Reverse Walking: 'ರಿವರ್ಸ್ ವಾಕಿಂಗ್' ಎಂದರೇನು? ಇದರಿಂದ ಆಗುವು ಐದು ಪ್ರಯೋಜನಗಳೇನು?
ಈಗಿನ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ.. ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಈಗಿನಿಂದಲೇ ಯೋಚನೆ ಮಾಡುತ್ತಾರೆ. ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಜನ ದಿನವೂ ಬೆವರು ಹರಿಸುತ್ತಾರೆ. ತಮಗೆ ಇಷ್ಟದ ವ್ಯಾಯಾಮ ಮಾಡಿ ದೇಹ ದಂಡನೆ ಮಾಡುತ್ತಾರೆ. ಎಲ್ಲರೂ ತಮ್ಮ ಶಕ್ತಿ ಅನುಸಾರವಾಗಿ ವ್ಯಾಯಮ ಮಾಡುತ್ತಾರೆ.
ಜನರು ತಮ್ಮ ದೇಹಕ್ಕೆ ಯಾವ ವ್ಯಾಯಮ ಅನುಕೂಲವೋ ಅದನ್ನು ಮಾಡಲು ಬಯಸುತ್ತಾರೆ. ಕೆಲವೊಬ್ಬರು ದಿನವೂ ವಾಕಿಂಗ್ ಮಾಡಿದರೆ, ಇನ್ನು ಕೆಲವು ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಇನ್ನು ಹಲವರು ಯೋಗಾಸನ ಮಾಡುತ್ತಾರೆ. ಇನ್ನು ಹಲವರು ಈವೆಲ್ಲಾ ಮಾಡಲು ನಮಗೆ ಟೈಮ್ ಇಲ್ಲ ಎಂದು, ಫಾಸ್ಟ್ ವಾಕಿಂಗ್ ಮಾಡುತ್ತಾರೆ. ಹೀಗೆ ತಮ್ಮ ಬ್ಯೂಸಿ ಲೈಫ್‌ಗೆ ಅಡಿಜಸ್ಟ್ ಆಗುವ ರೀತಿ ಹಲವು ವ್ಯಾಯಮಗಳನ್ನು ಮಾಡುತ್ತಾರೆ.

ಈ ಎಲ್ಲ ವ್ಯಾಯಾಮಗಳ ಮಧ್ಯೆ ಈಗ ಬಹು ಪ್ರಚಲಿತವಾಗಿರುವ ಇನ್ನೊಂದು ವ್ಯಾಯಾಮ ಅಂದರೆ ಅದು ರಿವರ್ಸ್ ವಾಕಿಂಗ್. ನೇರವಾಗಿ ನಡೆಯುವುದಕ್ಕಿಂತ ಹಿಂಬದಿಯಿಂದ ನಡೆಯುವುದು ಹೆಚ್ಚು ಪ್ರಯೋಜನಕಾರಿ. ಇದು ನಮ್ಮ ಮನಸ್ಸು ಮತ್ತು ದೇಹದ ನಡುವೆ ಉತ್ತಮ ಸಮತೋಲನವನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರತಿನಿತ್ಯ 20-30 ನಿಮಿಷಗಳ ಕಾಲ ರಿವರ್ಸ್ ವಾಕ್ ಮಾಡುವುದರಿಂದ ಮೂತ್ರಪಿಂಡ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ.
ಇದರಿಂದ ಆಗುವ ಲಾಭಗಳೇನು
ಬೊಜ್ಜನ್ನು ಇಳಿಸಿಕೊಳ್ಳಲು ಬಯಸುವವರಿಗೆ ರಿವರ್ಸ್ ವಾಕಿಂಗ್ ವರದಾನ. ನೀವು ಹಿಮ್ಮುಖವಾಗಿ ನಡೆದರೆ, ನಿಮ್ಮ ದೇಹದ ಮುಂಭಾಗ ಮತ್ತು ಹಿಂಭಾಗದ ಭಾಗಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸಬೇಕು. ಇದರೊಂದಿಗೆ ನೀವು ನಿಮ್ಮ ದೇಹವನ್ನು ಬಿಗಿಗೊಳಿಸುತ್ತೀರಿ, ಇದರಿಂದಾಗಿ ನಿಮ್ಮ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.

ಮೊಣಕಾಲು ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಈ ವಿಧಾನ ಸಹಾಯಕ. ಈ ರೀತಿ ವಾಕಿಂಗ್ ಮಾಡುವುದರಿಂದ ಮೊಣಕಾಲಿನ ನೋವು ಉದ್ವೇಗ, ಊತದಂತಹ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಸಂಧಿವಾತದಿಂದ ಬಳಲುತ್ತಿರುವವರಿಗೆ ಇದು ಬೆಸ್ಟ್.
ಏಕಾಗ್ರತೆ ಹೆಚ್ಚುತ್ತದೆ
ಹೀಗೆ ನಡೆಯುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿನ ನಡುವಿನ ಸಮತೋಲನವನ್ನು ಸುಧಾರಿಸುತ್ತದೆ. ನೇರವಾಗಿ ನಡೆಯುವ ಬದಲು, ನೀವು ಹಿಮ್ಮುಖವಾಗಿ ನಡೆದರೆ, ನಿಮ್ಮ ಮನಸ್ಸು ನಿಮ್ಮ ದೇಹದ ಚಲನೆ ಕೇಂದ್ರಿಕೃತವಾಗುತ್ತದೆ. ಅಲ್ಲದೆ ಏಕಾಗ್ರತೆ ಹೆಚ್ಚುತ್ತದೆ. ಹಿಮ್ಮುಖವಾಗಿ ನಡೆಯುವುದರಿಂದ ನಿಮ್ಮ ಬೆನ್ನಿನ ಸ್ನಾಯುಗಳಿಗೂ ವ್ಯಾಯಾಮ ಆದಂತೆ ಆಗುತ್ತವೆ. ಅಲ್ಲದೆ ಬೆನ್ನುನೋವಿನಿಂದ ಪರಿಹಾರವನ್ನು ನೀಡುತ್ತದೆ.
ಹಿಮ್ಮುಖವಾಗಿ ನಡೆಯುವಾಗ ನಿಮ್ಮ ಮೆದಳು ಹೆಚ್ಚು ಕೆಲಸ ಮಾಡುತ್ತದೆ. ಇದರಿಂದಲೂ ನಿಮ್ಮ ಮೆದುಳಿಗೆ ಉತ್ತಮ ವ್ಯಾಯಮ. ಪ್ರತಿ ದಿನವೂ ಈ ಅಭ್ಯಾಸವನ್ನು ಬೆಳೆಸಿಕೊಂಡಲ್ಲಿ, ಖಿನ್ನತೆ, ಮಾನಸಿಕ ಖಾಯಿಲಿಗಳಿಂದ ಕೊಂಚ ಮುಕ್ತಿ ಪಡೆಯಬಹುದು.
ಸಾಮಾನ್ಯವಾಗಿ ವಾಕಿಂಗ್ ಮಾಡುವಾಗ ನಿಮ್ಮ ಕಾಲುಗಳಿಗೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಒಂದೊಮ್ಮೆ ನೀವು ರಿವರ್ಸ್ ವಾಕಿಂಗ್ ಮಾಡಲು ಆರಂಭಿಸಿದರೆ, ನಿಮ್ಮ ಕಾಳಿನ ಹಿಂಭಾಗದ ಸ್ನಾಯುಗಳಿಗೆ ವ್ಯಾಯಮವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಕಾಲುಗಳು ಬಲಗೊಳ್ಳುತ್ತವೆ.












Click it and Unblock the Notifications