ಜೀವನೋತ್ಸಾಹ ಕಡಿಮೆಯಾಗಿದ್ಯಾ? ತೇಜಸ್ವಿಯವರ ಈ ಪುಸ್ತಕ ಓದಿ
ಜೀವನದಲ್ಲಿ ಜೀವನೋತ್ಸಾಹ ಇಲ್ಲದಿದ್ದರೆ ಪ್ರತಿಯೊಂದು ವಸ್ತು-ವಿಷಯವು ನೀರಸವಾಗಿ ಗೋಚರವಾಗುತ್ತದೆ. ಅದರಲ್ಲೂ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನೋತ್ಸಾಹ ನಮ್ಮಲ್ಲಿ ಪುಟಿಯದಿದ್ದರೆ ಜೀವನ ಅಲ್ಲಿಗೆ ತಟಸ್ಥವಾಗಿ ನಿಂತು ಬಿಡುತ್ತದೆ. ಹೀಗಾಗಿ ಮನುಷ್ಯನಿಗೆ ಜೀವನೋತ್ಸಾಹ ಎಂಬುದು ದಿವ್ಯೌಷಧಿ ಇದ್ದಂಗೆ.
ಹಿರಿಯ ಜೀವನ ಅನುಭವಗಳನ್ನು ಕೇಳುವುದರಿಂದ, ಸಿನೆಮಾ ರೂಪದಲ್ಲಿ ನೋಡುವುದರಿಂದ ಹಾಗೂ ಪುಸ್ತಕಗಳಲ್ಲಿ ಓದುವುದರಿಂದ ಜೀವನೋತ್ಸವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದರಲ್ಲಿ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಅನುವಾದ ಮಾಡಿರುವ ಪ್ಯಾಪಿಲಾನ್ ಕೃತಿಯು ನಮ್ಮೊಳಗಿನ ಜೀವನೋತ್ಸಾಹ ಎಂದೂ ಬತ್ತದಂತೆ ಸದಾ ಸ್ಫೂರ್ತಿ ಆಗಬಲ್ಲದು. ಆ ಪುಸ್ತಕದಲ್ಲಿ ಅಂತಹದ್ದೇನಿದೆ ಅಂತ ನೀವು ಕೇಳಬಹುದು. ಈ ಸ್ಟೋರಿ ಓದಿ.

ಸತತ ಸೋಲಿನ ನಡುವೆಯೂ ಸೋಲದ ಸಮಚಿತ್ತ ಭಾವ
ಫ್ರಾನ್ಸ್ ದೇಶದ ನಾಗರಿಕನಾದ ಪ್ಯಾಪಿಲಾನ್ ತಾನು ಮಾಡದ ತಪ್ಪಿಗೆ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ. ಶಿಕ್ಷೆ ಪ್ರಕಟವಾದ ಮರು ದಿನದಿಂದಲೇ ಜೀವಾವಧಿ ಶಿಕ್ಷೆ ಅನುಭವಿಸುವುದು ಸಾಯುವುದಕ್ಕೆ ಸಮ ಎಂದೆನಿಸಿ, ಜೈಲಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ.
ಮೂರು-ನಾಲ್ಕು ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಸಿಕ್ಕಿ ಬೀಳುತ್ತಾನೆ. ಪ್ರತಿ ಬಾರಿ ವಿಫಲವಾದಗಲೂ ತನ್ನ ಮನಸನ್ನು ತಾನೇ ಸಂತೈಸಿಕೊಳ್ಳುತ್ತಾನೆ. ಈ ಸಲ ವಿಫಲವಾದರೂ ಮುಂದಿನ ಸಲ ಸಫಲನಾಗುತ್ತೇನೆಂದು ತನ್ನೊಳಗಿನ ಜೀವನೋತ್ಸಾಹವನ್ನು ಕುಗ್ಗದಂತೆ ಜೋಪಾನ ಮಾಡಿಕೊಳ್ಳುತ್ತಾನೆ.
