Summer health tips; ಆರೋಗ್ಯ ಕಾಪಾಡುವ ಅನಾನಸ್

ಬೇಸಿಗೆಯ ದಿನಗಳಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಹಣ್ಣಿನ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿ ಹಣ್ಣಿನಲ್ಲಿ ತನ್ನದೇ ಆದ ಪೋಷಕಾಂಶಗಳು ಇರುವುದರಿಂದ ಅವು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಆದ್ದರಿಂದ ನಮ್ಮ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳನ್ನು ಸೇವಿಸುವ ರೂಢಿ ಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು ಮಂದಿ ಹಣ್ಣುಗಳಿಗೆ ಬದಲಾಗಿ ಬಾಯಿಗೆ ರುಚಿಯಾಗುವ ಬೇರೆ ಬೇರೆ ಪದಾರ್ಥಗಳನ್ನು ಸೇವಿಸುತ್ತಾರೆ.

ಇವು ಕೆಲವೊಮ್ಮೆ ನಮಗೆ ತೊಂದರೆ ನೀಡಬಹುದು. ಆದರೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಹಣ್ಣುಗಳನ್ನು ಬೇಸಿಗೆಯ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಕೆ ಸೇವಿಸಬೇಕು? ಎಂಬ ಪ್ರಶ್ನೆಗಳು ಕಾಡುವುದು ಸಹಜ. ಇದಕ್ಕೆ ಉತ್ತರವೂ ಸುಲಭವಾಗಿದೆ.

ಬೇಸಿಗೆಯಲ್ಲಿ ವಾತಾವರಣದ ಉಷ್ಣತೆಗೆ ದೇಹ ತಂಪನ್ನು ಬಯಸುತ್ತದೆ. ಈ ಸಂದರ್ಭ ಹಣ್ಣು ಸೇವನೆಯಿಂದ ದೇಹದ ಒಂದಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗೆಂದು ಎಲ್ಲ ಹಣ್ಣುಗಳು ನಮ್ಮ ದೇಹಕ್ಕೆ ಒಗ್ಗದೆಯೂ ಇರಬಹುದು. ಇಂತಹ ಸಂದರ್ಭ ಅಂತಹ ಹಣ್ಣುಗಳನ್ನು ತ್ಯಜಿಸಿ, ದೇಹಕ್ಕೆ ಹೊಂದುವ ಮತ್ತು ಅವುಗಳಲ್ಲಿರುವ ಆರೋಗ್ಯಕಾರಿ ಗುಣಗಳನ್ನು ಅರಿತುಕೊಂಡು ಸೇವನೆ ಮಾಡಬೇಕಾಗುತ್ತದೆ.

ಯಾವ ಹಣ್ಣುಗಳನ್ನು ಸೇವಿಸಬೇಕು

ಯಾವ ಹಣ್ಣುಗಳನ್ನು ಸೇವಿಸಬೇಕು

ಉದಾಹರಣೆಗೆ ದೇಹದ ಉಷ್ಣಾಂಶ ಹೆಚ್ಚಾದಾಗ ಉಷ್ಣ ಗುಣದ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭ ತಂಪು ಗುಣದ ಹಣ್ಣನ್ನು ಸೇವಿಸಬೇಕಾಗುತ್ತದೆ. ಹಾಗಾಗಿ ಹಣ್ಣಿನ ಗುಣಗಳನ್ನು ಅರಿತುಕೊಂಡು ಸೇವಿಸುವುದನ್ನು ಕಲಿತುಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹಣ್ಣುಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆಯಲ್ಲದೇ, ಇದೇ ಸಮಯದಲ್ಲಿ ಅದಕ್ಕೆ ಹೆಚ್ಚಿನ ಬೇಡಿಕೆಯೂ ಹೆಚ್ಚಾಗುತ್ತದೆ. ಈ ವೇಳೆ ದುಬಾರಿ ಹಣ ನೀಡಿ ಖರೀದಿಸಿ ಸೇವಿಸುವುದು ಕಷ್ಟವಾಗ ಬಹುದು. ಆಗ ಹೆಚ್ಚು ಬೆಲೆಯಿಲ್ಲದ ನಮ್ಮ ಕೈಗೆಟುಕುವ ದರದಲ್ಲಿ ದೊರೆಯುವ ಹಣ್ಣುಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಬೇಸಿಗೆ ಮಾತ್ರವಲ್ಲದೆ ವರ್ಷದ ಎಲ್ಲ ಸಮಯಗಳಲ್ಲೂ ದೊರೆಯುವ ಹಣ್ಣುಗಳ ಪೈಕಿ ಅನಾನಸ್ ಕೂಡ ಒಂದಾಗಿದ್ದು, ಇತರೆ ಹಣ್ಣುಗಳಿಗೆ ಹೋಲಿಸಿದರೆ ತುಸು ಬೆಲೆಯೂ ಕಡಿಮೆಯಿರುತ್ತದೆ. ಹೀಗಾಗಿ ಇದನ್ನು ಎಲ್ಲರೂ ಉಪಯೋಗಿಸಲು ಸಾಧ್ಯವಾಗುತ್ತದೆ.

