ವಿಡಿಯೋ: ಮೊಟ್ಟೆ ಕದಿಯಲು ಬಂದ ಹುಡುಗಿಗೆ ಪಾಠ ಕಲಿಸಿದ ನವಿಲು

ತಾಯಂದಿರು ತಮ್ಮ ಮಕ್ಕಳಿಗಾಗಿ ಅಗತ್ಯವಿದ್ದಾಗ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಮಗು ಅಪಾಯದಲ್ಲಿದ್ದರೆ, ಅವರು ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ. ಅಷ್ಟೇ ಅಲ್ಲ ತನ್ನ ಮಕ್ಕಳನ್ನು ಉಳಿಸಲು ತಾಯಿ ಆಗಾಗ್ಗೆ ತನ್ನ ಕ್ರೂರ ರೂಪವನ್ನು ತಾಳುತ್ತಾಳೆ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳು ಕೂಡ ತಮ್ಮ ಮಕ್ಕಳ ಜಾಗರೂಕತೆಯಿಂದ ಮತ್ತು ಭಾವನಾತ್ಮಕವಾಗಿರುತ್ತವೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನವಿಲು ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಏನುಬೇಕಾದರೂ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದನ್ನು ನೋಡಿ ನೀವೂ ಆಶ್ಚರ್ಯ ಪಡುತ್ತೀರಿ.

ನವಿಲು ಸೌಂದರ್ಯದ ಸೆಲೆ, ನೃತ್ಯಕ್ಕೆ ಸ್ಫೂರ್ತಿ, ನಾಡಿಗೆ ಘನತೆ, ಪ್ರಕೃತಿಯ ಸೃಷ್ಟಿಗೆ ಹೆಗ್ಗಳಿಕೆಯ ಗರಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ರಾಷ್ಟ್ರ ಪಕ್ಷಿ. ಬ್ರಹ್ಮ ಪುರುಸೊತ್ತಾಗಿ ಸುಂದರವಾಗಿ ಸೃಷ್ಟಿಸಿದ ಕೆಲವೇ ಪಕ್ಷಿಗಳಲ್ಲಿಇದೂ ಒಂದಿರಬೇಕು ಅನ್ನುವಷ್ಟು ಚೆಂದದ ರೂಪ. ಇದನ್ನು ಬೇಟೆಗಾರ ನೋಡಿದರೂ ಬೆರಗಾಗಿ ಒಂದು ಕ್ಷಣ ತನ್ನ ಕೆಲಸದಲ್ಲಿ ತಡವರಿಸುವುದು ಸುಳ್ಳಲ್ಲ. ಅಂತಹ ಕುಸುರಿ ಕೆಲಸದ ಪುಕ್ಕವಿರುವ ಪಕ್ಷಿ. ಇವನ್ನು ಎಷ್ಟು ಹೊತ್ತು ನೋಡಿದರು ನೋಡುತ್ತಲೇ ಇರಬೇಕು ಎನಿಸುತ್ತದೆ. ಹೀಗಿರುವಾಗ ಇಲ್ಲೊಬ್ಬ ಹುಡುಗಿ ವೈರಲ್ ವಿಡಿಯೋದಲ್ಲಿ ನವಿಲು ಮೊಟ್ಟೆಗಳ ಕಳ್ಳತನಕ್ಕೆ ಮುಂದಾಗುತ್ತಾಳೆ. ಅದರ ನಂತರ ಆಗಿದ್ದೇ ಬೇರೆ.

ನವಿಲನ್ನು ದೂರ ಎಸೆದ ಹುಡುಗಿ

ನವಿಲನ್ನು ದೂರ ಎಸೆದ ಹುಡುಗಿ

ಈ ವೈರಲ್ ವಿಡಿಯೊದಲ್ಲಿ, ನವಿಲು ಹೊಲದಲ್ಲಿ ತನ್ನ ಮೊಟ್ಟೆಗಳ ಬಳಿ ಕುಳಿತಿರುವುದು ಕಂಡುಬರುತ್ತದೆ. ಆ ನವಿಲು ತನ್ನ ಪಕ್ಕದಲ್ಲಿ ಇರುವ ತನ್ನ ಮೊಟ್ಟೆಗಳನ್ನು ರಕ್ಷಿಸುತ್ತಿರುವಂತೆ ತೋರುತ್ತದೆ. ಅಷ್ಟರಲ್ಲಿ ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ಆ ನವಿಲನ್ನು ಹಿಡಿದು ಎಸೆಯುತ್ತಾಳೆ. ಇದರ ನಂತರ ಅವಳು ಅಲ್ಲಿರುವ ಮೊಟ್ಟೆಗಳನ್ನು ಎರಡೂ ಕೈಗಳಿಂದ ಸಂಗ್ರಹಿಸಲು ಪ್ರಾರಂಭಿಸುತ್ತಾಳೆ.

