ಏನಿದು ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್? ಯಾರಿಗೆ ಲಾಭ?

ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ನಲುಗಿದೆ. ಈವರೆಗೂ 26,39,721 ಮಂದಿ ಜನರಿಗೆ ನೋವೆಲ್ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ಗೆ ಇಲ್ಲಿಯವರೆಗೂ 1,84,280 ಜನ ಬಲಿಯಾಗಿದ್ದರೆ, 7,22,387 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Recommended Video

      ಮುಂದೆ ಬರಲಿದೆ ಒಳ್ಳೆಯ ದಿನ,ಹೊರ ರಾಜ್ಯದ ಕನ್ನಡಿಗರಿಗೆ ಅಭಯ ನೀಡಿದ ಶಾಸಕ

      ಭಾರತದಲ್ಲಿ ಇಲ್ಲಿಯವರೆಗೂ 21,456 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಆ ಪೈಕಿ 682 ಮಂದಿ ಮೃತಪಟ್ಟಿದ್ದರೆ, 4,382 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

      ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿವಿಧ ದೇಶಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಬಹುತೇಕ ದೇಶಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ.

      ಸೋಂಕು ಕಡಿಮೆಯಾಗುತ್ತಿದ್ದಂತೆಯೇ, ಕೆಲವು ಕಡೆ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. ಹೀಗಿರುವಾಗಲೇ, 'ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್' ಬಗ್ಗೆ ಚರ್ಚೆ ಆರಂಭವಾಗಿದೆ. ಹಾಗಾದ್ರೆ, ಏನಿದು 'ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್'? ಇಲ್ಲಿದೆ, ಸಂಪೂರ್ಣ ಮಾಹಿತಿ...

      ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್ ಎಂದರೇನು.?

      ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್ ಎಂದರೇನು.?

      ಕೋವಿಡ್-19 ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಮತ್ತು ಕೊರೊನಾ ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ಹೊಂದಿರುವವರಿಗೆ ನೀಡಲಾಗುವ ಪ್ರಮಾಣ ಪತ್ರವೇ 'ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್'. ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಅದರಿಂದ ಚೇತರಿಸಿಕೊಂಡವರಲ್ಲಿ ಸ್ವಲ್ಪ ಸಮಯದವರೆಗೆ ಇಮ್ಯೂನಿಟಿ ಇರಲಿದೆ. ಮತ್ತೆ ಬರಬಹುದಾದ ರೋಗವನ್ನು ಆ ಇಮ್ಯೂನಿಟಿ ತಡೆಯಲಿದ್ದು, ಅಂಥವರಿಗೆ ಈ 'ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್' ಅಥವಾ 'ಬ್ಯಾಕ್ ಟು ವರ್ಕ್ ಪಾಸ್' ನೀಡುವ ಉದ್ದೇಶವಿದೆ. ಆದರೆ ಆ ಇಮ್ಯೂನಿಟಿ ಎಷ್ಟು ದಿನಗಳವರೆಗೆ ಇರಲಿದೆ ಎಂಬುದನ್ನು ಸಂಶೋಧಕರಾಗಲಿ ಅಥವಾ ವಿಜ್ಞಾನಿಗಳಾಗಲಿ ಖಚಿತ ಪಡಿಸಿಲ್ಲ.

      ಇಮ್ಯೂನಿಟಿ ಪಾಸ್ ಪೋರ್ಟ್ ಸಿಗುವುದು ಹೇಗೆ.?

      ಇಮ್ಯೂನಿಟಿ ಪಾಸ್ ಪೋರ್ಟ್ ಸಿಗುವುದು ಹೇಗೆ.?

      ಇಮ್ಯೂನಿಟಿ ಪಾಸ್ ಪೋರ್ಟ್ ಪಡೆಯಬೇಕು ಅಂದ್ರೆ ಹಲವು ಪರೀಕ್ಷೆಗಳಿಗೆ ಒಳಪಡಬೇಕು. ಇದರಿಂದ ವಿಜ್ಞಾನಿಗಳ ಅಧ್ಯಯನಕ್ಕೂ ಸಹಕಾರಿ ಆಗುತ್ತದೆ. ಪರೀಕ್ಷೆಗಳಿಂದ ವ್ಯಕ್ತಿಗಳಲ್ಲಿ ವೈರಾಣು ವಿರುದ್ಧ ಹೋರಾಡಲು ನಿರ್ದಿಷ್ಟ Antibodies ಹೊಂದಿದೆಯಾ ಎಂಬುದನ್ನು ಪತ್ತೆಹಚ್ಚಬಹುದಾಗಿದೆ. ಜೊತೆಗೆ, ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ನಿರ್ದಿಷ್ಟ ಪ್ರೋಟೀನ್ ಗಳ ಮೇಲೂ ಗಮನ ಹರಿಸಬಹುದಾಗಿದೆ.

      ಇದರಿಂದ ಏನು ಲಾಭ

      ಇದರಿಂದ ಏನು ಲಾಭ

      ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್ ಗಳಿದ್ದರೆ ಜನರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಲಾಕ್ ಡೌನ್ ನಿಯಮಗಳನ್ನು ಸಡಿಲಿಸಬಹುದು. ಆದ್ರೆ, ಈ ಇಮ್ಯೂನಿಟಿ ಪಾಸ್ ಪೋರ್ಟ್ ಗಳನ್ನು ಜನರಿಗೆ ಯಾವಾಗ ವಿತರಿಸಲಾಗುತ್ತದೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.

      ಕೆಲವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ

      ಕೆಲವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ

      ಈಗಾಗಲೇ ಕೋವಿಡ್-19 ನಿಂದ ಬಳಲಿ ಸಂಪೂರ್ಣವಾಗಿ ಗುಣಮುಖರಾದ ಕೆಲವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ಕೊರೊನಾ ವೈರಸ್ ಇಮ್ಯೂನಿಟಿ ಪಾಸ್ ಪೋರ್ಟ್ ಗಳ ಬಳಕೆ ಲಸಿಕೆ ಬರುವವರೆಗೂ ಸಾಧ್ಯವಿಲ್ಲ ಎಂಬುದು ಹಲವರ ವಾದ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+