Smartphone: ಜುಲೈನಲ್ಲಿ ಲಾಂಚ್ ಆಗಲಿರುವ ಮೊಬೈಲ್‌ಗಳ ಪಟ್ಟಿ ಇಲ್ಲಿದೆ
ಪ್ರತಿ ತಿಂಗಳು ಮೊಬೈಲ್ ಕಂಪನಿಗಳು ಒಂದಿಲ್ಲಾ ಒಂದು ಫೋನ್ ಬಿಡುಗಡೆ ಮಾಡುತ್ತವೆ. ಈ ಫೋನ್‌ಗಳನ್ನು ಕೊಂಡುಕೊಳ್ಳಲು ಗ್ರಾಹಕರು ಸಹ ತುದಿಗಾಲಿನಲ್ಲಿ ನಿಂತಿರುತ್ತಾರೆ. ಭರ್ಜರಿ ಫೀಚರ್ಸ್ ಹಾಗೂ ಆಕರ್ಷಕ ಬೆಲೆಗಳನ್ನು ಹೊತ್ತ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಈ ತಿಂಗಳು ಸಹ ಹಲವು ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿವೆ.
ನೀವು ಏನಾದರೂ ಒಂದು ಒಳ್ಳೆಯ ಮೊಬೈಲ್ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ಕೊಂಚ ದಿನ ಕಾಯ್ದರೆ ಸಾಕು ಭರ್ಜರಿ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳು ನಿಮ್ಮ ಕೈ ಸೇರಲಿವೆ. ಈ ಫೋನ್‌ಗಳು ಎಲ್ಲ ರೇಂಜ್‌ಗಳಲ್ಲೂ ಬಿಡುಗಡೆ ಆಗಲಿದ್ದು, ಗ್ರಾಹಕ ತನ್ನ ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಪಡೆಯುತ್ತಾನೆ. ಜುಲೈ ತಿಂಗಳಲ್ಲಿ ಹಲವು ಕಂಪನಿಗಳು ಮೊಬೈಲ್ ಲಾಂಚ್ ಮಾಡಲಿವೆ. ಇವು ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಿಂದ ಹಿಡಿದು ಪ್ರೀಮಿಯಂ ಸೆಗ್ಮೆಂಟ್ ವರೆಗೂ ಇವೆ. ಹಾಗಿದ್ದರೆ ಈ ತಿಂಗಳು ರಿಲೀಸ್ ಆಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಜುಲೈನಲ್ಲಿ ಬಿಡುಗಡೆ ಆಗಲಿರುವ ಮೊಬೈಲ್ಸ್
ಇನ್ನು ಇದೇ ತಿಂಗಳು ಮಾರುಕಟ್ಟೆಯಲ್ಲಿ ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿರುವ ಫೋನ್ Redmi 13 5G. ಈ ಪೋನ್ ಭಾರತದಲ್ಲಿ ಜುಲೈ 9 ರಂದು ಬಿಡುಗಡೆಯಾಗಲಿದೆ. ಸುಧಾರಿತ ಆಂಡ್ರಾಯ್ಡ್ 14, ಕ್ವಾಲಕಂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಹೊಂದಿರುವ ಬಜಿಟ್ ಫ್ರೆಂಡ್ಲಿ ಫೋನ್ 108 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರಲಿದೆ. ಇದರಿಂದಿಗೆ 5,030 mAh ಬ್ಯಾಟರಿ ಬರಲಿದ್ದು, 12,999 ರೂ.ಗೆ ಈ ಫೋನ್ ಗ್ರಾಹಕರ ಕೈ ಸೇರಲಿದೆ.
ಒನ್‌ಪ್ಲಸ್ ನಾರ್ಡ್ 4
OnePlus Nord 4 ಜುಲೈ 14 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಫೋನ್‌ನಲ್ಲಿ ಕ್ವಾಲಕಂ ಸ್ನ್ಯಾಪ್ ಡ್ರ್ಯಾಗನ್ 7 ಜನರೇಷನ್ 3 ಪ್ರೊಸೆಸರ್ ಹೊಂದಿರಲಿದೆ. ಈ ಫೋನ್ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಹೊಂದಿರಲಿದೆ. ಅಲ್ಲದೆ 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಹಿಂಭಾಗದಲ್ಲಿ 50MP ಮತ್ತು ಮುಂಭಾಗದಲ್ಲಿ 16MP ಕ್ಯಾಮೆರಾ ಹೊಂದಿರಲಿದೆ. ಅಲ್ಲದೆ 5,500mAh ಬ್ಯಾಟರಿ ಹೊಂದಿದ್ದು, 28,999 ರೂಪಾಯಿಗಳಲ್ಲಿ ಕೈ ಗೆ ಸಿಗಲಿದೆ.