ಹುಡುಗಿ ಮೇಲೆ ದಾಳಿ ಮಾಡಿದ ನವಿಲು

ಹುಡುಗಿ ಮೇಲೆ ದಾಳಿ ಮಾಡಿದ ನವಿಲು

ಹುಡುಗಿ ಎಸೆದ ನಂತರ, ನವಿಲು ಸ್ವಲ್ಪ ದೂರದಲ್ಲಿ ಬೀಳುತ್ತದೆ. ಹುಡುಗಿ ಅದರ ಮೊಟ್ಟೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ, ನವಿಲು ದೂರದಿಂದ ಹಾರಿ ಅವಳ ಮೇಲೆ ದಾಳಿ ಮಾಡುತ್ತದೆ. ದಾಳಿ ಮಾಡಿದ ರಬಸಕ್ಕೆ ಹುಡುಗಿ ಮೊಟ್ಟೆಗಳಿಂದ ದೂರ ಗದ್ದೆಗೆ ಬೀಳುತ್ತಾಳೆ. ಇದರೊಂದಿಗೆ ಇಡೀ ಮೊಟ್ಟೆಗಳೂ ಅಲ್ಲೊಂದು ಇಲ್ಲೊಂದು ಚೆಲ್ಲಾಪಿಲ್ಲಿಯಾಗಿ ಬಿಳುತ್ತವೆ.

ಹುಡುಗಿಗೆ ಗಾಯ

ನವಿಲು ಎಷ್ಟು ವೇಗದಿಂದ ದಾಳಿ ಮಾಡುತ್ತದೆಂದರೆ ಹುಡುಗಿ ಬಲವಾಗಿ ಕೆಳಗೆ ಬಿದ್ದು ದಾಳಿಯಿಂದ ಗಾಯಗೊಂಡು ದೂರ ಉರುಳುತ್ತಾಳೆ. ಹುಡುಗಿಯ ಸ್ಥಿತಿ ಮತ್ತು ನವಿಲಿನ ತೀಕ್ಷ್ಣವಾದ ದಾಳಿಯನ್ನು ನೋಡಿದರೆ, ನವಿಲು ತನ್ನ ಮೊಟ್ಟೆಯನ್ನು ಮುಟ್ಟಿದಾಗ ಎಷ್ಟು ಕೋಪಗೊಂಡಿತು ಎನ್ನುವುದು ತೋರುತ್ತದೆ. ಮಾತ್ರವಲ್ಲದೆ ತನ್ನ ಮೊಟ್ಟೆಗಳನ್ನು ಉಳಿಸಲು ಅದು ತನಗಿಂತ ಬಲಶಾಲಿಯಾದ ಹುಡುಗಿಯ ಮೇಲೂ ದಾಳಿ ಮಾಡುತ್ತದೆ ಎಂದು ತಿಳಿಯಬಹುದು.

ವಿಡಿಯೋ ವೈರಲ್

ವಿಡಿಯೋ ವೈರಲ್

ಈ ವಿಡಿಯೊವನ್ನು IG & tiktok @thenitawooshow ಹೆಸರಿನ ಬಳಕೆದಾರರು Twitter ನಲ್ಲಿ ಹಂಚಿಕೊಂಡಿದ್ದಾರೆ ಮತ್ತು 'ಪೀಕಾಕ್ ಹೇಳಿದರು' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ....... ಜನರು ಈ ವಿಡಿಯೊಗೆ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ನವಿಲಿನ ಶೌರ್ಯವನ್ನು ಶ್ಲಾಘಿಸುತ್ತಿದ್ದಾರೆ. ಇದೇ ವೇಳೆ ಕೆಲವರು ಹುಡುಗಿಗೆ ತಕ್ಕ ಪಾಠ ಕಲಿಸಿದ್ದಾರೆ ಎನ್ನುತ್ತಿದ್ದಾರೆ. ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈವರೆಗೆ 34.7 ಸಾವಿರ ವೀಕ್ಷಣೆಗಳು ಬಂದಿವೆ. ಜನರು ಕೂಡ ಇದನ್ನು ಲೈಕ್ ಮಾಡಿ ಶೇರ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+