Reels: ಬೇರೆಯವರ ಯಶಸ್ಸು ನೋಡಿ ಅಳಬೇಡ... ಸ್ಕೂಲ್‌ಗೆ ಹೋಗಪ್ಪ ಕಂದ ಎಂದ ಕನ್ನಡಿಗರು!
ರೀಲ್ಸ್ ದುನಿಯಾದಲ್ಲಿ ಎಲ್ಲಿ ನೋಡಿದರೂ, ಬೇರೆಯವರ ಯಶಸ್ಸು ನೋಡಿ ಅಳಬೇಡ... ಶ್ರಮಪಟ್ಟರೆ ನಿನ್ನ ಯಶಸ್ಸು ನೋಡಿ ಪ್ರಪಂಚವೇ ಸಂಭ್ರಮಿಸುತ್ತದೆ ಎಂದು ಹೇಳಿರುವ ಹುಡುಗನದ್ದೇ ಸುದ್ದಿ. ಕನ್ನಡಿಗರು ಈ ವಿಡಿಯೋವನ್ನು ನೋಡಿ ನಗ್ತಿದ್ದಾರೆ.
ಬೇರೆಯವರ ಯಶಸ್ಸು ನೋಡಿ ಅಳಬೇಡಿ ಅಂತ ತಪ್ಪು ತಪ್ಪು ಕನ್ನಡ ಮಾತನಾಡಿ ರೀಲ್ಸ್ ನಲ್ಲಿ ಫೇಮಸ್ ಆಗಿರುವ ಈ ಹುಡುಗ ಕೇರಳದ ವಯನಾಡ್‌ನ ಹುಡುಗ. ಇತ ಈಗ ಎಲ್ಲಾ ಭಾಷೆಗಳಲ್ಲೂ ಮೋಟಿವೇಶನ್ ವಿಡಿಯೋಗಳನ್ನು ಮಾಡುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ಈತನ ಬಗ್ಗೆ ಲಘು ಹಾಸ್ಯದ ಟ್ರೋಲ್‌ಗಳು ಬರುತ್ತಿವೆ. ಇದರ ಮಧ್ಯೆ ಆ ಹುಡ್ಗ ಮತ್ತೆ ವಿಡಿಯೋಗಳನ್ನ ಮಾಡ್ತಾ ಇದಾನೆ.

ಈ ರೀತಿ ರಾತ್ರೋರಾತ್ರಿ ಫೇಮಸ್ ಆಗಿರುವ ಈ ಹುಡುಗ ಮೂಲತಃ ಕೇರಳದ ವಯನಾಡ್ ಜಿಲ್ಲೆಯವ. ಬೆಂಜಮಿನ್ ಪಿ ಜಾಯ್ (benjamin p joy) ಈ ಹುಡುಗನ ಹೆಸರು. ಈತ ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ರೀಲ್ಸ್ ಹಾಗೂ ವಿಡಿಯೋಗಳನ್ನು ಮಾಡಿದ್ದು, ಈ ರೀಲ್ಸ್ ಫೇಮಸ್ ಆಗಿರುವುದೇ ಈ ಹುಡುಗನ ಕ್ರಿಯೇಟಿವಿಟಿ ಹಾಗೂ ಸ್ವಲ್ಪ ತಪ್ಪು ಉಚ್ಛಾರಣೆಗಳಿಂದ.
ಕನ್ನಡದ ರೀಲ್ಸ್‌ಗಳಲ್ಲಿ ಟ್ರೋಲ್ಸ್‌ಗಳಲ್ಲೂ ಇವನದ್ದೇ ವಿಡಿಯೋಗಳೂ ಹಾಗೂ ಸಂಭಾಷಣೆಗಳು ಟ್ರೋಲ್ ಆಗುತ್ತಿವೆ. ಇನ್ನು ಈ ಹುಡುಗ ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂನಲ್ಲೂ ಟ್ರೋಲ್ ಆಗ್ತಿದ್ದಾನೆ. ಅದಕ್ಕೆ ಕಾರಣ ಇಲ್ಲಿ ಪ್ರಪಂಚ ಎನ್ನುವ ಬದಲು ಪ್ರಭಂಚ ಎಂದಂಗೆ ಅಲ್ಲಿ ಶುಭೋದಯ ಎನ್ನುವುದಕ್ಕೆ ಶಿಬುದಿನ ಅಂತ ಹೇಳಿದ್ದಾನೆ ಅಲ್ಲೂ ಈಗ ಜನ ಶಿಬುದಿನ ಅಂತ ಹೇಳಿ ಟ್ರೋಲ್ ಮಾಡ್ತಾ ಇದ್ದಾರೆ.

