Sparrow video: ಪತ್ನಿಗೆ ಎಂದಾದ್ರು ತಿಂಡಿ ತಿನಿಸಿದ್ದೀರಾ? ಗುಬ್ಬಿ ತಿನಿಸುತ್ತೆ ನೋಡಿ- ಪುರುಷರು ನೋಡಲೇಬೇಕಾದ ವಿಡಿಯೋ
ಪ್ರತಿದಿನ ಒಂದಲ್ಲಾ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನೋಡುಗರನ್ನು ಆಶ್ಚರ್ಯಗೊಳಿಸುತ್ತವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಗುಬ್ಬಿಯೊಂದು ತನ್ನೊಂದಿಗಿದ್ದ ಮತ್ತೊಂದು ಗುಬ್ಬಿಗೆ ತಿಂಡಿ ತಿನ್ನಿಸುವುದು ಕಂಡು ಬಂದಿದೆ. ಈ ವೀಡಿಯೋ ಬಿರುಗಾಳಿಯಂತೆ ವೈರಲ್ ಆಗಿದೆ.
ವೀಡಿಯೋದಲ್ಲಿ ಟೇಬಲ್ ಮೇಲೆ ಇರುವ ಪ್ಲೇಟ್‌ನಲ್ಲಿ ಬ್ರೆಡ್ ಇದೆ. ಈ ಟೇಬಲ್ ಖಾಲಿ ಇಲ್ಲ. ಟೇಬಲ್ ಮುಂದೆ ಇಬ್ಬರು ಮಹಿಳೆಯರು ಕುಳಿತಿದ್ದಾರೆ. ಹೀಗಿದ್ದರೂ ಟೇಬಲ್‌ಗೆ ಪುರ್ರ... ಅಂತ ಹಾರಿ ಬಂದು ಚಿವ್... ಚಿವ್.... ಎನ್ನುವ ಗುಬ್ಬಿಯೊಂದು ನೇರವಾಗಿ ತಟ್ಟೆ ಬಳಿ ಬಂದು ತನ್ನೊಂದಿಗೆ ಇದ್ದ ಮತ್ತೊಂದು ಗುಬ್ಬಿಗೆ ಬ್ರೆಡ್ ಬಾಯಲ್ಲಿಟ್ಟು ತಿನಿಸುತ್ತದೆ.

ಗುಬ್ಬಿಗೆ ಜನ ಇದ್ದಾರೆ ಎನ್ನುವ ಭಯ ಇದ್ದಂತೆ ವಿಡಿಯೋದಲ್ಲಿ ಕಾಣಿಸುವುದಿಲ್ಲ. ಜೊತೆಗೆ ಎರಡೂ ಗುಬ್ಬಿಗಳು ಒಟ್ಟಿಗೆ ಬ್ರೆಡ್ ತಿನ್ನಬಹುದಿತ್ತು. ಆದರೆ ಒಂದು ಗುಬ್ಬಿ ಟೇಬಲ್ ಬದಿ ನಿಂತಿದ್ದರೆ ಇನ್ನೊಂದು ಗುಬ್ಬಿ ತಟ್ಟೆ ಬಳಿ ಧೈರ್ಯವಾಗಿ ಬಂದು ಬ್ರೆಡ್ ಕಚ್ಚಿಕೊಂಡು ಹೋಗಿ ಇನ್ನೊಂದು ಗುಬ್ಬಿ ಬಾಯಲ್ಲಿಡುತ್ತದೆ. ಇದನ್ನು ಟೇಬಲ್ ಮುಂದೆ ಕುಳಿತವರೇ ವಿಡಿಯೋ ಮಾಡಿದ್ದಾರೆ.
ಗುಬ್ಬಿ ವಿಡಿಯೋ ಮಾಡುವಾಗಲೂ ಹೆದರಿಕೊಂಡಿಲ್ಲ. ತಟ್ಟೆ ತನ್ನದೇ ಎಂಬಂತೆ ಬ್ರೆಡ್ ಕಚ್ಚಿಕೊಂಡು ಹೋಗಿ ಮೂರು ಬಾರಿ ಮತ್ತೊಂದು ಗುಬ್ಬಿಗೆ ತಿನ್ನಿಸುತ್ತದೆ. ಮೊದಲೆರೆಡು ಬಾರಿ ಬ್ರೆಡ್ ಸ್ವಲ್ಪ ಕಚ್ಚಿಕೊಂಡು ಹೋಗಿ ಒಂದೇ ಬಾರಿಗೆ ಬಾಯಲ್ಲಿ ಇಡುತ್ತದೆ. ಮೂರನೇ ಬಾರಿ ಹೆಚ್ಚು ಬ್ರೆಡ್ ಕಚ್ಚಿಕೊಂಡು ಹೋಗಿ ಸ್ವಲ್ಪ ಸ್ವಲ್ಪ ಮತ್ತೊಂದು ಗುಬ್ಬಿಗೆ ತಿನ್ನಿಸುತ್ತದೆ.
A male sparrow taking his wife to the cafe for breakfast.
— Figen (@TheFigen_) May 9, 2024
He's more romantic than most men. 😂 pic.twitter.com/7DpPFqbNLM
ಹೀಗೆ ವಿಡಿಯೋದಲ್ಲಿ ಜನರಿದ್ದಾರೆನ್ನುವ ಭಯವಿಲ್ಲದೆ ಗಂಡು ಗುಬ್ಬಿ ಹೆಣ್ಣು ಗುಬ್ಬಿಗೆ ಬ್ರೆಡ್ ತಿನ್ನಿಸುತ್ತದೆ. ಟೇಬಲ್ ಮೇಲೆ ಕಾಫಿ ಕಪ್, ತಿಂದು ಉಳಿದಿರುವ ಬ್ರೆಡ್ ಹಾಗೂ ಟಿಶ್ಯೂ ಪೇಪರ್, ಕನ್ನಡ ಇಡಲಾಗಿರುವುದು ಕಾಣಬಹುದು. ಗುಬ್ಬಿಗಳು ಹೆದರದಿರಲಿ ಎಂದು ಟೇಬಲ್ ಮುಂದೆ ಕುಳಿತವರು ಮತ್ತೊಂದು ಬದಿ ಸರಿದು ಕುಳಿತಿದ್ದಾರೆ. ಮತ್ತೊಬ್ಬರು ಮಹಿಳೆ ವಿಡಿಯೋ ಮಾಡಿದ್ದಾರೆ. ಜೊತೆಗೆ ಗುಬ್ಬಿಗಳ ನಡುವಿನ ಪ್ರೀತಿ ಕಂಡು ಖುಷಿಪಟ್ಟಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನುವುದು ಖಚಿತವಾಗಿಲ್ಲ.

