ಶಾಸಕರ ಮೌಲ್ಯ ಮಾಪನ; ಜಮೀರ್ ಅಹ್ಮದ್ ಖಾನ್ ಕಾರ್ಯ ವೈಖರಿಗೆ ಅಂಕ ನೀಡಿ
ಬೆಂಗಳೂರು, ಆಗಸ್ಟ್ 29; ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. 2018ರ ಚುನಾವಣೆಯಲ್ಲಿ ಜನರು ಮತದಾನ ಮಾಡಿ ಆಯ್ಕೆ ಮಾಡಿದ ಶಾಸಕರು ನಾಲ್ಕೂವರೆ ವರ್ಷಗಳಲ್ಲಿ ಮಾಡಿದ್ದೇನು? ಎಂಬುದನ್ನು ಈಗ ಜನರು ಮೌಲ್ಯ ಮಾಪನ ಮಾಡುವ ಸಮಯ ಬಂದಿದೆ.
ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ಆರಂಭಿಸಿದೆ. ಇಲ್ಲಿ ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ಕೊಡಬಹುದು. ಜನರು ತಮ್ಮ ಶಾಸಕರಿಗೆ ಆನ್‌ಲೈನ್ ಮೂಲಕ ಮತದಾನ ಮಾಡಲು ಇದು ಒಂದು ವೇದಿಕೆ.
ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕರ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಈ ಪುಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇತರರು ಸಹ ಮತ ನೀಡುವಂತೆ ಮನವಿ ಮಾಡಬಹುದು. ವಾಟ್ಸಪ್, ಟೆಲಿಗ್ರಾಮ್, ಫೇಸ್‌ಬುಕ್, ಟ್ವೀಟ್ ಮೂಲಕ ಈ ಪುಟವನ್ನು ಶೇರ್ ಮಾಡಿ ಹೆಚ್ಚು ಜನರನ್ನು ತಲುಪುವಂತೆ ಮಾಡಬಹುದು.

ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ನೀಡಲಾಗಿದೆ.
ಈ ಪುಟದಲ್ಲಿ ನೀವು ಬೆಂಗಳೂರು ನಗರದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ವೋಟ್ ಮಾಡಬಹುದಾಗಿದೆ. ವೋಟ್ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ನೀವು ನೀಡಿದ ಸರಾಸರಿ ಅಂಕ ತೋರಿಸುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲು ಲಿಂಕ್ ಸಿಗುತ್ತದೆ.
ಇದು ಚುನಾವಣಾ ಪುಟವಾಗಿದೆ. ಚಾಮರಾಜಪೇಟೆ ಕ್ಷೇತ್ರದ ವಿವರ, 2018ರ ಚುನಾವಣೆಯಲ್ಲಿನ ಅಭ್ಯರ್ಥಿಗಳ ವಿವರ, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಹಿಂದಿನ ಹಲವು ಚುನಾವಣೆಯಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳು, ಪಡೆದ ಮತಗಳು ಸೇರಿದಂತೆ ಇತರ ವಿವರಗಳಿವೆ. ಚುನಾವಣೆ ಹತ್ತಿರವಾಗುತ್ತಿರುವಾಗ ನೀವು ಶಾಸಕರ ಮೌಲ್ಯ ಮಾಪನ ಮಾಡಿ, ಶಾಸಕರಿಗೆ ಮತ ನೀಡಿ, ಪುಟವನ್ನು ಇತರರ ಜೊತೆ ಶೇರ್ ಮಾಡಿ.
ಜಮೀರ್ ಅಹ್ಮದ್ ಖಾನ್ 2018ರ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 65,339 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡರು.
ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಆಹಾರ ಮತ್ತು ನಾಗರಿಕ ಸೌಲಭ್ಯ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವರಾದರು.
ಮೂರು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಚಾಮರಾಜಪೇಟೆಯಲ್ಲಿ ಗೆದ್ದಿದ್ದ ಜಮೀರ್ ಅಹ್ಮದ್ ಖಾನ್, 2016 ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಜೆಡಿಎಸ್‌ನಿಂದ ಅಮಾನತುಗೊಂಡರು. ಬಳಿಕ ಕಾಂಗ್ರೆಸ್ ಸೇರಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರು. ಚುನಾವಣೆಯಲ್ಲಿ ಗೆದ್ದರು.
ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಜಮೀರ್ ಅಹ್ಮದ್ ಖಾನ್ ಜನರಿಗೆ ಸುಲಭವಾಗಿ ಸಿಗುವ ನಾಯಕ. ಕೋವಿಡ್ ಸಂದರ್ಭದಲ್ಲಿಯೂ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಜನರು ಹೇಳುತ್ತಾರೆ. ಅಂತಿಮವಾಗಿ ಜನರೇ ಮತದಾನ ಮಾಡಬೇಕಿದೆ. ನೀವು ನಿಮ್ಮ ಶಾಸಕರ ಕಾರ್ಯವೈಖರಿಗೆ ಮತ ನೀಡಿ, ಪುಟವನ್ನು ಶೇರ್ ಮಾಡಿ.












Click it and Unblock the Notifications