ಈ ಹುಡುಗನ ಯುಟ್ಯೂಬ್ ಚಾನೆಲ್‌ನಲ್ಲಿ 13 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 370ಕ್ಕೂ ಹೆಚ್ಚು ವಿಡಿಯೋಗಳನ್ನು ಈ ಹುಡುಗ ಮಾಡಿದ್ದಾನೆ. ಆದರೆ, ಕನ್ನಡದಲ್ಲಿ ಮಾಡಿದ್ದು ಕೆಲವೇ ವಿಡಿಯೋ ಮಾತ್ರ. ಅದೇ ಪ್ರಪಂಚವೇ ಎನ್ನುವ ವಿಡಿಯೋ ಈ ವಿಡಿಯೋ ಆತನನ್ನು ಫೇಮಸ್ ಹಾಗೂ ಟ್ರೋಲ್ ಆಗುವುದಕ್ಕೆ ಕಾರಣವಾಗಿದೆ. ಈಗೆಲ್ಲ ರೀಲ್ಸ್ ಹಾಗೂ ಶಾರ್ಟ್ಸ್‌ನ ಮೂಲಕ ರಾತ್ರಿ ಬೆಳಗಾಗುವುದರ ಒಳಗೆ ಕೆಲವರು ಫೇಮಸ್ ಆಗ್ತಾರೆ. ಈ ಸಾಲಿಗೆ ಇದೀಗ ಬೆಂಜಮಿನ್ ಹೊಸ ಸೇರ್ಪಡೆ.
ಸೂಲ್ಕ್‌ಗೆ ಹೋಗು ಮರಿ ಎಂದ ಕನ್ನಡಿಗರು: ಬೆಂಜಮಿನ್ ಪರೀಕ್ಷೆ ಹಾಗೂ ಯಶಸ್ಸಿನ ವಿಡಿಯೋಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಫನ್ ಸೃಷ್ಟಿ ಮಾಡ್ತಿದೆ. ಇತನ ವಿಡಿಯೋಗಳನ್ನು ಇಟ್ಟುಕೊಂಡು ಉಳಿದವರು ಸಹ ರೀಲ್ಸ್ ಮಾಡುತ್ತಿದ್ದಾರೆ. ನೆಟ್ಟಿಗರು ಲೋ ಮರಿ ನೀನು ಮೊದಲು ಸ್ಕೂಲ್‌ಗೆ ಹೋಗು ಆ ಮೇಲೆ ಬಂದು ಯಶಸ್ಸಿನ ಮೋಟಿವೇಶನ್ ಕೊಡುವಂತೆ ಅಂತ ಹೇಳ್ತಿದ್ದಾರೆ. ಇದೀಗ ಆತ ಮೆಚ್ಚುಗೆಗೆ ನೀನು ಕಾಯಬೇಡ ಎನ್ನುವ ಮತ್ತೊಂದು ವಿಡಿಯೋ ಮಾಡಿದ್ದಾನೆ.
ಮೋಟಿವೇಶನ್ ಕಿಡ್: ಇನ್ನು ಈತ ಮಲಯಾಳಂ, ಕನ್ನಡ, ತೆಲುಗು, ತಮಿಳ್ ಹಾಗೂ ಹಿಂದಿ ಭಾಷೆ ಸೇರಿ ಪಂಚಭಾಷೆಯಲ್ಲಿ ರೀಲ್ಸ್ ಮಾಡುತ್ತಿದ್ದು, ಇದು ಸಿಕ್ಕಾಪಟ್ಟೆ ಟ್ರೋಲ್ಸ್ ಹಾಗೂ ಫೇಮಸ್ ಆಗುತ್ತಿದೆ. ಪಂಚಭಾಷೆಗಳಲ್ಲೂ ಮೋಟಿವೇಶನ್ ವಿಡಿಯೋಗಳನ್ನು ಮಾಡುತ್ತಿದ್ದು, ಇತನನ್ನು ಜನ ಮೋಟಿವೇಶನ್ ಕಿಡ್ ಅಂತಲೂ ಹಾಗೂ ಮೋಟಿವೇಶನ್ ಟ್ರೋಲ್ (Motivation Troll) ಅಂತಲೂ ಹೇಳ್ತಿದ್ದಾರೆ.












Click it and Unblock the Notifications