ಅಮೆರಿಕ ವೀಸಾಗೆ ಭಾರತೀಯರು 800 ದಿನ ಕಾಯಬೇಕು, ಚೀನಾ-ಪಾಕ್‌ಗೆ 2 ದಿನ ಸಾಕು!
ವೀಸಾ ವಿಚಾರವಾಗಿ ಭಾರತೀಯರು ಗಲಿಬಿಲಿ ಗೊಂಡಿದ್ದಾರೆ. ಭಾರತೀಯರು ಅಮೆರಿಕ ದೇಶದ ವೀಸಾ ಪಡೆದುಕೊಳ್ಳಲು ಸುಮಾರು ಎರಡು ವರ್ಷಗಳಗಿಂತಲೂ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಆದರೆ, ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌನಲ್ಲಿ ವಾಸಿಸುವ ವೀಸಾ ಅರ್ಜಿದಾರರಿಗೆ ಕಾಯುವ ಸಮಯವು ಭಾರತೀಯ ನಗರಗಳಿಗಿಂತ ಕಡಿಮೆಯಾಗಿದೆ. ಪಾಕಿಸ್ತಾನಕ್ಕೆ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ನೇಮಕಾತಿಗಳಿಗಾಗಿ ಕಾಯುವ ಸಮಯವು ವಿದ್ಯಾರ್ಥಿ/ವಿನಿಮಯ ವೀಸಾಗಳಿಗೆ ಕೇವಲ 1 ದಿನ ಮಾತ್ರ!
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವೆಬ್‌ಸೈಟ್‌ನಲ್ಲಿ ದೇಶದ ದೆಹಲಿಯಿಂದ ವೀಸಾ ಅರ್ಜಿಗಳಿಗಾಗಿ 833 ದಿನಗಳ ಅಪಾಯಿಂಟ್‌ಮೆಂಟ್ ಕಾಯುವ ಸಮಯವಿದೆ ಎಂದು ತೋರಿಸುತ್ತದೆ. ಆದರೆ ಬೀಜಿಂಗ್‌ಗೆ ಕಾಯುವ ಸಮಯ ಕೇವಲ 2 ದಿನಗಳು. ಅಮೆರಿಕವು ಚೀನಾಕ್ಕೆ 2 ದಿನಗಳಲ್ಲಿ ವೀಸಾ ನೀಡುತ್ತಿದೆ. ಭಾರತೀಯರು ಯುಎಸ್ ವೀಸಾ ಕಾಯುವ ಅವಧಿ 800 ದಿನಗಳಿಗಿಂತ ಹೆಚ್ಚು ದಿನ ಕಾಯಬೇಕಾಗಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಭಾರತದಿಂದ ಅಮೇರಿಕಾಕ್ಕೆ ಹೋಗುವವರು ವೀಸಾಗಾಗಿ 2 ವರ್ಷಗಳವರೆಗೆ ದೀರ್ಘಕಾಲ ಕಾಯಬೇಕಾಗಿದೆ ಮತ್ತು ಇದರಿಂದಾಗಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಜನರ ಕೋಪ ಮತ್ತು ದೂರುಗಳ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬುಧವಾರ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಭಾರತದಿಂದ ಬಾಕಿ ಉಳಿದಿರುವ ಯುಎಸ್ ವೀಸಾ ಅರ್ಜಿಗಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇನ್ನು ಇದಕ್ಕೆ ಪ್ರಮುಖ ಕಾರಣವೆಂದರೆ ಕೋವಿಡ್ ಸಾಂಕ್ರಾಮಿಕ ಎಂದು ಯುಎಸ್ ಉಲ್ಲೇಖಿಸಿದೆ, ಆದರೆ ಅವರ ಈ ವೆಬ್‌ಸೈಟ್ ಬೀಜಿಂಗ್‌ಗೆ ವೀಸಾ ಅರ್ಜಿಯನ್ನು 2 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಮತ್ತು ದೆಹಲಿಯಿಂದ ಸಲ್ಲಿಕೆಯಾದ ಅರ್ಜಿಗಳಿಗೆ 848 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿದೆ.

