ಅತೃಪ್ತ ಶಾಸಕರ ಮುಂದಿನ ಲೆಕ್ಕಾಚಾರ ಏನು? ಬಿಜೆಪಿ ಮೂಲಗಳಿಂದ ಇದೆಂಥ ಸುದ್ದಿ?

Recommended Video

      Karnataka Crisis:ಅತೃಪ್ತ ಶಾಸಕರ ಮುಂದಿನ ಲೆಕ್ಕಾಚಾರ ಏನು? ಬಿಜೆಪಿ ಮೂಲಗಳಿಂದ ಇದೆಂಥ ಸುದ್ದಿ? | BJP

      ಕಾಂಗ್ರೆಸ್- ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಿ, ಎಲ್ಲವೂ ಅಂದುಕೊಂಡಂತೆ ನಡೆದು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಪತನವಾದರೆ ಈ ಅತೃಪ್ತ ಶಾಸಕರ ಮುಂದಿನ ನಡೆ, ಲೆಕ್ಕಾಚಾರ ಏನು ಎಂಬ ಬಗ್ಗೆ ಚರ್ಚೆ ಈಗಾಗಲೇ ಆರಂಭವಾಗಿದೆ.

      ಇಷ್ಟು ಶಾಸಕರು ಒಂದು ಕಂತಿನಲ್ಲಿ ಬಿಜೆಪಿಗೆ ಸೇರ್ಪಡೆ ಆಗಿಬಿಟ್ಟರೆ, ಒಂದು ವೇಳೆ ಬಿಜೆಪಿಯೇ ಈ ಕೂಡಲೇ ಸರಕಾರ ರಚನೆ ಮಾಡಿದರೂ ಏನು ಸ್ಥಾನ- ಮಾನ ನೀಡಲು ಸಾಧ್ಯವಾದೀತು? ಇನ್ನು ಪಕ್ಷಕ್ಕಾಗಿಯೇ ದುಡಿಯುತ್ತಿರುವವರು, ಆಯಾ ವಿಧಾನಸಭಾ ಕ್ಷೇತ್ರದ ಸೋತ ಅಭ್ಯರ್ಥಿಗಳು, ನಿಷ್ಠಾವಂತ ಕಾರ್ಯಕರ್ತರು ಸುಮ್ಮನೆ ಕೂರುತ್ತಾರಾ ಎಂಬ ಪ್ರಶ್ನೆ ಎದುರಾಗುತ್ತದೆ.

      ಹೌದು, ಈ ಬಗ್ಗೆ ಆಲೋಚನೆ ಮಾಡಬೇಕಾದದ್ದು ಬಿಜೆಪಿ ತಾನೆ? ಇದೀಗ ಆ ಪಕ್ಷದ ಒಳಗಿಂದಲೇ ಈ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಾರೆ. "ಈಗ ಅತೃಪ್ತರ ಸಾಲಿನಲ್ಲಿ ಇರುವ ಶಾಸಕರ ಪೈಕಿ ಹಲವರು ಮುಂದೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಕೆಲವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಅದರಿಂದ ಪಕ್ಷಕ್ಕೆ ಏನೂ ಹಾನಿ ಆಗದಂತೆ ನೋಡಿಕೊಳ್ಳಲಾಗುತ್ತದೆ" ಎನ್ನುತ್ತಾರೆ.

      ಅದು ಹೇಗೆ ಸಾಧ್ಯ ಎಂಬುದರ ವಿವರ ಹೀಗಿದೆ. ಉದಾಹರಣೆಗೆ ಎಂಟಿಬಿ ನಾಗರಾಜ್. ಹೊಸಕೋಟೆಯ ಶಾಸಕರಾಗಿರುವ ಅವರು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರ ಮಗನನ್ನು ರಾಜಕಾರಣಕ್ಕೆ ತರಬೇಕು ಎಂಬುದು ಸದ್ಯದ ಉದ್ದೇಶ. ಆ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿಲ್ಲಬಹುದಾದ ಅಭ್ಯರ್ಥಿ ಅಂದರೆ ಬಿ. ಎನ್. ಬಚ್ಚೇಗೌಡರ ಮಗ.

      Dissident MLAs

      ಆದ್ದರಿಂದ ಒಂದು ರಾಜೀ ಮಾಡಿಕೊಳ್ಳುವುದು ಲೆಕ್ಕಾಚಾರ. ಎಂಟಿಬಿ ನಾಗರಾಜ್ ಮಗ ಗೆಲ್ಲಲು ಟಿಕೆಟ್ ನೀಡುವುದೂ ಸೇರಿದಂತೆ ಬಿಜೆಪಿಯು ಎಲ್ಲ ಸಹಾಯ ಮಾಡುತ್ತದೆ. ಬಿ. ಎನ್. ಬಚ್ಚೇಗೌಡ ಈಗ ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರವಾದ ಚಿಕ್ಕಬಳ್ಳಾಪುರದಿಂದ ಮುಂದಿನ ಸಲ ಅವರ ಮಗನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ. ಬಚ್ಚೇಗೌಡರು ಮುಂದಿನ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತಿದೆ.

      ಅದೇ ರೀತಿ ಎಚ್. ವಿಶ್ವನಾಥ್ ಅವರ ಮಗನಿಗೆ, ಬಿ. ಸಿ. ಪಾಟೀಲರ ಮಗಳಿಗೆ ರಾಜಕೀಯ ಭವಿಷ್ಯ ರೂಪಿಸಿಕೊಡುವ ಯೋಜನೆಗಳು ಇವೆಯೇ ಹೊರತು, ಬಿಜೆಪಿಗೆ ಕರೆತಂದು ಪಕ್ಷದಲ್ಲಿ ಆಂತರಿಕ ಕಿತ್ತಾಟಕ್ಕೆ ಕಾರಣ ಆಗಬಾರದು ಎಂಬುದು ಲೆಕ್ಕಾಚಾರ ಎನ್ನುತ್ತವೆ ಪಕ್ಷದ ಮೂಲಗಳು.

      "ಈ ಹಿಂದಿನ ಸನ್ನಿವೇಶಗಳಲ್ಲಿ ಆದ ಆಪಸವ್ಯ ಈ ಬಾರಿ ಆಗಬಾರದು ಎಂಬ ಸ್ಪಷ್ಟ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಅದರ ಜತೆಗೆ ಕಾಂಗ್ರೆಸ್ ಪಾಲಿಗೆ ಅನುಭವಿ ನಾಯಕರ ಬಲ ಇದೆಯಲ್ಲಾ, ಅದನ್ನು ಮುರಿದು ಹಾಕಬೇಕು ಎಂಬುದು ಕೂಡ ಈಗಿನ ಯೋಜನೆಯ ಭಾಗ" ಎನ್ನುತ್ತವೆ ಮೂಲಗಳು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+