ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಬಜೆಟ್ ಫ್ರೆಂಡ್ಲಿ ಮೊಬೈಲ್
ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಹಿಡಿತವನ್ನು ಹೊಂದಿರುವ ಕಂಪನಿಗಳಲ್ಲಿ ಚೀನಿ ಕಂಪನಿಗಳು ಸೇರಿವೆ. ಈ ಕಂಪನಿಗಳು ಜಗತ್ತಿನಲ್ಲಿ ಅಗ್ಗದ ಹಾಗೂ ಬೆಸ್ಟ್ ಲುಕ್ಕಿಂಗ್ ಫೋನ್ ಬಿಡುಗಡೆ ಮಾಡಲು ಹೆಸರುವಾಸಿ. ಇದೇ ಪರಿಪಾಠವನ್ನು ಚೀನಾ ಕಂಪನಿ ಮುಂದುವರೆಸಿದ್ದು, ಬಜೇಟ್ ಫ್ರೆಂಡ್ಲಿ ಸೆಗ್ಮೆಂಟ್ ಟಾರ್ಗೆಟ್ ಮಾಡಿ ಮೊಬೈಲ್ ತಯಾರಿಸಿದೆ.
ರೆಡ್‌ಮಿ ವಿಶ್ವದ ಎಲ್ಲ ಮಾರುಕಟ್ಟೆಯಲ್ಲಿ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. Redmi Xiaomi ಜಾಗತಿಕ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಗುರುತಿಸಲಾಗಿದೆ. ರೆಡ್‌ಮಿನ ಈ ಸ್ಮಾರ್ಟ್‌ಫೋನ್ A ಸರಣಿ ಫೋನ್ ಇದಾಗಿದೆ. ಇದನ್ನು ವಿಶೇಷವಾಗಿ ಬಜೆಟ್ ಬಳಕೆದಾರರಿಗಾಗಿ ಹೊರ ತರಲಾಗಿದೆ. ರೆಡ್‌ಮಿಯ ಈ ಫೋನ್ ಅನ್ನು Redmi A3x ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ.

Redmi A3x ನ ವೈಶಿಷ್ಟ್ಯಗಳು
ರೆಡ್‌ಮಿ ಎ3ಎಕ್ಸ್ ಫೋನ್ 6.71 ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದರ ರಿಫ್ರೆಶ್ ದರ 90Hz ಆಗಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಲಾಗಿದೆ. ಇದರಲ್ಲಿ ಕಂಪನಿ Unisoc T603 ಪ್ರೊಸೇಸರ್ ನೀಡುವ ಸಂಭವವಿದೆ. ಈ ಫೋನ್ 3GB ಹಾಗೂ 4GB ರ್ಯಾಮ್ (RAM) ಮತ್ತು 64GB/128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ. ಮೈಕ್ರೊ SD ಕಾರ್ಡ್ ಮೂಲಕ ಫೋನ್‌ನ ಆಂತರಿಕ ಸಂಗ್ರಹಣೆಯನ್ನು 1TB ವರೆಗೆ ಬೆಳಿಸಿಕೊಳ್ಳಬಹುದು.
ಬ್ಯಾಟರಿ ಎಷ್ಟು mAh?
ರೆಡ್‌ಮಿ ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ಆಂಡರ್ಯಾಡ್ 14 ಆಧಾರಿತ ಓಎಸ್ ನೀಡಲಿದೆ. ಅಲ್ಲದೆ ಎರಡು ವರ್ಷಗಳ ಅಪ್‌ಡೇಟ್ ಸಹ ನೀಡಲಿದೆ. ಈ ಫೋನಿನ ಹಿಂಭಾಗದಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾ, ಹಾಗೂ ಸೆಕಂಡರಿ ಕ್ಯಾಮೆರಾ ಲಭ್ಯ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗೆ 5 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.
Redmi A3 ಅನ್ನು ಈಗಾಗಲೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದು 6.1-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ, ಇದು 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಫೋನ್ Unisoc T603 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 5000mAh ಬ್ಯಾಟರಿ ಮತ್ತು 10W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

ಬೆಲೆ ಎಷ್ಟು?
Redmi A3x ನ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಫೋನಿನ ಫೀಚರ್ಸ್ ನೋಡಿದರೆ ಇದರ ಬೆಲೆ ಕೂಡ Redmi A3 ನಂತೆ ಇರಿಸಬಹುದಾಗಿದೆ. ಭಾರತದಲ್ಲಿ ಈ ಫೋನ್‌ನ ಬೆಲೆ 6,999 ರಿಂದ 8,999 ರೂ. ಆಗಿರುವ ಸಂಭವವಿದೆ.
ಮತ್ತೇನು ವಿಶೇಷತೆ
ಡ್ಯುಯಲ್ 4G VoLT
ವೈ-ಫೈ 802.11 b/g/n,
ಬ್ಲೂಟೂತ್ 5.0,
USB ಟೈಪ್- C ಪೋರ್ಟ್
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications