ಏನಿದು ಸವರನ್ ಗೋಲ್ಡ್ ಬಾಂಡ್? ಹೂಡಿಕೆಯಿಂದ ಏನು ಪ್ರಯೋಜನವೇನು?

ನವದೆಹಲಿ, ಅಕ್ಟೋಬರ್ 07: ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದ ಸವರನ್ ಗೋಲ್ಡ್ ಬಾಂಡ್ ಯೋಜನೆ ಇದೀಗ ಕಾರ್ಯಗತವಾಗುತ್ತಿದೆ. ಚಿನ್ನದ ಬಾಂಡ್ ಖರೀದಿದಾರರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇಲ್ಲಿದೆ ಸದವಕಾಶ.

ಚಿನ್ನದ ಠೇವಣಿ ಮತ್ತು ಚಿನ್ನ ಸಾಲ ಯೋಜನೆಗೆ ಬದಲಾಗಿ ಮೂರು ಹೊಸ ಯೋಜನೆಗಳನ್ನು ಮೋದಿ ಸರ್ಕಾರ್ 1.0 ಅವಧಿಯನ್ನು ಘೋಷಿಸಲಾಗಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಚಿನ್ನ ನಗದೀಕರಣ, ಸವರನ್ ಗೋಲ್ಡ್ ಬಾಂಡ್ ಹಾಗೂ ಇಂಡಿಯನ್ ಗೋಲ್ಡ್ ಕಾಯಿನ್ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದರು. ಸವರನ್ ಗೋಲ್ಡ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು 50 ಟನ್ ಗಳಷ್ಟು ಮೌಲ್ಯಕ್ಕೆ ಸಮಾನವಾದ 13,500 ಕೋಟಿ ರು ಬೆಲೆ ಬಾಳುವ ಬಾಂಡ್ ಗಳನ್ನು ಸರ್ಕಾರ ವಿತರಿಸಲಿದೆ.

ಆಮದು ಪ್ರಮಾಣ ತಗ್ಗಿಸುವ ಉದ್ದೇಶ: ಪ್ರತಿ ವರ್ಷ 1,000 ಟನ್ ಗಳಷ್ಟು ಚಿನ್ನ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣ ಆಮದಾಗುತ್ತಿದೆ. ಇಂಧನದ ನಂತರ ಚಿನ್ನ ಆಮದು ಪ್ರಮಾಣವೇ ಅಧಿಕವಾಗಿದೆ. ಇದರಿಂದ ಚಿನ್ನದ ಆಮದು ಕಡಿಮೆ ಮಾಡುವುದು ಹಾಗೂ ಜನರು ಬಳಸದೆ ಕಪಾಟು ಸೇರಿರುವ ಚಿನ್ನವನ್ನು ಬ್ಯಾಂಕ್​ನಲ್ಲಿಡುವಂತೆ ಮಾಡಿ ಬಡ್ಡಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.

 ಪ್ರತಿ ಗ್ರಾಂ ಚಿನ್ನದ ಬೆಲೆ 3,788 ರು ನಿಗದಿ

ಪ್ರತಿ ಗ್ರಾಂ ಚಿನ್ನದ ಬೆಲೆ 3,788 ರು ನಿಗದಿ

ಚಿನ್ನದ ನಗದೀಕರಣ ಮಾಡುವ ಪ್ರಮುಖ ಯೋಜನೆಗಳಲ್ಲಿ ಸವರನ್ ಗೋಲ್ಡ್ ಬಾಂಡ್(SGB) ಕೂಡಾ ಒಂದು, ಈ ಯೋಜನೆಯಡಿಯಲ್ಲಿ ಚಿನ್ನದ ಬಾಂಡ್ ಗಳು ಅಕ್ಟೋಬರ್ 7ರಿಂದ ಅಕ್ಟೋಬರ್ 11ರವರೆಗೆ ಖರೀದಿಗೆ ಲಭ್ಯವಿರಲಿದೆ. ಈ ಯೋಜನೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 3,788 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಕನಿಷ್ಠ 1 ಗ್ರಾಂನಿಂದ ಗರಿಷ್ಠ 500 ಗ್ರಾಂ ವರೆಗೆ ಹೂಡಿಕೆ ಮಾಡಬಹುದಾಗಿದ್ದು, ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4ಕೆಜಿ ಆಗಿದೆ. ಟ್ರಸ್ಟ್ ಗಳಿಂದ 20 ಕೆಜಿ ವರೆಗೆ ಖರೀದಿ ಮಿತಿ ನಿಗದಿಯಾಗಿದೆ.

ಸವರನ್ ಗೋಲ್ಡ್ ಬಾಂಡ್ ಎಂದರೇನು?

ಸವರನ್ ಗೋಲ್ಡ್ ಬಾಂಡ್ ಎಂದರೇನು?

2015-16ರ ಕೇಂದ್ರ ಬಜೆಟ್ ನಲ್ಲಿ ಘೋಷಿತ ಯೋಜನೆ ಇದಾಗಿದ್ದು, ಚಿನ್ನದ ನಗದೀಕರಣಾಕ್ಕಾಗಿ ಮೋದಿ ಸರ್ಕಾರ ಹೊರ ತಂದ ಪ್ರಮುಖ ಯೋಜನೆ.