ಎರಡು ಗುಬ್ಬಿಗಳಲ್ಲಿ ಬ್ರೆಡ್ ತಿನ್ನಿಸುವ ಗುಬ್ಬಿ ಗಂಡು ಗುಬ್ಬಿ, ಬೆಡ್ ತಿನ್ನುವ ಗುಬ್ಬಿ ಹೆಣ್ಣು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಾಗಿ ಇದನ್ನು ನೆಟ್ಟಿಗರು ಪತಿ ಪತ್ನಿಯ ನಡುವಿನ ಪ್ರೀತಿ ಕಾಳಜಿಗೆ ಹೋಲಿಸಿದ್ದಾರೆ. ಅಲ್ಲದೆ ಈ ವಿಡಿಯೋ ಬಾರೀ ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಪತ್ನಿ ಪತ್ನಿಯ ನಡುವಿನ ಸಂಬಂಧ ಇದ್ದರೆ ಹೀಗಿರಬೇಕು ಎಂದು ಜನ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕಾಮೆಂಟ್ ಹೀಗಿದೆ....
ಈ ವಿಡಿಯೋವನ್ನು 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಲಕ್ಷಾಂತರ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕಾಮೆಂಟ್‌ಗಳು ವೀಡಿಯೊಗಿಂತ ತಮಾಷೆಯಾಗಿವೆ. ಕಾಮೆಂಟ್‌ನಲ್ಲಿ ತಾವು ಕೂಡ ತಮ್ಮ ಸಂಗಾತಿಯನ್ನು ಹೀಗೆ ಪ್ರೀತಿಸುವುದಾಗಿ ಹೇಳಿಕೊಂಡಿದ್ದಾರೆ. 'ನಾನೂ ಕೂಡ ಈ ಗುಬ್ಬಚ್ಚಿ ಆಗಬೇಕಿತ್ತು' ಎಂದು ಬರೆದಿದ್ದಾರೆ.
ಒಬ್ಬರು ಬಾಯಾರಿಕೆಯಿಂದ ಬಳಲುತ್ತಿದ್ದ ಹಕ್ಕಿಯ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ನೀರಿನ ಬಾಟಲಿಯಿಂದ ನೀರು ಕೊಟ್ಟಾಗ ಅದು ಕುಡಿಯುತ್ತದೆ. ಈ ಮನುಷ್ಯನು ಹಕ್ಕಿಗೆ ಹೊಸ ಜೀವವನ್ನು ನೀಡುತ್ತಿರುವ ರೀತಿ ವಿಡಿಯೋ ತುಂಬಾ ಅದ್ಭುತವಾಗಿದೆ.












Click it and Unblock the Notifications