ಹೆಚ್ಚು ತೇವಾಂಶ ಹೊಂದಿದ ಅನಾನಸ್

ಹೆಚ್ಚು ತೇವಾಂಶ ಹೊಂದಿದ ಅನಾನಸ್

ಅನಾನಸ್ ಹೆಚ್ಚು ತೇವಾಂಶ ಹೊಂದಿದ್ದು, ಬೇಸಿಗೆಯಲ್ಲಿ ಸೇವಿಸುವುದರಿಂದ ಒಂದಷ್ಟು ದಾಹವನ್ನು ನಿಗ್ರಹಿಸುವುದಲ್ಲದೆ, ಬಹಳಷ್ಟು ಪೋಷಕಾಂಶಗಳು ದೇಹಕ್ಕೆ ಒದಗಿಸಿ ಆರೋಗ್ಯ ಕಾಪಾಡುತ್ತದೆ. ಇದರಲ್ಲಿರುವ ಪೋಷಕಾಂಶ ಮತ್ತು ಆರೋಗ್ಯಕಾರಿ ಗುಣಗಳನ್ನು ನೋಡಿದ್ದೇ ಆದರೆ ಇದು ಮನುಷ್ಯನ ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಎಂಬುದು ಗೊತ್ತಾಗಿ ಬಿಡುತ್ತದೆ.ಉದಾಹರಣೆಗೆ ನೂರು ಗ್ರಾಂ ಅನಾನಸ್ ಹಣ್ಣಿನಲ್ಲಿ ಏನೇನು ಇದೆ ಎಂಬುದನ್ನು ಗಮನಿಸಿದರೆ 87.8 ಗ್ರಾಂನಷ್ಟು ತೇವಾಂಶವೇ ಇರುತ್ತದೆ. ಇದು ಬೇಸಿಗೆಯಲ್ಲಿ ದಾಹ ತಣಿಸಲು ಸಹಕಾರಿಯಾಗುತ್ತದೆ.

ಇನ್ನು ಇತರೆ ಪೋಷಕಾಂಶಗಳನ್ನು ನೋಡುವುದಾದರೆ ಸಸಾರಜನಕ 0.4 ಗ್ರಾಂ, ಮೇದಸ್ಸು 0.1 ಗ್ರಾಂ, ಖನಿಜಾಂಶ 0.4, ಕಾರ್ಬೋಹೈಡ್ರೇಟ್ 19.8 ಗ್ರಾಂ, ಕ್ಯಾಲ್ಸಿಯಂ 20 ಮಿ.ಗ್ರಾಂ, ಕಬ್ಬಿಣ 1.2 ಮಿ.ಗ್ರಾಂ, ರೋಬೋಪ್ಲಾವಿನ್ 0.12 ಮಿ.ಗ್ರಾಂ, ಪಾಸ್ಪರಸ್ 9.0 ಮಿ.ಗ್ರಾಂ, ಥಿಯಾಮಿನ್ 0.2 ಮಿ.ಗ್ರಾಂ, ನಿಯಾಸಿನ್ 0.1 ಮಿ.ಗ್ರಾಂ ಮತ್ತು ಸಿ ಜೀವಸತ್ವ 39 ಮಿ.ಗ್ರಾಂ ಇರುವುದನ್ನು ನಾವು ಕಾಣಬಹುದಾಗಿದೆ.

ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ

ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ

ಇಷ್ಟೇ ಅಲ್ಲದೆ, ಅನಾನಸ್ ಯಾವುದೆಲ್ಲ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ನೋಡುವುದಾದರೆ ಉರಿಮೂತ್ರದಿಂದ ಬಳಲುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಉರಿಮೂತ್ರದ ಸಮಸ್ಯೆ ಮತ್ತು ಸಮರ್ಪಕವಾಗಿ ಮೂತ್ರ ವಿಸರ್ಜನೆಯಾಗದ ಸಮಸ್ಯೆಯಿಂದ ಬಳಲುವವರು ಹಣ್ಣನ್ನು ಸೇವಿಸುತ್ತಾ ಬಂದರೆ ಸಮಸ್ಯೆಗೆ ಪರಿಹಾರ ಸಿಗಲಿದೆಯಂತೆ. ದೇಹಕ್ಕೆ ಸರಿಯಾದ ಜೀವಸತ್ವ ದೊರೆಯದೆ ವಸಡಿನ ರಕ್ತಸ್ರಾವದಿಂದ ಬಳಲುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಯಕೃತ್ ತೊಂದರೆ, ಅಜೀರ್ಣದ ಸಮಸ್ಯೆಯನ್ನು ಅನುಭವಿಸುವವರು ಅನಾನಸ್ ಹಣ್ಣಿಸ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕಾಮಾಲೆ ರೋಗ ದೂರವಾಗಲಿದೆ

ಕಾಮಾಲೆ ರೋಗ ದೂರವಾಗಲಿದೆ

ಕಾಮಾಲೆ ರೋಗವನ್ನು ದೂರ ಮಾಡಬೇಕಾದರೆ ಅನಾನಸ್ ಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಜೇನುತುಪ್ಪದಲ್ಲಿ ವಾರಗಳ ಕಾಲ ನೆನೆಸಿಟ್ಟು ದಿನಕ್ಕೆರಡು ಬಾರಿ ಸೇವಿಸಬಹುದಾಗಿದೆ. ಸಿಗರೇಟ್ ಸೇವಿಸುವುದರಿಂದಾಗುವ ತೊಂದರೆಗಳನ್ನು ಸರಿಪಡಿಸಲು ಅನಾನಸ್ ಹಣ್ಣು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಗಂಟಲು ರೋಗಗಳಿಗೂ ಉತ್ತಮ ಔಷಧಿಯಾಗಿದೆ. ರಕ್ತ ಹೀನತೆ, ಹೊಟ್ಟೆತೊಳೆಸುವಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.

ಹಣ್ಣಿನ ರಸವನ್ನು ಲೇಪನ ಮಾಡುವುದರಿಂದ ಕಜ್ಜಿತುರಿಕೆಯಂತಹ ಚರ್ಮರೋಗವು ನಿಯಂತ್ರಕ್ಕೆ ಬರಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅನಾನಸ್ ಆರೋಗ್ಯದ ದೃಷ್ಠಿಯಿಂದ ಉತ್ತಮವಾಗಿರುವುದರಿಂದ ಬೇಸಿಗೆಯಲ್ಲಿ ಆರೋಗ್ಯದಲ್ಲಿ ಕಂಡು ಬರಬಹುದಾದ ಕೆಲವೊಂದು ಸಮಸ್ಯೆಗಳನ್ನು ಪರಿಹಾರ ಮಾಡಲು ಇದು ಸಹಕಾರಿಯಾಗಿದೆ. ಹೀಗಾಗಿ ಹಣ್ಣನ್ನು ನೇರವಾಗಿ ಅಥವಾ ಜ್ಯೂಸ್ ಜತೆಗೆ ವಿವಿಧ ಖಾದ್ಯಗಳನ್ನು ತಯಾರಿಸಿಯೂ ಸೇವನೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+