದೆ ಜೂಜಾಡಬಹುದು.
ಮಹಾಭಾರತದ ಕಾಲದಲ್ಲೂ ಪಾಂಡವರು ಜೂಜಾಡುತ್ತಿದ್ದರು!
ಮಹಾಭಾರತದ ಕಾಲದಲ್ಲೂ ಜೂಜಾಡುವ ಸಂಪ್ರದಾಯವಿತ್ತು. ಪಾಂಡವರು ಜೂಜಿನಲ್ಲಿ ತಮ್ಮ ಸಂಪತ್ತು, ಹೆಂಡತಿ ಮತ್ತು ಎಲ್ಲವನ್ನೂ ಕಳೆದುಕೊಂಡರು. ಇದರ ನಂತರ ಪಾಂಡವರು ವನವಾಸಕ್ಕೆ ಹೋಗಬೇಕಾಯಿತು ಮತ್ತು ಅಂತಿಮವಾಗಿ ಭಯಾನಕ ಮಹಾಭಾರತ ಯುದ್ಧ ನಡೆಯಿತು. ಇದರಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು.
ದೇವರಿಗೂ ತೊಂದರೆ
ಜೂಜಾಟವು ತುಂಬಾ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡಬಹುದು. ಜೂಜು ಒಂದು ಆಟವಾಗಿದ್ದು, ಇದರಿಂದ ಮನುಷ್ಯರು ಮಾತ್ರವಲ್ಲದೆ ದೇವರೂ ಸಹ ಅನೇಕ ಬಾರಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಹೀಗಾಗಿ ಜೂಜಿನ ಚಟ ಯಾರನ್ನಾದರೂ ಹಾಳುಮಾಡುತ್ತದೆ. ಇದರಿಂದ ದೂರವಿರುವುದೇ ಒಳ್ಳೆಯದು.
ದೀಪಾವಳಿ ಯಾವಾಗ?
ದೇಶದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾದ ದೀಪಗಳ ಹಬ್ಬ ದೀಪಾವಳಿ ಇನ್ನೇನು ಬಂದೇ ಬಿಡ್ತು. ಪ್ರತಿ ವರ್ಷ ಎಲ್ಲರೂ ದೀಪಾವಳಿಗಾಗಿ ಕಾತರದಿಂದ ಕಾಯುತ್ತಾರೆ. ದೀಪಾವಳಿಯನ್ನು ಭಾನುವಾರ 12 ನವೆಂಬರ್ (2023) ರಂದು ಆಚರಿಸಲಾಗುತ್ತದೆ. ಐದು ದಿನಗಳ ದೀಪಗಳ ಹಬ್ಬವು ಧನತೇರಸ್‌ನಿಂದ (ನವೆಂಬರ್ 10) ಪ್ರಾರಂಭವಾಗುತ್ತದೆ ಮತ್ತು ಭಾಯ್ ದೂಜ್ ವರೆಗೆ (ನವೆಂಬರ್ 14) ಮುಂದುವರಿಯುತ್ತದೆ.
ಮಹಾಲಕ್ಷ್ಮಿಯನ್ನು ಪೂಜಿಸುವ ಸಮಯ
ಲಕ್ಷ್ಮಿ ಪೂಜೆ ಸಮಯಗಳು - 05.39 PM - 07.35 PM (12 ನವೆಂಬರ್ 2023), ಅವಧಿ - 01 ಗಂಟೆ 56 ನಿಮಿಷಗಳು
ಪ್ರದೋಷ ಕಾಲ - ಸಂಜೆ 05:29 ರಿಂದ ರಾತ್ರಿ 08:08
ವೃಷಭ ರಾಶಿ - 05:39 pm - 07:35 pm












Click it and Unblock the Notifications