ಬ್ಲಾಕ್ ಹೋಲ್ ಎಂಬ ಕಾರಾಗೃಹ ಮೆಟ್ಟಿನಿಂತ ಪ್ಯಾಪಿಲಾನ್
ಸಮುದ್ರ ಮಧ್ಯ ಭಾಗದ ದ್ವೀಪ ಪ್ರದೇಶದ ಕಾರಾಗೃಹದಿಂದ ಪ್ಯಾಪಿಲಾನ್, ತನ್ನದೇ ಚಾಣಾಕ್ಷತನದ ಬುದ್ಧಿ ಉಪಯೋಗಿಸಿ ತಪ್ಪಿಸಿಕೊಳ್ಳಲು ಸಫಲನಾಗುತ್ತಾನೆ. ಸಣ್ಣ ದೋಣಿಯಲ್ಲೇ ದೊಡ್ಡ ದೊಡ್ಡ ಅಲೆಗಳನ್ನು ಮೆಟ್ಟಿನಿಂತು ನೂರಾರು ಕಿಮೀ ಸಾಗುವ ಪರಿ ರೋಮಾಂಚನವಾದದ್ದು. ಆದರೂ ಫ್ರಾನ್ಸ್ ಪೊಲೀಸರು ಪ್ಯಾಪಿಲಾನ್‌ರನ್ನು ಬಂಧಿಸುತ್ತಾರೆ.
ಈ ಬಂಧನದ ನಂತರ ಮೋಸ್ಟ್ ಡೇಂಜರಸ್ ಪಟ್ಟಿಗೆ ಸೇರಿದ ಪ್ಯಾಪಿಲಾನ್‌ರನ್ನು ಬ್ಲಾಕ್‌ಹೋಲ್‌ನಲ್ಲಿ ಇಡಲಾಗುತ್ತದೆ. ಕೇವಲ ನಾಲ್ಕೈದು ಅಡಿ ಸುತ್ತಳತೆಯ ಕೋಣೆಯ ಬ್ಲಾಕ್‌ಹೋಲ್‌ನಲ್ಲಿ ಸರಿಯಾಗಿ ನಿಲ್ಲದ ಸ್ಥಿತಿಯಲ್ಲೂ, ತನ್ನ ಮಾನಸಿಕ ಸ್ಥಿತಿಯನ್ನು ಜೋಪಾನ ಮಾಡಿಕೊಳ್ಳುತ್ತಾನೆ.
ಇತರೆ ಬ್ಲಾಕ್ ಹೋಲ್ ನಲ್ಲಿದ್ದ ಖೈದಿಗಳು ವಿಚಿತ್ರವಾಗಿ ಕಿರುಚಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಒಬ್ಬೊಬ್ಬರೇ ಸಾಯುತ್ತಿರುತ್ತಾರೆ. ಅದರ ನಡುವೆಯೂ ಪ್ಯಾಪಿಲಾನ್, ಒಂದಲ್ಲ ಒಂದು ದಿನ ನಾನು ಇಲ್ಲಿಂದ ತಪ್ಪಿಸಿಕೊಂಡು ಹೋಗಬಲ್ಲೆ ಎಂಬ ಆತ್ಮವಿಶ್ವಾಸವನ್ನು ಜೋಪಾನವಾಗಿಟ್ಟುಕೊಳ್ಳುತ್ತಾನೆ.
ಕೊನೆಗೂ ಬ್ಲಾಕ್‌ಹೋಲ್‌ನಿಂದ ಹೊರಬರಲು ಸಫಲನಾಗುತ್ತಾನೆ. ಪ್ಯಾಲಿಲಾನ್‌ನನ್ನು ಬಂಧಿಸಿಡಲಾಗಿದ್ದ ಸಮುದ್ರ ಮಧ್ಯದ ದ್ವೀಪದಿಂದಲೂ ಕೇವಲ ತೆಂಗಿನ ಚಿಪ್ಪುಗಳನ್ನು ಒಳಗೊಂಡ ಒಂದು ಗೋಣಿ ಚೀಲದಿಂದ ಸಮುದ್ರವನ್ನು ದಾಟಲು ಯಶಸ್ವಿಯಾಗುತ್ತಾನೆ.
ಜಗತ್ತಿನಾದ್ಯಂತ ಹತ್ತಾರು ಭಾಷೆಗೆ ಅನುವಾದಗೊಂಡಿರುವ ಪ್ಯಾಪಿಲಾನ್ ಕೃತಿ, ಇಲ್ಲಿಯವರೆಗೂ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಬದುಕಿನ ಸ್ಫೂರ್ತಿಗೆ, ಪ್ರೇರಣೆಗೆ ಅತ್ಯುತ್ತಮ ಕೃತಿಯೆಂದೇ ಸಾಬೀತಾಗಿದೆ.












Click it and Unblock the Notifications