ಒಪ್ಪೋ ಬಿಡುಗಡೆಗೆ ಸಿದ್ಧತೆ
Oppo Reno 12 ಸರಣಿಯ ಫೋನ್‌ಗಳು ಭಾರತದಲ್ಲಿ ಇದೇ ತಿಂಗಳು ಲಗ್ಗೆ ಇಡಲಿವೆ. AI ಫೀಚರ್ಸ್ ಹೊಂದಿರುವ ಫೋನ್‌ಗಳು ಗ್ರಾಹಕರ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ಫೋನ್ ವಿಶೇಷತೆ ಅಂದರೆ ನೆಟ್‌ವರ್ಕ್ ಇಲ್ಲದೆಯೂ ಕರೆಗಳನ್ನು ಮಾಡುವ ತಂತ್ರಜ್ಞಾನ ಅಳವಡಿಲಸಾಗಿದೆ. ಈ ಫೋನ್ ಮಿಡಿಯಾ ಟೆಕ್ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಹೊಂದಿರಲಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಈ ಫೋನ್ 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರಲಿದೆ. ಈ ಫೋನ್ ಬೆಲೆ ಸುಮಾರು 40,000 ರೂಪಾಯಿ ಆಗಿರುವ ಸಾಧ್ಯತೆ ಇದೆ.
ಎರಡು ಸ್ಯಾಮ್‌ಸಂಗ್ ಫೋನ್‌ಗಳು ಬಿಡುಗಡೆ?
ಜುಲೈ ತಿಂಗಳಲ್ಲಿ ಹೆಚ್ಚು ಫ್ಲಿಪ್ ಫೋನ್‌ಗಳು ಲಾಂಚ್ ಆಗುವ ಸಾಧ್ಯತೆ ಇದೆ. ಇದರಲ್ಲಿ ಮೊಟೊ ರೇಜರ್ ಸಹ ಸೇರಿದೆ. ಕಂಪನಿಯು ಇತ್ತೀಚೆಗೆ Moto Razr 50 Ultra ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. ಈ ಫೋನ್ ಈಗ ಜುಲೈ 4 ರಂದು ಭಾರತಕ್ಕೆ ಕಾಲಿಡಲಿದೆ. 6.9 ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 8S Gen 3 ಪ್ರೊಸೆಸರ್ ಹೊಂದಿರುವ ಫೋನ್ ಭರ್ಜರಿ ಕ್ಯಾಮೆರಾ ಫೀಚರ್ಸ್ ಹೊಂದಿದೆ. ಈ ಫೋನ್ 12 ಜಿಬಿ ರ್ಯಾಮ್‌ನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಫೋನ್ ರೂ 75,000 ವ್ಯಾಪ್ತಿಯಲ್ಲಿ ಬಿಡುಗಡೆಯಾಗಲಿದೆ.

ಈ ತಿಂಗಳು ಸ್ಯಾಮ್‌ಸಂಗ್ ಎರಡು ಮೊಬೈಲ್ ಬಿಡುಗಡೆ ಮಾಡಲಿದೆ. ಗ್ಯಾಲಕ್ಸಿ ಫೋಲ್ಡ್ 6 ಮತ್ತು ಫ್ಲಿಪ್ 6 ಜುಲೈನಲ್ಲಿ ಬಿಡುಗಡೆ ಆಗಲಿದ್ದು, ಇದು ಈ ಕಂಪನಿಯ ದುಬಾರಿ ಮತ್ತು ಶಕ್ತಿಯುತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು. ಈ ಫೋನ್‌ನಲ್ಲಿ ಕ್ವಾಲಕಂ ನ ಅತ್ಯಂತ ಶಕ್ತಿಶಾಲಿ ಚಿಪ್‌ಸೆಟ್ ಸಿಗಲಿದೆ. ಮತ್ತು AI ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. Z ಫೋಲ್ಡ್ 6 ಬೆಲೆ 1,25,000 ಆಗಿರುವ ಸಾಧ್ಯತೆ ಇದ್ದು, Z Flip 6 ಬೆಲೆ 79,499 ರೂಪಾಯಿಗಳ ಆಸುಪಾಸಿನಲ್ಲಿ ಲಾಂಚ್ ಆಗಲಿದೆ.












Click it and Unblock the Notifications