* ಈ ಚಿನ್ನದ ಬಾಂಡ್ ನಲ್ಲಿ ಗ್ರಾಹಕರು ವಾರ್ಷಿಕವಾಗಿ 500 ಗ್ರಾಂ ತನಕ ಹೂಡಿಕೆ ಮಾಡಬಹುದು.
* ಹೂಡಿಕೆ ಉದ್ದೇಶದಿಂದ ಚಿನ್ನ ಖರೀದಿದಾರರಿಗೆ ಈ ಯೋಜನೆ.
* 2, 5, 10 ಗ್ರಾಂಗಳ ಬಾಂಡ್​ಗಳು ಲಭ್ಯ.
* ಚಿನ್ನದ ಗಟ್ಟಿ ಬದಲು ಬಾಂಡ್ ಖರೀದಿಗೆ ಅವಕಾಶ.
* ವಾರ್ಷಿಕ 500 ಗ್ರಾಂ ಗರಿಷ್ಠ ಹೂಡಿಕೆ ಮಿತಿ.

* 5-7 ವರ್ಷಗಳ ಅವಧಿಗೆ ಬಾಂಡ್ ವಿತರಣೆ
* ಹೂಡಿಕೆ ಮೇಲೆ ಸಾಲ, ಆದಾಯ ತೆರಿಗೆ ವಿನಾಯತಿ, ಆನ್ ಲೈನ್ ಪಾವತಿಗೆ ರಿಯಾಯಿತಿ ಎಲ್ಲವೂ ಲಭ್ಯ.

ಬಾಂಡ್ ಎಲ್ಲಿ ಲಭ್ಯ, ಹೂಡಿಕೆ ಪ್ರಯೋಜನವೇನು?

ಬಾಂಡ್ ಎಲ್ಲಿ ಲಭ್ಯ, ಹೂಡಿಕೆ ಪ್ರಯೋಜನವೇನು?

ಎಲ್ಲಿ ಲಭ್ಯ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು, ಎನ್ ಬಿಎಫ್ ಸಿ ಹಾಗೂ ಅಂಚೆ ಕಚೇರಿ ಗಳಲ್ಲಿ ಸಿಗುತ್ತದೆ.

ಏನು ಪ್ರಯೋಜನ?: ಇತರೆ ಚಿನ್ನದ ಯೋಜನೆ ಮೇಲಿನ ಹೂಡಿಕೆಗೆ ಅನ್ವಯವಾಗುವ ತೆರಿಗೆ ಈ ಯೋಜನೆಗೂ ಅನ್ವಯವಾಗುತ್ತದೆ. ಹೂಡಿಕೆ ಮೇಲೆ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ. ಈ ಯೋಜನೆ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಹೂಡಿಕೆ ಮಾಡುವ ಚಿನ್ನದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆನ್ ಲೈನ್ ನಲ್ಲಿ ಬಾಂಡ್ ಖರೀದಿಸುವ ಮತ್ತು ಬಾಂಡ್ ಖರೀದಿಗೆ ಡಿಜಿಟಲ್ ರೂಪದಲ್ಲಿ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ಐವತ್ತು ರೂಪಾಯಿ ರಿಯಾಯಿತಿ ನೀಡಲಾಗುತ್ತದೆ.

 ಸವರನ್ ಗೋಲ್ಡ್ ಬಾಂಡ್ ಬಗ್ಗೆ ಇನ್ನಷ್ಟು ವಿವರ

ಸವರನ್ ಗೋಲ್ಡ್ ಬಾಂಡ್ ಬಗ್ಗೆ ಇನ್ನಷ್ಟು ವಿವರ

* 20 ಸಾವಿರ ರು ತನಕ ನಗದು ರೂಪದಲ್ಲಿ ಪೇಮೆಂಟ್ ಮಾಡಬಹುದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸೌಲಭ್ಯ ಬಳಸಬಹುದು.
* ಬಾಂಡ್ ಗಳ ಮೇಲೆ ವಿತರಣೆ ದಿನದಿಂದ ವಾರ್ಷಿಕ 2.50 % ಬಡ್ಡಿ ಸಿಗಲಿದೆ. ಅರ್ಧ ವಾರ್ಷಿಕವಾಗಿ ಬಡ್ಡಿ ಸೇರಿಸಲಾಗುವುದು. ಬಾಂಡ್ ಅವಧಿ ಮುಕ್ತಾಯವಾದಾಗ ಕೊನೆ ಬಡ್ಡಿ ಸೇರಿಸಿ ನೀಡಲಾಗುವುದು.
* ಆರ್ ಆರ್ ಬಿ, ಸಣ್ಣ ಆರ್ಥಿಕ ಸಂಸ್ಥೆ, ಪೇಮೆಂಟ್ ಬ್ಯಾಂಕ್ ಗಳನ್ನು ಹೊರತುಪಡಿಸಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಅಂಚೆ ಕಚೇರಿ, ಷೇರುಪೇಟೆಗಳಿಂದಲೂ ಬಾಂಡ್ ಖರೀದಿಸಬಹುದು.
* 8 ವರ್ಷ ಅವಧಿಯ ಬಾಂಡ್ ಗಳ ಪೈಕಿ ಅವಧಿಗೆ ಮುನ್ನ ಬಾಂಡ್ ಹಿಂಪಡೆಯಲು ಅವಕಾಶ ನೀಡಿದ್ದರೂ ಐದನೇ ವರ್ಷ ಅವಧಿ ಆರಂಭ ಹಾಗೂ ಮುಂದಿನ ಬಡ್ಡಿದರ ಪೇಮೆಂಟ್ ದಿನಕ್ಕೆ ಅನುಗುಣವಾಗಿ ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+