ಪಾಕಿಸ್ತಾನದ ವಿದ್ಯಾರ್ಥಿಗೆ ವೀಸಾಕ್ಕಾಗಿ ಒಂದೇ ದಿನ ಸಾಕು!
ಆದರೆ ವಿದ್ಯಾರ್ಥಿ ವೀಸಾಕ್ಕಾಗಿ ದೆಹಲಿ ಮತ್ತು ಮುಂಬೈನಿಂದ ಕಾಯುವ ಸಮಯ 430 ದಿನ ಬೇಕಾಗುತ್ತದೆ. ರಾಜಧಾನಿಯಲ್ಲಿ ಸಂದರ್ಶಕ ವೀಸಾಗಾಗಿ ಇದು 833 ದಿನಗಳು ಮತ್ತು ಇತರ ವೀಸಾಗಳಿಗೆ ಕಾಯುವ ಸಮಯ 390 ದಿನಗಳು. ಅದೇ ರೀತಿ ಮುಂಬೈನಲ್ಲಿ ಸಂದರ್ಶಕರ ವೀಸಾಕ್ಕಾಗಿ 848 ದಿನಗಳು ಮತ್ತು ಇತರ ವೀಸಾಗಳಿಗಾಗಿ 392 ದಿನಗಳು ಕಾಯಬೇಕಾಗಿದೆ.
ಆಶ್ಚರ್ಯಕರವಾಗಿ ವಿದ್ಯಾರ್ಥಿ ವೀಸಾಕ್ಕಾಗಿ ಇಸ್ಲಾಮಾಬಾದ್‌ಗೆ ಇದು ಕೇವಲ ಒಂದು ದಿನ ಕಾಯುವ ಸಮಯ ಸಾಕು! ಇನ್ನು ಬೀಜಿಂಗ್‌ಗೆ ಅಮೆರಿಕ ವೀಸಾ ಎರಡು ದಿನಗಳು. ಸಂದರ್ಶಕ ವೀಸಾಕ್ಕಾಗಿ ಇಸ್ಲಾಮಾಬಾದ್‌ನಿಂದ ಅರ್ಜಿದಾರರು ಕಾಯುವ ಸಮಯ 450 ದಿನಗಳು. ಆದ್ದರಿಂದ ಬೀಜಿಂಗ್‌ಗೆ ಸಂದರ್ಶಕ ವೀಸಾ ಅಥವಾ ವಿದ್ಯಾರ್ಥಿ ವೀಸಾ ಆಗಿರಲಿ, ಕಾಯುವ ಸಮಯವು ಎರಡಕ್ಕೂ ಕೇವಲ 2 ದಿನಗಳು ಮಾತ್ರ ಇದೆ ಆದರೆ ಭಾರತೀಯರು 2 ವರ್ಷಗಿಂತಲೂ ಹೆಚ್ಚು ಸಮಯ ವೀಸಾಗಾಗಿ ಕಾಯಬೇಕಾಗಿದೆ.

ಕೋವಿಡ್ ಕಾರಣದಿಂದ ವಿಳಂಬ?
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 2020ರಲ್ಲಿ ವಿಶ್ವದಾದ್ಯಂತ ಎಲ್ಲಾ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವ ಪ್ರಕ್ರಿಯೆಯನ್ನು ಯುಸ್ ಸ್ಥಗಿತಗೊಳಿಸಿದ ನಂತರ ಯುಸ್ ವೀಸಾ ಸೇವೆಗಳು ಈಗ ಬಾಕಿ ಉಳಿದಿರುವ ಅರ್ಜಿಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿವೆ. ಉಭಯ ವಿದೇಶಾಂಗ ಸಚಿವರು ಸುಮಾರು ಒಂದು ಗಂಟೆಗಳ ಕಾಲ ಅಮೆರಿಕದಲ್ಲಿ ಭೇಟಿಯಾಗಿದ್ದು, ಪ್ರತಿಭಾವಂತರ ಅಭಿವೃದ್ಧಿ ಮತ್ತು ಚಲನೆಗೆ ಅನುಕೂಲವಾಗುವಂತೆ ಇದು ನಮ್ಮ ಪರಸ್ಪರ ಹಿತಾಸಕ್ತಿಯಾಗಿದೆ ಎಂದು ಜೈಶಂಕರ್ ಸಭೆಯ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಫಾಗ್ಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಬ್ಲಿಂಕನ್ ಅವರೊಂದಿಗಿನ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.

ಬಳಕೆದಾರರು ಸಹಾಯಕ್ಕಾಗಿ ಮನವಿ
ಭಾರತದಲ್ಲಿನ ಹಲವಾರು ಇಂಟರ್ನೆಟ್ ಬಳಕೆದಾರರು ಬುಧವಾರ ಟ್ವಿಟ್ಟರ್‌ನಲ್ಲಿ ಯುಎಸ್ ವೀಸಾಗಳಿಗಾಗಿ ಭಾರತೀಯರು ಸಲ್ಲಿಸಿದ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ವಿಳಂಬವು ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ಈ ಕುರಿತು ಪ್ರಕಟವಾದ ಮಾಧ್ಯಮ ವರದಿಗಳನ್ನು ವಿದ್ಯಾರ್ಥಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ವೀಸಾಗಾಗಿ ಕಾಯುವ ಅವಧಿಯನ್ನು ಉಲ್ಲೇಖಿಸಲಾಗಿದೆ.

ಸಚಿವ ಎಸ್ ಜೈಶಂಕರ್ ಮನವಿ ಮಾಡಿದ ವಿಧ್ಯಾರ್ಥಿಗಳು
ಟ್ವೀಟ್ ಬಳಕೆದಾರರು ಟ್ವೀಟ್ ಮಾಡಿ, "ಭಾರತದಿಂದ ಹೆಚ್ಚಿನ ಸಂಖ್ಯೆಯ ಮಿಲಿಯನೇರ್‌ಗಳು, ತಂತ್ರಜ್ಞಾನ ವೃತ್ತಿಪರರು, ವೈದ್ಯರು ಮತ್ತು ವಿದ್ಯಾರ್ಥಿಗಳು ಯುಎಸ್‌ಗೆ ತೆರಳಲು ಉತ್ಸುಕರಾಗಿದ್ದಾರೆ. ವೀಸಾ ಕಾಯುವ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚು. ಈ ಬಳಕೆದಾರರು ಯುಎಸ್ ವೀಸಾಗಾಗಿ ಸಂದರ್ಶನವನ್ನು ಪ್ರಾರಂಭಿಸಿದರು; ಕಾಯುವ ಅವಧಿ? ಕೇವಲ 800 ದಿನಗಳು! ಶೀರ್ಷಿಕೆಯೊಂದಿಗೆ ಪ್ರಕಟವಾದ ಮಾಧ್ಯಮ ವರದಿಯ ಸ್ಕ್ರೀನ್‌ಶಾಟ್‌ನ್ನು ಸಹ ಹಂಚಿಕೊಂಡಿದ್ದಾರೆ. ಅದೇ ರೀತಿ, ಇನ್ನೊಬ್ಬ ಬಳಕೆದಾರರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಬರೆದಿದ್ದಾರೆ, "ಸರ್, ಭಾರತ-ಯುಎಸ್ ವೀಸಾ ಸಮಸ್ಯೆಯು ನಿಜವಾಗಿಯೂ ಅನೇಕ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಹಿತಾಸಕ್ತಿಗಳನ್ನು ಘಾಸಿಗೊಳಿಸುತ್ತಿದೆ. ದಯವಿಟ್ಟು ಅವರ ಧ್ವನಿಯನ್ನು ಹೆಚ್ಚಿಸಲು ಸಹಾಯ ಮಾಡಿ." ಎಂದು ಹೇಳಿಕೊಂಡಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications