ರಸಗುಲ್ಲಾ ನಮ್ದೇ ಅಂತ ಕಿತ್ತಾಡಿಕೊಂಡ ಭಾರತದ ಎರಡು ರಾಜ್ಯಗಳು!
Rasogolla controversy: ಭಾರತದ ವಿವಿಧ ರಾಜ್ಯಗಳು ಗಡಿ, ಭಾಷೆ, ನೀರಿನ ವಿಚಾರವಾಗಿ ಜಗಳ ಮಾಡಿಕೊಳ್ಳುವುದು. ಈ ವಿಷಯಗಳ ಬಗ್ಗೆ ವಿವಾದ ಸೃಷ್ಟಿ ಆಗುವುದು ಇದೆ. ಮಹಾರಾಷ್ಟ್ರ - ಕರ್ನಾಟಕ ನಡುವೆ ಗಡಿ ವಿವಾದ ಇದ್ದರೆ. ತಮಿಳುನಾಡು - ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಇದೆ. ಆದರೆ, ಭಾರತದ ಎರಡು ರಾಜ್ಯಗಳು ಒಂದು ರಸಗುಲ್ಲಾಗೋಸ್ಕರ ಕಿತ್ತಾಡಿಕೊಂಡಿತ್ತು ಅಂದರೆ ನೀವು ನಂಬುತ್ತೀರಾ. ಹೌದು ನಮ್ಮ ದೇಶದ ಎರಡು ರಾಜ್ಯಗಳು ರಸಗುಲ್ಲಾ ನಮ್ದು.. ರಸಗುಲ್ಲಾ ನಮ್ದು ಅಂತ ಕಿತ್ತಾಡಿಕೊಂಡಿದ್ದವು. ಇದಕ್ಕಾಗಿ ಕಮಿಟಿಗಳನ್ನು ಸಹ ರಚನೆ ಮಾಡಲಾಗಿತ್ತು. ಇತಿಹಾಸದ ಅಧ್ಯಯನಗಳನ್ನು ಹುಡುಕಲಾಗಿತ್ತು.
ಎರಡು ರಾಜ್ಯಗಳ ನಡುವೆ ರಸಗುಲ್ಲಾಗಾಗಿ ನಡೆದ ಚರ್ಚೆ ದೇಶದಾದ್ಯಂತ ಸುದ್ದಿಯಾಗಿತ್ತು. ಆ ಪರಿ ಒಂದು ರಸಗುಲ್ಲಾಗಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಗುದ್ದಾಡಿಕೊಂಡಿದ್ದವು. ಈ ಚರ್ಚೆ ಬರೋಬ್ಬರಿ 2 ವರ್ಷ ನಡೆದಿತ್ತು. ಕೊನೆಗೆ ಇದರಲ್ಲಿ ಒಂದು ರಾಜ್ಯಕ್ಕೆ ಗೆಲುವಾಯ್ತು. ಹಾಗಾದರೆ ಏನಿದು ರಸಗುಲ್ಲಾ ಗುದ್ದಾಟ. ದೇಶದಾದ್ಯಂತ ಈ ವಿಷಯ ಚರ್ಚೆಯಾಗಿದ್ದು ಯಾಕೆ ಎನ್ನುವ ಮಾಹಿತಿ ಇಲ್ಲಿದೆ.

ದೇಶದಲ್ಲಿ ಮಳೆಗಾಲದಲ್ಲಿ ಮಳೆ ಕೊರತೆ ಎದುರಾದರ ಅದರ ಬೆನ್ನಲ್ಲೇ ಎರಡು ರಾಜ್ಯಗಳ ನಡುವೆ ನೀರು ಹಂಚಿಕೆ ವಿವಾದ ಶುರುವಾಗುತ್ತದೆ. ಅಂತಹ ರಾಜ್ಯಗಳಲ್ಲಿ ಕರ್ನಾಟಕ - ತಮಿಳುನಾಡು ಸಹ ಸೇರಿವೆ. ಇನ್ನು ಒಂದೇ ಭಾಷೆಯಾದರೂ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಡುವೆ ಹಲವು ಕಾರಣಕ್ಕೆ ಈಗಲೂ ವೈಮನಸ್ಸು ಇದೆ. ಆದರೆ, ಸಿಹಿ ತಿನಿಸಿಗಾಗಿ ಎರಡು ರಾಜ್ಯಗಳು ಗುದ್ದಾಡಿಕೊಂಡಿದ್ದನ್ನ ನೀವು ಎಂದಾದರೂ ಕೇಳಿದ್ದೀರಾ. ಹೌದು ಇದು ಅಚ್ಚರಿಯಾದರೂ ನಿಜ.
ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ಸುದೀರ್ಘ ಎರಡು ವರ್ಷಕ್ಕೂ ಹೆಚ್ಚು ರಸಗುಲ್ಲಾ ವಿಷಯವಾಗಿ ಸಂಘರ್ಷಕ್ಕೆ ಇಳಿದಿದ್ದವು. ರಸಗುಲ್ಲಾ ನಮ್ಮ ರಾಜ್ಯದ ಸಿಹಿ ಎಂದು ಎರಡೂ ರಾಜ್ಯಗಳು ವಾದ ಮಾಡಿದ್ದವು. ಪಶ್ಚಿಮ ಬಂಗಾಳ ರಾಜ್ಯ ಈ ಸಹಿ ತಿನಿಸು ಕೊಲ್ಕತ್ತಾದ ಮಿಠಾಯಿ ತಯಾರಕರಾದ ನಬಿನ್ ಚಂದ್ರದಾಸ್ ಅವರು ಅನ್ವೇಷಿಸಿದ್ದರು ಎಂದಿದ್ದಾರೆ. ಒಡಿಶಾ 13ನೇ ಶತಮಾನದಲ್ಲಿ ಪುರಿಯಲ್ಲಿ ಈ ಸಿಹಿತಿಂಡಿಯನ್ನು ಕಂಡುಹಿಡಿಯಲಾಗಿತ್ತು ಎಂದು ವಾದಿಸಿತ್ತು.

ಈ ಎರಡು ರಾಜ್ಯಗಳ ನಡುವೆ ಒಂದು ಸಿಹಿ ತಿನಿಸಿಗಾಗಿ ನಡೆದ ಜಗಳವನ್ನು ನೋಡಿ ಈ ರೀತಿ ವಿಷಯಕ್ಕೂ ರಾಜ್ಯಗಳು ಜಗಳ ಮಾಡಿಕೊಳ್ಳುವುದು ಇದೆಯ ಅಂತ ಜನ ಮಾತನಾಡಿಕೊಂಡಿದ್ದರು. ಆದರೆ ಈ ಸಿಹಿ ತಿನಿಸು ಈ ಎರಡೂ ರಾಜ್ಯಗಳಲ್ಲಿ ಭಾವನಾತ್ಮಕ ವಿಷಯವಾಗಿತ್ತು. ಎರಡೂ ರಾಜ್ಯಗಳಲ್ಲೂ ಜನ ಹೆಚ್ಚು ಸಿಹಿ ತಿನ್ನುತ್ತಾರೆ. ಪಶ್ಚಿಮ ಬಂಗಾಳದ ಸಿಹಿ ತಿನಿಸುಗಳಲ್ಲಿ ರಸಗುಲ್ಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ರಸಗುಲ್ಲಾ ವಿವಾದ ಶುರುವಾಗಿದ್ದು ಹೇಗೆ ?
ರಸಗುಲ್ಲಾ ಚರ್ಚೆ ಅಥವಾ ವಿವಾದ ಪ್ರಾರಂಭವಾಗುವುದಕ್ಕೆ ಮುಖ್ಯ ಕಾರಣ ಒಡಿಶಾ ಸರ್ಕಾರದ ಒಂದು ನಿರ್ಧಾರ. 2015ರಲ್ಲಿ ಈ ಚರ್ಚೆ ಶುರುವಾಯ್ತು. ಅಂದಿನ ಒಡಿಶಾ ಸರ್ಕಾರವು ಉಲ್ಟೊ ರಥ ಎನ್ನುವ ಹಬ್ಬ ಆಚರಣೆಯ ದಿನವನ್ನು ರಸಗುಲ್ಲಾ ದಿವಸ್ ಎಂದು ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ವಿರೋಧ ವ್ಯಕ್ತಪಡಿಸಿತ್ತು. ಎರಡು ರಾಜ್ಯಗಳ ನಡುವೆ ಈ ವಿಚಾರವಾಗಿ ನಡೆದ ಚರ್ಚೆ ಹಾಗೂ ವಾದ - ವಿವಾದ ಅಂತಿಮವಾಗಿ ಪಶ್ಚಿಮ ಬಂಗಾಳದ ರಸಗುಲ್ಲಾಗೆ ಜಿಐ ಟ್ಯಾಗ್ (ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್) ಸಿಗುವ ಮೂಲಕ ಈ ವಿವಾದ ಅಂತ್ಯವಾಯ್ತು. ಪಶ್ಚಿಮ ಬಂಗಾಳ ರಸಗುಲ್ಲಾಗೆ ಜಿಐ ಟ್ಯಾಗ್ ಪಡೆದ ಮೇಲೂ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆಯಾಗುತ್ತಲ್ಲೇ ಇದೆ ಎನ್ನುವುದು ಬೇರೆ ಮಾತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications